ಕರ್ನಾಟಕ

karnataka

ETV Bharat / city

ರಾಜ್ಯದಲ್ಲಿ ಆಪ್ಟಿಕಲ್ ಫೈಬರ್ ಸೇರಿ ಎಲ್ಲ ಅಳವಡಿಕೆಗಳು ಪೂರ್ಣಗೊಂಡ ಬಳಿಕವೇ ರಸ್ತೆಗಳ ನಿರ್ಮಾಣ ಕಾರ್ಯಕ್ಕೆ ಕ್ರಮ : ಸಿಎಂ ಬೊಮ್ಮಾಯಿ

ಮೊದಲೇ ನಾವು ಕಾಂಗ್ರೆಸ್ ಶಾಸಕರು. ಹೀಗಾಗಿ, ಕಷ್ಟಪಟ್ಟು ಸರ್ಕಾರದಿಂದ ಹಣ ಮಂಜೂರು ಮಾಡಿಸಿಕೊಂಡು ರಸ್ತೆಗಳ ನಿರ್ಮಾಣ ಕಾಮಗಾರಿಯಾಗುವಂತೆ ನೋಡಿಕೊಂಡಿರುತ್ತೇವೆ. ಇಂತಹ ಕಾಲದಲ್ಲಿ ಹೀಗೆ ಮಾಡಿದರೆ ನಾವೇನು ಮಾಡಬೇಕು?ಎಂದು ಪ್ರಶ್ನಿಸಿದರು. ಒಂದು ಸಲ ರಸ್ತೆ ನಿರ್ಮಿಸಿದ ಮೇಲೆ ಕನಿಷ್ಟ ಪಕ್ಷ ಎರಡು ವರ್ಷಗಳ ಕಾಲ ಬೇರೆ ಕಾಮಗಾರಿಗಳಿಗಾಗಿ ರಸ್ತೆ ಅಗೆಯಬಾರದು ಎಂಬ ನಿಯಮವಿದೆ..

road-construction-done-after-opticle-fibre-installation-cm-bommai
ಸಿಎಂ ಬಸವರಾಜ ಬೊಮ್ಮಾಯಿ

By

Published : Feb 15, 2022, 4:49 PM IST

ಬೆಂಗಳೂರು :ರಾಜ್ಯದಲ್ಲಿ ಆಪ್ಟಿಕಲ್ ಫೈಬರ್ ಸೇರಿದಂತೆ ಎಲ್ಲ ಅಳವಡಿಕೆಗಳು ಪೂರ್ಣಗೊಂಡ ನಂತರವೇ ರಸ್ತೆಗಳ ನಿರ್ಮಾಣ ಕಾರ್ಯವನ್ನು ಸರ್ಕಾರ ಕೈಗೆತ್ತಿಕೊಳ್ಳಲಿದೆ ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ.

ವಿಧಾನಸಭೆಯಲ್ಲಿ ಕಾಂಗ್ರೆಸ್ ಶಾಸಕ ಭೈರತಿ ಸುರೇಶ್ ಅವರ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ರಾಜ್ಯದ ಹಲವೆಡೆ ರಸ್ತೆ ಕಾಮಗಾರಿ ನಡೆದ ನಂತರ ಆಪ್ಟಿಕಲ್ ಫೈಬರ್ ಅಳವಡಿಸುವುದು, ನೀರಿನ ಪೈಪ್ ಹಾಕುವುದು ಸೇರಿದಂತೆ ವಿವಿಧ ಕೆಲಸಗಳಿಗಾಗಿ ಪುನಾ: ರಸ್ತೆ ಅಗೆಯುವ ಕೆಲಸ ನಡೆಯುತ್ತಿದೆ. ಈ ಪರಿಪಾಠವನ್ನು ನಿಲ್ಲಿಸಲಾಗುವುದು ಎಂದರು.

ಇನ್ನು ಮುಂದೆ ವಿದ್ಯುತ್ ಇಲಾಖೆ, ಜಲಮಂಡಳಿ ಸೇರಿದಂತೆ ಯಾರೇ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವುದಿರಲಿ, ಮುಂಚಿತವಾಗಿ ಕೆಲಸವನ್ನು ಮುಗಿಸಿ, ಆ ನಂತರವೇ ರಸ್ತೆ ನಿರ್ಮಾಣ ಕಾರ್ಯ ನಡೆಯಬೇಕು. ಹೀಗೆ ಒಂದು ಬಾರಿ ರಸ್ತೆ ನಿರ್ಮಿಸಿದ ಮೇಲೆ ಕನಿಷ್ಟ ಎರಡು ವರ್ಷಗಳ ಕಾಲ ರಸ್ತೆ ಅಗೆಯಬಾರದು ಎಂಬ ನಿಯಮವಿದ್ದರೂ, ಇದು ಸಮರ್ಪಕವಾಗಿ ಜಾರಿಯಾಗುತ್ತಿಲ್ಲ. ಆದರೆ, ಇನ್ನು ಮುಂದೆ ಇದು ಕಟ್ಟುನಿಟ್ಟಾಗಿ ಅನುಷ್ಟಾನಗೊಳ್ಳಲಿದೆ ಎಂದು ಸಿಎಂ ಹೇಳಿದರು.

ಇದಕ್ಕೂ ಮುನ್ನ ಮಾತನಾಡಿದ ಕಾಂಗ್ರೆಸ್ ಸದಸ್ಯ ಭೈರತಿ ಸುರೇಶ್ ಅವರು, ನಾವು ವಿವಿಧ ಯೋಜನೆಗಳಡಿಯಲ್ಲಿ ಸರ್ಕಾರದಿಂದ ಹಣ ಮಂಜೂರು ಮಾಡಿಸಿಕೊಂಡು ಕ್ಷೇತ್ರದಲ್ಲಿ ರಸ್ತೆಗಳನ್ನು ನಿರ್ಮಿಸಿದ್ದೇವೆ. ಆದರೆ, ಇದ್ದಕ್ಕಿದ್ದಂತೆ ಆಪ್ಟಿಕಲ್ ಫೈಬರ್ ಅಳವಡಿಕೆಯ ಹೆಸರಿನಲ್ಲಿ ಕ್ಷೇತ್ರದುದ್ದಕ್ಕೂ ರಸ್ತೆಗಳನ್ನು ಅಗೆಯಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮೊದಲೇ ನಾವು ಕಾಂಗ್ರೆಸ್ ಶಾಸಕರು. ಹೀಗಾಗಿ, ಕಷ್ಟಪಟ್ಟು ಸರ್ಕಾರದಿಂದ ಹಣ ಮಂಜೂರು ಮಾಡಿಸಿಕೊಂಡು ರಸ್ತೆಗಳ ನಿರ್ಮಾಣ ಕಾಮಗಾರಿಯಾಗುವಂತೆ ನೋಡಿಕೊಂಡಿರುತ್ತೇವೆ. ಇಂತಹ ಕಾಲದಲ್ಲಿ ಹೀಗೆ ಮಾಡಿದರೆ ನಾವೇನು ಮಾಡಬೇಕು?ಎಂದು ಪ್ರಶ್ನಿಸಿದರು. ಒಂದು ಸಲ ರಸ್ತೆ ನಿರ್ಮಿಸಿದ ಮೇಲೆ ಕನಿಷ್ಟ ಪಕ್ಷ ಎರಡು ವರ್ಷಗಳ ಕಾಲ ಬೇರೆ ಕಾಮಗಾರಿಗಳಿಗಾಗಿ ರಸ್ತೆ ಅಗೆಯಬಾರದು ಎಂಬ ನಿಯಮವಿದೆ.

ಆದರೆ, ಇಂತಹ ಎಲ್ಲ ನಿಯಮವನ್ನು ಗಾಳಿಗೆ ತೂರಿ ಅಧಿಕಾರಿಗಳು ಮುಂದುವರಿದಿದ್ದಾರೆ. ಹೀಗಾಗಿ, ಸರ್ಕಾರ ಸಂಬಂಧಪಟ್ಟವರಿಗೆ ಸೂಕ್ತ ನಿರ್ದೇಶನ ನೀಡಬೇಕು. ಯಾವ ಕಾರಣಕ್ಕೂ ಮಾಡಿರುವ ರಸ್ತೆಗಳನ್ನು ಎರಡು ವರ್ಷಗಳಿಗಿಂತ ಮುಂಚೆ ಅಗೆಯಬಾರದೆಂದು ಸೂಚಿಸಬೇಕು ಎಂದು ಒತ್ತಾಯಿಸಿದರು.

ಸದಸ್ಯರ ಮಾತಿಗೆ ಸ್ಪಂದಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಇನ್ನು ಮುಂದೆ ಎಲ್ಲ ಅಳವಡಿಕೆಗಳು ಪೂರ್ಣಗೊಂಡ ನಂತರವೇ ರಸ್ತೆ ಕಾಮಗಾರಿಯನ್ನು ಕೈಗೆತ್ತಿಕೊಳ್ಳಬೇಕು ಎಂದು ಸೂಚಿಸಲಾಗುವುದು. ಆಪ್ಟಿಕಲ್ ಫೈಬರ್ ಅಳವಡಿಕೆಯ ನಂತರ ಸಂಬಂಧಿಸಿದ ಸಂಸ್ಥೆಯೇ ರಸ್ತೆ ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿಸಬೇಕು ಎಂದು ಸಿಎಂ ಸಂಬಂಧಪಟ್ಟವರಿಗೆ ಸೂಚನೆ ನೀಡಿದ್ದಾರೆ.

ಇದನ್ನು ಓದಿ :ರಾಜ್ಯದ ಪ್ರಾಥಮಿಕ- ಪ್ರೌಢ ಶಾಲೆಗಳಲ್ಲಿ ಹಿಜಾಬ್ ಗೊಂದಲ ನಿವಾರಿಸಿ: ಕಾಂಗ್ರೆಸ್ ಉಪ ನಾಯಕ ಯು.ಟಿ.ಖಾದರ್ ಒತ್ತಾಯ

ABOUT THE AUTHOR

...view details