ಬೆಂಗಳೂರು: ರಾಜ್ಯಾದ್ಯಂತ ಸೋಮವಾರ(ಇಂದು) ಮಾನ್ಸೂನ್ ದುರ್ಬಲವಾಗಿದ್ದು, ಮಳೆಯ ಪ್ರಮಾಣ ಇಳಿಮುಖವಾಗಿದೆ. ಕರಾವಳಿ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗಿದ್ದು, ಉತ್ತರ ಹಾಗೂ ದಕ್ಷಿಣ ಒಳನಾಡಿನಲ್ಲಿ ಕೆಲವು ಕಡೆ ಮಾತ್ರ ಮಳೆಯಾಗಿದೆ ಎಂದು ಹವಾಮಾನ ಇಲಾಖೆಯ ಪ್ರಾದೇಶಿಕ ನಿರ್ದೇಶಕ ಸಿ.ಎಸ್. ಪಾಟೀಲ್ ತಿಳಿಸಿದ್ದಾರೆ.
ಶಿವಮೊಗ್ಗದ ತುಮರಿಯಲ್ಲಿ 4 ಸೆಂ.ಮೀ, ಉತ್ತರ ಕನ್ನಡದ ಯಲ್ಲಾಪುರ ಮತ್ತು ಆಗುಂಬೆಯಲ್ಲಿ ತಲಾ 3 ಸೆಂ.ಮೀ, ಉಡುಪಿಯ ಕೊಲ್ಲೂರು, ಮಂಗಳೂರು, ಉತ್ತರ ಕನ್ನಡದ ಜನ್ಮನೆ, ಸುಬ್ರಹ್ಮಣ್ಯದಲ್ಲಿ ತಲಾ 2 ಸೆಂ.ಮೀ, ಹೊನ್ನಾವರ, ಹಾಸನ, ಶಿರಾಲಿ, ಮಡಿಕೇರಿ, ಹಳಿಯಾಲ್, ಕದ್ರಾ, ಮಂಚಿಕೆರೆ, ಧರ್ಮಸ್ಥಳ, ಶಿವಮೊಗ್ಗದ ತ್ಯಾಗರ್ತಿ, ನಿಡಿಗೆ, ತಾಳಗುಪ್ಪ, ಕೊಡಗಿನ ಹುದಕೆರೆ ಹಾಗೂ ಸುಂಟಿಕೊಪ್ಪದಲ್ಲಿ ತಲಾ 1 ಸೆಂ.ಮೀ. ಮಳೆಯಾಗಿದೆ ಎಂದು ಮಾಹಿತಿ ನೀಡಿದ್ದಾರೆ.