ಕರ್ನಾಟಕ

karnataka

ETV Bharat / city

ಕಲಾಪ ಸಮರ.. 'ಸಿಎಂ ದುಡ್ಡು ಕೊಡ್ತಿಲ್ಲ ಸೋಮಣ್ಣ; ನಿನಗೆ ಬೆಂಬಲವಾಗಿ ಮಾತಾಡ್ತಿದ್ದೇನೆ' - ವಿಪಕ್ಷ ನಾಯಕ ಸಿದ್ದರಾಮಯ್ಯ - ವಿಧಾನಸಭೆ ಅಧಿವೇಶನ

ಸರ್ಕಾರದಿಂದ ವಿವಿಧ ಯೋಜನೆಗಳ ಅಡಿ ಮನೆಗಳ ಮಂಜೂರು ಮಾಡಿ ಅದಕ್ಕೆ ಹಣಕಾಸು ಬಿಡುಗಡೆ ಬಗ್ಗೆ ಬಿಸಿ ಬಿಸಿ ಚರ್ಚೆ ನಡೆಯಿತು. ಪ್ರಶ್ನೋತ್ತರ ವೇಳೆ ಮಾತನಾಡುತ್ತಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯ, ಮುಖ್ಯಮಂತ್ರಿಗಳು ನಿನಗೆ ದುಡ್ಡು ಕೊಡುತ್ತಿಲ್ಲ ಸೋಮಣ್ಣ. ದುಡ್ಡು ಬೇಕೋ ಬೇಡ್ವಾ ಮನೆ ಕಟ್ಟಬೇಕಾದರೆ, ದುಡ್ಡೇ ಇಲ್ಲ ಯಾವ ಮನೆ ಕಟ್ತಿಯಾ ನೀನು ಎಂದು ಪ್ರಶ್ನಿಸಿ ನಿನ್ನ ಪರವಾಗಿ ಮಾತನಾಡುತ್ತಿದ್ದೇನೆ ಎಂದರು.

Opposition Leader Siddaramaiah talking in Assembly Session
'ಸಿಎಂ ನಿನಗೆ ದುಡ್ಡು ಕೊಡ್ತಿಲ್ಲ ಸೋಮಣ್ಣ; ನಿನಗೆ ಬೆಂಬಲವಾಗಿ ಮಾತಾಡ್ತಾ ಇದ್ದೀನಿ' - ವಿಪಕ್ಷ ನಾಯಕ ಸಿದ್ದರಾಮಯ್ಯ

By

Published : Sep 20, 2021, 2:18 PM IST

Updated : Sep 20, 2021, 2:25 PM IST

ಬೆಂಗಳೂರು:ಮುಖ್ಯಮಂತ್ರಿಗಳು ನಿನಗೆ ದುಡ್ಡು ಕೊಡುತ್ತಿಲ್ಲ ಸೋಮಣ್ಣ. ದುಡ್ಡು ಬೇಕೋ ಬೇಡ್ವಾ ಮನೆ ಕಟ್ಟಬೇಕಾದರೆ, ದುಡ್ಡೇ ಇಲ್ಲ ಯಾವ ಮನೆ ಕಟ್ತೀಯಾ ನೀನು ಎಂದು ವಸತಿ ಸಚಿವ ವಿ.ಸೋಮಣ್ಣಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದರು.

'ಸಿಎಂ ನಿನಗೆ ದುಡ್ಡು ಕೊಡ್ತಿಲ್ಲ ಸೋಮಣ್ಣ; ನಿನಗೆ ಬೆಂಬಲವಾಗಿ ಮಾತಾಡ್ತಾ ಇದ್ದೀನಿ' - ವಿಪಕ್ಷ ನಾಯಕ ಸಿದ್ದರಾಮಯ್ಯ

ಯಡಿಯೂರಪ್ಪ ಸಿಎಂ ಆಗಿದ್ದಾಗಲೂ ಮನೆ ಕಟ್ಟೋಕೆ ದುಡ್ದು ಕೊಡಿ ಅಂತ ಹೇಳಿದ್ದೆ. ಮುಖ್ಯಮಂತ್ರಿಗಳು ನಿಮಗೂ ಸಂಬಂಧ ಯಾವ ರೀತಿ ಇದೆ ಅಂತ ನನಗೆ ಗೊತ್ತಿಲ್ಲ. ಈಗಿನ ಮುಖ್ಯಮಂತ್ರಿಗಳ ಜೊತೆ ಸಂಬಂಧ ಹೇಗಿದೆ ಅಂತ ಗೊತ್ತಿಲ್ಲ ಎಂದರು. ನಿಮಗೆ ಉದ್ದೇಶ ಪೂರ್ವಕವಾಗಿ ದುಡ್ಡು ಕೊಡ್ತಿಲ್ವೇನೋ ಗೊತ್ತಿಲ್ಲ ಎಂದು ಸೋಮಣ್ಣ ಅವರ ಕಾಲೆಳೆದರು.

ಎಂಟಿಬಿ ನಾಗರಾಜ್‌ ವಸತಿ ಸಚಿವರಾಗಿದ್ದಾಗ ಬದಾಮಿ ಕ್ಷೇತ್ರದಲ್ಲಿ 7 ಸಾವಿರ ಮನೆಗಳನ್ನು ಮಂಜೂರು ಮಾಡಿಸಿದ್ದೆ. ಮೂರು ವರ್ಷ ಕಳೆದರೂ ಒಂದೇ ಒಂದು ಮನೆ ಕಟ್ಟಿಲ್ಲ. ಎಲ್ಲ ಲಾಕ್‌ ಮಾಡಿದ್ದಾರೆ. ಅನ್‌ಲಾಕ್‌ ಮಾಡಿಲ್ಲ. ಕೇಳಿದ್ರೆ ದುಡ್ಡಿಲ್ಲ ಅಂತಾರೆ. ಈಗಾಗಲೇ ಕಟ್ಟುತ್ತಿರುವ ಮನೆಗಳಿಗೆ ಹಣ ನೀಡಿದ್ದಾರೆ. ಹೊಸ ಮನೆಗಳಿಗೆ ದುಡ್ಡು ನೀಡಿಲ್ಲ. ಹಿಂದಿನ ಸರ್ಕಾರದಲ್ಲಿ ಮನೆಗಳು ಸರಿಯಾಗಿ ಹಂಚಿಕೆಯಾಗಿಲ್ಲ. ಅಕ್ರಮಗಳು ನಡೆದಿವೆ ಎಂದು ಹೇಳುತ್ತಾರೆ. ಅಕ್ರಮಗಳು ನಡೆದಿದ್ದರೆ ತಪ್ಪಿತಸ್ಥರಿಗೆ ಶಿಕ್ಷೆ ಕೊಡಿ ಎಂದು ಸಿದ್ದರಾಮಯ್ಯ ಹೇಳಿದರು.

ಒಂದೇ ವರ್ಷದಲ್ಲಿ ನಾನು 17 ಲಕ್ಷ ಮಂಜೂರು ಮಾಡಿದ್ದೇವೆ ಎಂದು ಹೇಳ್ತಾರೆ. ನಾವು ಹೇಳಿದ್ದು 5 ವರ್ಷದಲ್ಲಿ 13 ಲಕ್ಷ ಮನೆ ಕಟ್ಟುತ್ತೇವೆ ಅಂತ. ಪ್ರತಿವರ್ಷ 3 ಲಕ್ಷ ಮನೆ ಕಟ್ಟೋದಾಗಿ ಹೇಳಿದ್ದು, ಪ್ರತಿ ವರ್ಷ ಎಷ್ಟೆಷ್ಟು ಮನೆ ಕಟ್ಟಿದ್ದೇವೆ ಅನ್ನೋದನ್ನ ಅಂಕಿ - ಅಂಶಗಳ ಸಹಿತ ಸದನದ ಮುಂದಿಡುತ್ತೇವೆ ಎಂದರು. ನಿಮ್ಮ ಸರ್ಕಾರ ಬಂದಮೇಲೆ ಬದಾಮಿಗೆ ಒಂದೇ ಒಂದು ಮನೆ ಮಂಜೂರು ಮಾಡಿಸೋಕೆ ಆಗಿಲ್ಲ ಎಂದರು.

ಈ ವೇಳೆ ಸಚಿವ ಸೋಮಣ್ಣ ಮಾತನಾಡಲು ಎದ್ದು ನಿಂತಾಗ, ಕೂತ್ಕೂಳ್ರಿ ನಾನು ಇನ್ನೂ ಮುಗಿಸೇ ಇಲ್ಲ. ನಿನಗೆ ಬೆಂಬಲವಾಗಿ ಮಾತಾಡುತ್ತಿದ್ದೇನೆ ನಾನು. ಯಾಕೆಂದರೆ ಮುಖ್ಯಮಂತ್ರಿಗಳು ನಿನಗೆ ದುಡ್ಡು ಕೊಡುತ್ತಿಲ್ಲ ಸೋಮಣ್ಣ. ದುಡ್ಡು ಬೇಕೋ ಬೇಡಾ ಮನೆ ಕಟ್ಟಬೇಕಾದರೆ, ದುಡ್ಡೇ ಇಲ್ಲ ಯಾವ ಮನೆ ಕಟ್ತೀಯಾ ನೀನು ಎಂದು ಪ್ರಶ್ನಿಸಿದರು.

Last Updated : Sep 20, 2021, 2:25 PM IST

ABOUT THE AUTHOR

...view details