ಕರ್ನಾಟಕ

karnataka

ETV Bharat / city

ಬೆಂಗಳೂರಿಂದ ತೈವಾನ್​ಗೆ 4.82 ಟನ್​ ರಕ್ತಚಂದನ ಸಾಗಿಸಲು ಪ್ಲ್ಯಾನ್‌: ಮೂವರು ಅರೆಸ್ಟ್

ವೈಟ್​ಫೀಲ್ಡ್​ನ ಕಂಟೈನರ್ ಡಿಪೋವೊಂದರಲ್ಲಿ ಮೂವರು ಆರೋಪಿಗಳ ತಂಡ ಪ್ಲೈವುಡ್ ಬಾಕ್ಸ್​ನಲ್ಲಿ ರಕ್ತಚಂದನದ ತುಂಡುಗಳನ್ನು ಇರಿಸಿಕೊಂಡು ಸಾಗಣೆ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಕಸ್ಟಮ್ಸ್​ ಅಧಿಕಾರಿಗಳು ದಾಳಿ ನಡೆಸಿ, 2.4 ಕೋಟಿ ರೂಪಾಯಿ ಮೌಲ್ಯದ 4.82 ಟನ್ ರಕ್ತಚಂದನವನ್ನು ವಶಕ್ಕೆ ಪಡೆದಿದ್ದಾರೆ.

red-sand
ರಕ್ತಚಂದನ

By

Published : Feb 21, 2022, 7:16 AM IST

ಬೆಂಗಳೂರು:ತೈವಾನ್‌ಗೆ ರಫ್ತು ಮಾಡಲು ಸಿದ್ಧಪಡಿಸಲಾಗಿದ್ದ ಕೋಟ್ಯಂತರ ರೂಪಾಯಿ ಮೌಲ್ಯದ ರಕ್ತಚಂದನವನ್ನು ಬೆಂಗಳೂರು ಕಸ್ಟಮ್ಸ್ ಅಧಿಕಾರಿಗಳು‌ ದಾಳಿ ಮಾಡಿ ಜಪ್ತಿ ಮಾಡಿದ್ದಲ್ಲದೇ, ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ವೈಟ್​ಫೀಲ್ಡ್​ನ ಕಂಟೈನರ್ ಡಿಪೋವೊಂದರಲ್ಲಿ ಮೂವರು ಆರೋಪಿಗಳ ತಂಡ ಪ್ಲೈವುಡ್ ಬಾಕ್ಸ್​ನಲ್ಲಿ ರಕ್ತಚಂದನದ ತುಂಡುಗಳನ್ನು ಇರಿಸಿಕೊಂಡು ಸಾಗಣೆ ಮಾಡುತ್ತಿದ್ದ ಬಗ್ಗೆ ಮಾಹಿತಿ ಪಡೆದ ಅಧಿಕಾರಿಗಳು ದಾಳಿ ನಡೆಸಿದ್ದು, 2.4 ಕೋಟಿ ರೂಪಾಯಿ ಮೌಲ್ಯದ 4.82 ಟನ್ ರಕ್ತಚಂದನವನ್ನು ವಶಕ್ಕೆ ಪಡೆದಿದ್ದಾರೆ.


ಈ ವೇಳೆ ಮೂವರು ಆರೋಪಿಗಳನ್ನು ಬಂಧಿಸಲಾಗಿದ್ದು, ಇವರು ತೈವಾನ್​ಗೆ ರಕ್ತಚಂದನದ ತುಂಡುಗಳನ್ನು ಸಾಗಣೆ ಮಾಡಲು ಸಿದ್ಧತೆ ನಡೆಸಿಕೊಂಡಿದ್ದರು. ಆರೋಪಿಗಳು ರಕ್ತಚಂದನವನ್ನು ಎಲ್ಲಿಂದ ಸಂಗ್ರಹಿಸಿದ್ದರು ಎಂಬ ಬಗ್ಗೆ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ:ಶಿವಮೊಗ್ಗದಲ್ಲಿ ಭಜರಂಗದಳ ಕಾರ್ಯಕರ್ತನ ಭೀಕರ ಹತ್ಯೆ, ಪೊಲೀಸ್​ ಬಿಗಿ ಭದ್ರತೆ

ABOUT THE AUTHOR

...view details