ಕರ್ನಾಟಕ

karnataka

ETV Bharat / city

ಕನಿಷ್ಠ ವೇತನ ಆದೇಶವನ್ನು ಒಂದು ವರ್ಷ ಮುಂದೂಡಿ: ರಾಜ್ಯ ಸರ್ಕಾರಕ್ಕೆ ಎಫ್​​ಕೆಸಿಸಿಐ ಮನವಿ - ರಾಜ್ಯ ಸರ್ಕಾರದ ಕನಿಷ್ಠ ವೇತನ ಆದೇಶ

ಮಧ್ಯಮ ಹಾಗೂ ಸಣ್ಣ ಕೈಗಾರಿಕೆಗಳು ಆರ್ಥಿಕ ಸಂಕಷ್ಟಕ್ಕೆ ತುತ್ತಾಗಿದ್ದು, ರಾಜ್ಯ ಸರ್ಕಾರ ನೀಡಿರುವ ಕನಿಷ್ಠ ವೇತನದ ಆದೇಶವನ್ನು ಒಂದು ವರ್ಷಗಳ ಕಾಲ ಮುಂದೂಡುವಂತೆ ಸರ್ಕಾರಕ್ಕೆ ಎಫ್​ಕೆಸಿಸಿಐ ಅಧ್ಯಕ್ಷ ಸಿ. ಆರ್​. ಜನಾರ್ಧನ್​ ಮನವಿ ಮಾಡಿದ್ದಾರೆ.

postpone-the-minimum-wage-order-for-one-year-fkcci-request
ಎಫ್​​ಕೆಸಿಸಿಐ

By

Published : Apr 14, 2020, 11:06 AM IST

ಬೆಂಗಳೂರು: ರಾಜ್ಯ ಸರ್ಕಾರ ಕನಿಷ್ಠ ವೇತನದ ಆದೇಶವನ್ನು ಒಂದು ವರ್ಷಗಳ ಕಾಲ ಮುಂದೂಡಬೇಕಂದು ಎಫ್​ಕೆಸಿಸಿಐ ಅಧ್ಯಕ್ಷ ಸಿ. ಆರ್. ಜನಾರ್ಧನ್ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಕಳೆದ ಒಂದು ವರ್ಷದಿಂದ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಆರ್ಥಿಕ ಹಿಂಜರಿತದಿಂದ ತತ್ತರಿಸಿ ಹೋಗಿವೆ. ಸದ್ಯ ಗಾಯದ ಮೇಲೆ ಬರೆ ಎಳೆದಂತೆ ಲಾಕ್ ಡೌನ್‌ನಿಂದಾಗಿ ಕೈಗಾರಿಕೆಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಈ ಕಾರಣದಿಂದ ಕನಿಷ್ಠ ವೇತನದ ಆದೇಶವನ್ನು ಮುಂದೂಡಬೇಕು ಎಂದು ವಿವರಿಸಿದರು.

ರಾಜ್ಯ ಸರ್ಕಾರಕ್ಕೆ ಎಫ್​​ಕೆಸಿಸಿಐ ಮನವಿ

12,500 ರೂಪಾಯಿಗಳನ್ನು ಕನಿಷ್ಠ ವೇತನವಾಗಿ ಕುಶಲರಹಿತ ಕಾರ್ಮಿಕರಿಗೆ ನೀಡಬೇಕು ಹಾಗೂ 13 ಸಾವಿರ ರೂಪಾಯಿಗಳನ್ನು ಕುಶಲ ಕಾರ್ಮಿಕರಿಗೆ ನೀಡಬೇಕು ಎಂದು ಸರ್ಕಾರ ಆದೇಶ ಮಾಡಿದೆ.

ABOUT THE AUTHOR

...view details