ಕರ್ನಾಟಕ

karnataka

By

Published : May 9, 2021, 5:38 PM IST

ETV Bharat / city

ಅನಗತ್ಯವಾಗಿ ರಸ್ತೆಗೆ ಇಳಿದ ಜನರ ಉತ್ತರಕ್ಕೆ ಪೊಲೀಸರೇ ಶಾಕ್​​​.. ಏನೇನು ಸಬೂಬು ಕೊಡ್ತಿದ್ದಾರೆ ಗೊತ್ತಾ..?

ರಾಜಧಾನಿಯಲ್ಲಿ ಕೋವಿಡ್​​ ಕಾವು ಹೆಚ್ಚಾದ ಹಿನ್ನೆಲೆ ಅನಗತ್ಯವಾಗಿ ಹೊರಬರಬೇಡಿ ಎಂದು‌ ಸಾರ್ವಜನಿಕರಲ್ಲಿ ಪೊಲೀಸರು ತಿಳುವಳಿಕೆ ಮೂಡಿಸುತ್ತಿದ್ದರೂ ಜನರು ಮಾತ್ರ ಕುಂಟು ನೆಪ ಹೇಳಿಕೊಂಡು ಹೊರಬರುತ್ತಲೇ ಇದ್ದಾರೆ.‌ ಕ್ಷುಲ್ಲಕ ಕಾರಣ ನೀಡಿ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಲು ಹೋಗಿ ಸಿಕ್ಕಿಬೀಳುತ್ತಿದ್ದಾರೆ.

people-who-come-out-unnecessarily-beaten-by-police-in-bangalore
ಲಾಕ್​ಡೌನ್​ ಪರಿಣಾಮಗಳು

ಬೆಂಗಳೂರು: ನಾಳೆಯಿಂದ ಎರಡು ವಾರಗಳ ಕಾಲ ಲಾಕ್​ಡೌನ್ ಜಾರಿಗೆ ಬರಲಿದೆ. ಅನಗತ್ಯವಾಗಿ ಹೊರಬರಬೇಡಿ ಎಂದು‌ ಸಾರ್ವಜನಿಕರಲ್ಲಿ ಪೊಲೀಸರು ತಿಳುವಳಿಕೆ ಮೂಡಿಸುತ್ತಿದ್ದರೂ ಜನರು ಮಾತ್ರ ಕುಂಟು ನೆಪ ಹೇಳಿಕೊಂಡು ಹೊರಬರುತ್ತಲೇ ಇದ್ದಾರೆ.‌ ಕ್ಷುಲ್ಲಕ ಕಾರಣ ನೀಡಿ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಲು ಹೋಗಿ ಸಿಕ್ಕಿಬೀಳುತ್ತಿದ್ದಾರೆ. ಅಂತಹ ಕೆಲವು ಘಟನೆಗಳು ಇಲ್ಲಿವೆ ನೋಡಿ.

ನಗರದಲ್ಲಿ ಸುತ್ತಾಡುತ್ತಿರುವ ಖಾಕಿಪಡೆ, ಸಣ್ಣ-ಪುಟ್ಟ ನೆಪ ಹೇಳಿ‌ ಸಂಚಾರ ನಡೆಸುತ್ತಿದ್ದ ವಾಹನ ಸವಾರರಿಗೆ ಲಾಠಿ ರುಚಿ ತೋರಿಸಿ ವಾರ್ನ್ ಮಾಡಿ ಬಿಡುತ್ತಿದ್ದಾರೆ‌. ನಾಳೆಯಿಂದ ಸುಖಾಸುಮ್ಮನೆ ಹೊರಬಂದರೆ‌ ವಾಹನ ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡುತ್ತಿದ್ದಾರೆ.

ಹಳೆಯ‌‌ ಮೆಡಿಕಲ್‌ ರಿಪೋರ್ಟ್ ತೋರಿಸಿ ತಗಲಾಕ್ಕೊಂಡ ಯುವಕ: ಮೈಸೂರು ಬ್ಯಾಂಕ್ ವೃತ್ತದಲ್ಲಿ ತಪಾಸಣೆ ವೇಳೆ ಹಳೆಯ ಮೆಡಿಕಲ್ ರಿಪೋರ್ಟ್ ನೀಡಿ ಬೈಕ್ ಸವಾರ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ‌.‌ ಕೂಲಂಕುಶವಾಗಿ ರಿಪೋರ್ಟ್ ಪರಿಶೀಲಿಸಿದಾಗ ಹಳೆಯ ರಿಪೋರ್ಟ್ ಎಂದು ಗೊತ್ತಾಗುತ್ತಿದ್ದಂತೆ ಲಾಠಿ ರುಚಿ ತೋರಿಸಿ ಕಳುಹಿಸಿದ್ದಾರೆ‌.

ಸಾವಾಗಿದೆ ಎಂದು ಸುಳ್ಳು ಹೇಳಿ ಸಿಕ್ಕಿಬಿದ್ದ ಟೆಂಪೋ ಸವಾರ: ಲಾಕ್​ಡೌನ್ ಹಿನ್ನೆಲೆ ಹೇಗಾದರೂ ಮಾಡಿ ಊರಿಗೆ ಹೋಗಿಬಿಡೋಣ ಎಂದು ಯೋಜನೆ ರೂಪಿಸಿಕೊಂಡಿದ್ದ ಟೆಂಪೋ ಸವಾರ ಪೊಲೀಸರ ಕೈಗೆ ತಗಲಾಕಿಕೊಂಡಿದ್ದಾನೆ. ಅನುಮಾನಾಸ್ಪಾದವಾಗಿ ಟೆಂಪೊ ತಡೆದು ಪ್ರಶ್ನಿಸಿದ ಪೊಲೀಸರಿಗೆ ಸಾವಿಗೆ ಹೋಗುತ್ತಿರುವುದಾಗಿ ಸುಳ್ಳು ಹೇಳಿದ್ದಾನೆ‌‌. ‌ಚಾಲಕ ಸೇರಿ ಟಿಂಪೋದಲ್ಲಿದ್ದ ಮೂವರನ್ನು ಪೊಲೀಸ್ ಶೈಲಿಯಲ್ಲಿ ಪ್ರಶ್ನಿಸಿದಾಗ ತಪ್ಪೊಪ್ಪಿಕೊಂಡಿದ್ದಾರೆ. ನಂತರ ಮೂವರನ್ನು ಬಸ್ಕಿ ಹೊಡೆಸಿ ಬಿಟ್ಟು ಕಳುಹಿಸಿ, ಟೆಂಪೋ ಸೀಜ್ ಮಾಡಿದ್ದಾರೆ.

ಆಸ್ಪತ್ರೆಗೆ ಹೋಗಬೇಕು ದಾರಿ ಬಿಡಿ: ಜನಸಂದಣಿ ಪ್ರದೇಶವಾಗಿರುವ ಕೆ.ಆರ್. ಮಾರ್ಕೆಟ್ ಮತ್ತು ಬಸ್ ನಿಲ್ದಾಣದ ಬಳಿ‌ ಎರಡು ಕಡೆಗಳಲ್ಲಿ‌ ನಾಕಾಬಂದಿ‌ ಹಾಕಿ ತಪಾಸಣೆ ಬಿಗಿಗೊಳಿಸಿದರೂ ವಾಹನ ಸವಾರರು ಮಾತ್ರ ರಸ್ತೆಗಿಳಿದಿರುವುದು ಕಂಡು ಬಂತು. ಈ ವೇಳೆ ಆಸ್ಪತ್ರೆಗೆ ಹೋಗಬೇಕು ಎಂದು ಪೊಲೀಸರ ಜೊತೆ ವಾಗ್ವಾದಕ್ಕಿಳಿದಿದ್ದಾನೆ‌. ಮೊಬೈಲ್​ನಲ್ಲಿ ಯಾರಿಗೋ ಪೋನ್ ಮಾಡಿ ಮಾತಾಡೋದನ್ನ ಕೇಳಿಸಿಕೊಳ್ಳಿ ಎಂದು ಪೊಲೀಸರ ಮೇಲೆ ಯುವಕ ಗರಂ ಆಗಿದ್ದ.‌ ಇದಕ್ಕೆ‌‌‌ ಪೊಲೀಸರು ತಕ್ಕಶಾಸ್ತ್ರಿ ಮಾಡಿ ಕಳುಹಿಸಿದ್ದಾರೆ‌. ಇದೇ ವೇಳೆ ವಿಕಲಚೇತನನೊಬ್ಬ ನರೇಂದ್ರ ಮೋದಿ ವಿರುದ್ಧ ಘೋಷಣೆ ಕೂಗಿ ಅಕ್ರೋಶ ವ್ಯಕ್ತಪಡಿಸಿದರು‌.

ABOUT THE AUTHOR

...view details