ಆನೇಕಲ್: ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿವೆ. ಆದ್ರೆ ಸರ್ಕಾರ ಲಾಕ್ಡೌನ್ ಸಡಿಲಗೊಳಿಸಿ ಕೋವಿಡ್-19 ಬಗ್ಗೆ ತಾತ್ಸಾರ ತಾಳಿದಂತಿದೆ ಎಂದು ಮಾಜಿ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.
ಸರ್ಕಾರ ಕೊರೊನಾ ಬಗ್ಗೆ ತಾತ್ಸಾರ ತೋರುತ್ತಿದೆ: ಮಾಜಿ ಸಚಿವ ರಾಮಲಿಂಗಾರೆಡ್ಡಿ - ಕೊರೊನಾ ವೈರಸ್
ಕೋವಿಡ್ ಕಾವು ರಾಜ್ಯದಲ್ಲಿ ಹೆಚ್ಚಾಗುತ್ತಲೇ ಇದೆ. ಆದ್ರೆ ಸರ್ಕಾರ ಲಾಕ್ಡೌನ್ ನಿಯಮಗಳನ್ನು ಸಡಿಲಗೊಳಿಸಿ ಕೊರೊನಾ ಭೀತಿಯನ್ನು ಮರೆತಂತಿದೆ ಎಂದು ಮಾಜಿ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.
ಅತ್ತಿಬೆಲೆಯಲ್ಲಿ ದಿನಸಿ ವಿತರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸರ್ಕಾರ ಮೇ 3ರ ವರೆಗೂ ಕಠಿಣ ನಿಯಮದೊಂದಿಗೆ ಲಾಕ್ಡೌನ್ ಮುಂದುವರೆಸಬೇಕು ಎಂದರು. ಇನ್ನು ಅಕ್ರಮ ಅಕ್ಕಿ ಸಂಗ್ರಹಣೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಸರ್ಜಾಪುರದ ಅಕ್ಕಿ ಗೋಡೌನ್ ಪರಿಶೀಲಿಸಿರುವ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಗೋಪಾಲಯ್ಯ ಅವರ ಹೇಳಿಕೆ ಅನುಮಾನಗಳನ್ನು ಹುಟ್ಟುಹಾಕಿದೆ ಎಂದು ತಿಳಿಸಿದರು.
ಆನೇಕಲ್ ತಹಶೀಲ್ದಾರ್ ನೋಟಿಸ್ ಕೊಟ್ಟಿದ್ದರು. ಆದ್ರೆ ಅದರ ಮೇಲೆ ನಂಬಿಕೆ ಇಲ್ಲದೆ ವಾಸ್ತವ ಸ್ಥಿತಿ ಅರಿಯದೆ ದೂರುದಾರ ಶಾಸಕರನ್ನು ವಿಚಾರಿಸದೆ ಏಕಮುಖಿ ಹೇಳಿಕೆ ನೀಡಿದ್ದಾರೆ. ಆದ್ದರಿಂದ ಇದನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಿ ನಿಷ್ಪಕ್ಷಪಾತ ತನಿಖೆ ಮಾಡಿಸಬೇಕೆಂದು ರಾಮಲಿಂಗಾರೆಡ್ಡಿ ಆಗ್ರಹಿಸಿದರು.