ಕರ್ನಾಟಕ

karnataka

ETV Bharat / city

ಕೈಕೊಟ್ಟ ಇವಿಎಂ ಮೆಷಿನ್​.. ಶ್ರೀರಾಮಪುರಂದಲ್ಲಿ ಇನ್ನೂ ಪ್ರಾರಂಭವಾಗಿಲ್ಲ ಮತದಾನ - loksabha election

ಪೋಲಿಂಗ್ ಸ್ಟೇಷನ್ 69 ಶ್ರೀರಾಮಪುರಂದಲ್ಲಿ ತಾಂತ್ರಿಕ ದೋಷ ಹಿನ್ನೆಲೆಯಲ್ಲಿ ಈವರೆಗೂ ಮತದಾನ ಶುರುವಾಗಿಲ್ಲ.

ಮತದಾನ

By

Published : Apr 18, 2019, 7:40 AM IST


ಬೆಂಗಳೂರು: ರಾಜ್ಯದಲ್ಲಿ ಮೊದಲ ಹಂತದ ಲೋಕಸಭಾ ಚುನಾವಣೆಗೆ ಮತದಾನ ನಡೀತಿದೆ. ಆದೆರೆ, ಪೋಲಿಂಗ್ ಸ್ಟೇಷನ್ 69 ಶ್ರೀರಾಮಪುರಂದಲ್ಲಿ ಇವಿಎಂನಲ್ಲಿ ತಾಂತ್ರಿಕ ದೋಷ ಹಿನ್ನೆಲೆಯಲ್ಲಿ ಮತದಾನ ಈವರಗೂ ಶುರುವಾಗಿಲ್ಲ.

7 ಗಂಟೆಗೆ ಶುರುವಾಗಬೇಕಿದ್ದ ಮತದಾನ ಇನ್ನೂ ಆರಂಭವಾಗಿಲ್ಲ. ಈ ಸಂಬಂಧ ಅಧಿಕಾರಿಗಳು ಪರಿಶೀಲನೆ ನಡೆಸಿದ್ದು, ಇತ್ತ ಜನರು ಉತ್ಸಾಹದಿಂದ‌ ಮತ ಹಾಕಲು ಕಾದು ನಿಂತಿದ್ದಾರೆ.

ಶ್ರೀರಾಮಪುರಂದಲ್ಲಿ ಇನ್ನೂ ಪ್ರಾರಂಭವಾಗಿಲ್ಲ ಮತದಾನ

ಬೆಂಗಳೂರು ಸೆಂಟ್ರಲ್ ಲೋಕಸಭಾ ಕ್ಷೇತ್ರದ 8 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದ್ದು, ಶಾಂತಿನಗರ, ಶಿವಾಜಿನಗರ, ಗಾಂಧಿನಗರ, ಸರ್ವಜ್ಞನಗರ, ಸಿವಿ ರಾಮನ್‌ನಗರ, ರಾಜಾಜಿನಗರ, ಚಾಮರಾಜಪೇಟೆ, ಮಹದೇವಪುರ ವಿಧಾನಸಭಾ ವ್ಯಾಪ್ತಿಯಲ್ಲಿ ಮತದಾನ ನಡೆಯಲಿದೆ.

ಬೆಂಗಳೂರು ಸೆಂಟ್ರಲ್ ಲೋಕಸಭಾ ಕ್ಷೇತ್ರದಲ್ಲಿ 22 ಅಭ್ಯರ್ಥಿಗಳು ಕಣದಲ್ಲಿದ್ದು, ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಅಭ್ಯರ್ಥಿ ರಿಜ್ವಾನ್ ಹರ್ಷದ್ ,ಬಿ‌ಜೆಪಿಯ ಅಭ್ಯರ್ಥಿ ಪಿಸಿ ಮೋಹನ್, ಪಕ್ಷೇತರ ಅಭ್ಯರ್ಥಿ ಪ್ರಕಾಶ್ ರಾಜ್ ಕಣದಲ್ಲಿದ್ದಾರೆ.

ABOUT THE AUTHOR

...view details