ಕರ್ನಾಟಕ

karnataka

ETV Bharat / city

ಪರಿಷತ್ ಚುನಾವಣೆ : ಕನಕಪುರದ ನಾರಾಯಣಪುರ ಮತಗಟ್ಟೆಯಲ್ಲಿ ನಾಳೆ ಮರು ಮತದಾನ - mlc election

ಭಾರತ ಚುನಾವಣಾ ಆಯೋಗವು ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ನಾರಾಯಣಪುರ ಮತಗಟ್ಟೆ ಸಂಖ್ಯೆ 205ರಲ್ಲಿ ಡಿಸೆಂಬರ್ 10ರಂದು ನಡೆದ ಮತದಾನವನ್ನು ಅಸಿಂಧು ಎಂದು ಘೋಷಿಸಿದ ಹಿನ್ನೆಲೆಯಲ್ಲಿ ಡಿಸೆಂಬರ್ 13ರಂದು ಮರು ಮತದಾನ ನಡೆಸಲು ನಿರ್ದೇಶಿಸಿದ್ದಾರೆ..

Re voting  at Narayanapura booth of Kanakapura
ಕನಕಪುರದ ನಾರಾಯಣಪುರ ಮತಗಟ್ಟೆಯಲ್ಲಿ ನಾಳೆ ಮರು ಮತದಾ

By

Published : Dec 12, 2021, 7:24 PM IST

ಬೆಂಗಳೂರು: ನಾಳೆ ಮತಗಟ್ಟೆ 205ರಲ್ಲಿ ಮರು ಮತದಾನ ನಡೆಯಲಿದೆ ಎಂದು ಚುನಾವಣಾ ಆಯೋಗ ಘೋಷಣೆ ಮಾಡಿದೆ.

ಬೆಂಗಳೂರು ಗ್ರಾಮಾಂತರ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ರಾಜ್ಯ ವಿಧಾನ ಪರಿಷತ್‌ಗೆ ನಡೆಯುವ ಚುನಾವಣೆಗೆ ಸಂಬಂಧಿಸಿದಂತೆ ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ನಾರಾಯಣಪುರ ಮತಗಟ್ಟೆ ಸಂಖ್ಯೆ 205ರಲ್ಲಿ ಡಿಸೆಂಬರ್ 13ರಂದು ಮರು ಮತದಾನ ನಡೆಯಲಿದೆ.

ಕನಕಪುರದ ನಾರಾಯಣಪುರ ಮತಗಟ್ಟೆಯಲ್ಲಿ ನಾಳೆ ಮರು ಮತದಾ

ಎಂದಿನಂತೆ ಬೆಳೆಗ್ಗೆ 8:00 ರಿಂದ ಸಂಜೆ 4:00 ಗಂಟೆಯವರೆಗೆ ಮರು ಮತದಾನ ನಡೆಯಲಿದೆ ಎಂದು ಬೆಂಗಳೂರು ಗ್ರಾಮಾಂತರ ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ಚುನಾವಣಾಧಿಕಾರಿ ಕೆ. ಶ್ರೀನಿವಾಸ್ ತಿಳಿಸಿದ್ದಾರೆ.

ಇದನ್ನೂ ಓದಿ:ಬೈಕ್​ಗೆ ಕಬ್ಬು ತುಂಬಿದ ಲಾರಿ ಡಿಕ್ಕಿ : ಯುವತಿ ಸಾವು, ತಂದೆಗೆ ಗಾಯ

ಭಾರತ ಚುನಾವಣಾ ಆಯೋಗವು ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ನಾರಾಯಣಪುರ ಮತಗಟ್ಟೆ ಸಂಖ್ಯೆ 205ರಲ್ಲಿ ಡಿಸೆಂಬರ್ 10ರಂದು ನಡೆದ ಮತದಾನವನ್ನು ಅಸಿಂಧು ಎಂದು ಘೋಷಿಸಿದ ಹಿನ್ನೆಲೆಯಲ್ಲಿ ಡಿಸೆಂಬರ್ 13ರಂದು ಮರು ಮತದಾನ ನಡೆಸಲು ನಿರ್ದೇಶಿಸಿದ್ದಾರೆ. ಮತಗಟ್ಟೆ ಸುತ್ತಲು ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ.

ABOUT THE AUTHOR

...view details