ಕರ್ನಾಟಕ

karnataka

ETV Bharat / city

ಮಾನಸಿಕ ಸಿದ್ಧತೆಗಾಗಿ ಅಷ್ಟೇ ನೈಟ್ ಕರ್ಫ್ಯೂ: ಕೊರೊನಾ ಕಂಟ್ರೋಲ್ ಆಗುತ್ತೆ ಅನ್ನೋದು ದೂರದ ಮಾತು

ಏಪ್ರಿಲ್ 10 ರಿಂದ 20ರವರೆಗೆ ನೈಟ್ ಕರ್ಫ್ಯೂ ಅನ್ನು ಬೆಂಗಳೂರು ಸೇರಿದಂತೆ 7 ಕಡೆ ಜಾರಿ ಮಾಡಲಾಗಿದೆ. ನೈಟ್ ಕರ್ಫೂ ವಿಸ್ತರಣೆ ಮುಗಿತಾ ಬಂದರೂ, ಎಲ್ಲೂ ಸೋಂಕಿತರ ಸಂಖ್ಯೆ ಮಾತ್ರ ಕಡಿಮೆ‌ ಆಗಿಲ್ಲ. ಬದಲಿಗೆ ರಾಜಧಾನಿ ಬೆಂಗಳೂರು, ಮೈಸೂರಿನಲ್ಲಿ ಏರಿಕೆ ಆಗುತ್ತಿದ್ದು, ಕರ್ಫ್ಯೂ ಫಲಿತಾಂಶ ಶೂನ್ಯವಾಗಿದೆ.

night-curfew-experiment-for-mental-preparation-not-for-corona-control
ನೈಟ್ ಕರ್ಫ್ಯೂ ಪ್ರಯೋಗ

By

Published : Apr 19, 2021, 9:21 PM IST

ಬೆಂಗಳೂರು: ರಾಜ್ಯದಲ್ಲಿ ಕೊರೊನಾ‌ ಮೊದಲ ಅಲೆಯಲ್ಲಿ ಏರಿಕೆಯ ಮಟ್ಟ ತಲುಪಿ ಇಳಿಕೆ ದಾರಿಯನ್ನ‌ ಕಂಡಿತ್ತು. ಆ ಸಂದರ್ಭದಲ್ಲಿ ಸೋಂಕಿತರ ಚಿಕಿತ್ಸೆ ಸೇರಿದಂತೆ ನಿರ್ವಹಣೆ ಅಸಾಧ್ಯ ಎನ್ನುವಾಗ ಕರ್ಫ್ಯೂ, ಲಾಕ್ ಡೌನ್ ಮೊರೆ ಹೋಗುವುದು ಸಾಮಾನ್ಯ. ಸದ್ಯ ಎರಡನೇ ಅಲೆಯಲ್ಲಿ ಕೊರೊನಾ ನಿಯಂತ್ರಣ ಮೀರುತ್ತಿದೆ. ಈ ನಿಟ್ಟಿನಲ್ಲಿ ಸರ್ಕಾರ ಮತ್ತೊಮ್ಮೆ ನೈಟ್ ಕರ್ಫ್ಯೂ ಮೊರೆ ಹೋಗಿದೆ.‌ ಇದರಿಂದ ಕೊರೊನಾ ಇಳಿಕೆ ಆಯ್ತಾ ಅಂದರೆ? ಅದಕ್ಕೆ ಉತ್ತರವಾಗಿ ಕೋವಿಡ್ ಬುಲೇಟಿನ್ ಇಲ್ಲ ಅಂತಿದೆ.

ಅಂದಹಾಗೇ, ಏಪ್ರಿಲ್ 10 ರಿಂದ 20ರವರೆಗೆ ನೈಟ್ ಕರ್ಫ್ಯೂ ಅನ್ನು ಬೆಂಗಳೂರು ಸೇರಿದಂತೆ 7 ಕಡೆ ಜಾರಿ ಮಾಡಲಾಗಿದೆ. ನೈಟ್ ಕರ್ಫೂ ವಿಸ್ತರಣೆ ಮುಗಿತಾ ಬಂದರೂ, ಎಲ್ಲೂ ಸೋಂಕಿತರ ಸಂಖ್ಯೆ ಮಾತ್ರ ಕಡಿಮೆ‌ ಆಗಿಲ್ಲ. ಬದಲಿಗೆ ರಾಜಧಾನಿ ಬೆಂಗಳೂರು, ಮೈಸೂರಿನಲ್ಲಿ ಏರಿಕೆ ಆಗುತ್ತಿದ್ದು, ಕರ್ಫ್ಯೂ ಫಲಿತಾಂಶ ಶೂನ್ಯವಾಗಿದೆ. ಹೀಗಾಗಿ, ನೈಟ್ ಕರ್ಫ್ಯೂ ಮಾತು ಯಾಕೆ ಅನ್ನುವ ಅಭಿಪ್ರಾಯ ಬರುತ್ತಿದೆ. ಸೋಂಕು ನಿಯಂತ್ರಣಕ್ಕಾಗಿ ನೈಟ್ ಕರ್ಫ್ಯೂ ಜಾರಿ ಮಾಡಲಾಗಿತ್ತು. ಆದರೆ, ಸೋಂಕು ಹಾಗೂ ಸಾವಿನ ಸಂಖ್ಯೆಯು ಹೆಚ್ಚಿದೆ. ‌ಈ ಮಧ್ಯೆ ಕರ್ಪ್ಯೂ ಅವಧಿ ನಾಳೆಗೆ( ಏಪ್ರಿಲ್ 20) ಮುಗಿಯಲಿದ್ದು, ನಂತರ ದಿನದಲ್ಲಿ ರಾಜ್ಯಾದ್ಯಂತ ಮುಂದುವರಿಸಲು ಸರ್ಕಾರ ಚಿಂತಿಸಿದ್ದು, ಇದರ ಅಗತ್ಯವಿದಯೇ ಅಂತ ಸಾರ್ವಜನಿಕರು ಅಭಿಪ್ರಾಯ ಪಟ್ಟಿದ್ದಾರೆ.‌

ಈ ಕುರಿತು ವೈದ್ಯ ಡಾ. ವಿ. ಸೂರಿರಾಜು ತಮ್ಮ ಅಭಿಪ್ರಾಯವನ್ನ ವ್ಯಕ್ತಪಡಿಸಿದ್ದು, ಕಳೆದ 24 ಗಂಟೆಯಲ್ಲಿ ಸುಮಾರು 19 ಸಾವಿರಕ್ಕೂ ಹೆಚ್ಚು ಹೊಸ ಪ್ರಕರಣಗಳು ದೃಢಪಟ್ಟಿದೆ. ಇಂತಹ ಸಂದರ್ಭದಲ್ಲಿ ಮತ್ತಷ್ಟು ಕಠಿಣ ನಿರ್ಬಂಧಗಳನ್ನು ವಿಧಿಸುವುದು ಅನಿವಾರ್ಯವಾಗಿದೆ. ಲಸಿಕಾ ಅಭಿಯಾನ ಮತ್ತಷ್ಟು ಹೆಚ್ಚಿಸಬೇಕು, ಎರಡನೇ ಅಲೆಯಲ್ಲಿ ವೈರಾಣು ವೇಗವಾಗಿ ಹರಡುತ್ತಿರುವುದರಿಂದ ವಯಸ್ಸಿನ ಮಿತಿ ತೆಗೆದು ಪ್ರತಿಯೊಬ್ಬರಿಗೂ ಲಸಿಕೆ ನೀಡುವಲ್ಲಿ ಗಮನಹರಿಸಬೇಕು.

ಈಗಾಗಲೇ ದೆಹಲಿಯಲ್ಲಿ ಲಾಕ್ಡೌನ್ ಘೋಷಿಸಿರುವ ನಡೆ ಕೊರೊನಾ ಭೀಕರತೆ ಸೂಚಿಸುತ್ತಿದೆ. ‌ಇದನ್ನ ಗಮನದಲ್ಲಿ ಇಟ್ಟುಕೊಂಡು ಜನರು ಕೋವಿಡ್ ನಿಯಮವನ್ನ ಕಡ್ಡಾಯವಾಗಿ ಪಾಲನೆ ಮಾಡಬೇಕು. ಸರ್ಕಾರ ಯಾವುದೇ ರೀತಿಯ ಗುಂಪು ಆಚರಣೆಯನ್ನು ನಿರ್ಬಂಧಿಸಬೇಕು, ಹಾಗೇ ಈಗಾಗಲೇ ಇರುವ ನೈಟ್ ಕರ್ಫ್ಯೂ ಸಮಯ ಹೆಚ್ಚಿಸಬೇಕೆಂದು ಸಲಹೆ ನೀಡಿದ್ದಾರೆ.‌ ಕಚೇರಿಗಳಲ್ಲಿ ಪಾಳಿಯಲ್ಲಿ ಕೆಲಸ ಮಾಡಲು ಅನುಕೂಲ ಮಾಡಿಕೊಡುವುದು ಹಾಗೂ ಹೋಟೆಲ್​​ಗಳಲ್ಲಿ ಪಾರ್ಸಲ್ ವ್ಯವಸ್ಥೆ ಕಲ್ಪಿಸುವುದು ಉತ್ತಮ ಅಂದಿದ್ದಾರೆ.

ಎರಡನೇ ಅಲೆಯಲ್ಲಿ ಹೆಚ್ಚು ಯುವಜನರೇ ಸೋಂಕಿಗೆ ತುತ್ತಾಗುತ್ತಿದ್ದು, ಇದನ್ನ ಗಮನದಲ್ಲಿಟ್ಟುಕೊಂಡು ಪ್ರತಿ ಕಚೇರಿಯಲ್ಲಿ ಲಸಿಕಾ ಕೇಂದ್ರ ತೆರೆಯಲು ಪ್ರೋತ್ಸಾಹಿಸಬೇಕು ಅಂದರು.‌ ಪರಿಸ್ಥಿತಿ ಹೀಗೇ ಮುಂದುವರಿದರೆ ಮುಂದೆ ಮತ್ತೊಮ್ಮೆ ಸಂಪೂರ್ಣ ಲಾಕ್ ಡೌನ್ ಮಾಡಬೇಕಾಗುತ್ತದೆ ಅಂತ ಎಚ್ಚರಿಕೆ ನೀಡಿದರು. ಸದ್ಯ ಪ್ರತಿ ಆಸ್ಪತ್ರೆ ಗಳು ತಮ್ಮ ಸಾಮರ್ಥ್ಯ ಮೀರಿ ಕೆಲಸ ಮಾಡುತ್ತಿವೆ.‌ ಸರ್ಕಾರ ಇದರ ಬಗ್ಗೆ ಗಮನಹರಿಸಿ ಆರೋಗ್ಯ ಕ್ಷೇತ್ರದಲ್ಲಿ ಕಂಡುಬರುತ್ತಿರುವ ಆಮ್ಲಜನಕ ಹಾಗೂ ಔಷಧ ಸರಬರಾಜು ಮಾಡುವಲ್ಲಿ ಮುತುವರ್ಜಿ ವಹಿಸಬೇಕು ಅಂತ ಹೇಳಿದ್ದಾರೆ. ಈಗಾಗಲೇ ತಲೆದೂರಿರುವ ಅತಿ ಮುಖ್ಯ ಸಮಸ್ಯೆ ಅಂದರೆ ಸಿಬ್ಬಂದಿ ಕೊರತೆ, ಹೀಗಾಗಿ ನಿವೃತ್ತಿ ಹೊಂದಿರುವರನ್ನ ಮರಳಿ ನೇಮಕ ಮಾಡಿಕೊಳ್ಳುವುದು ಸೂಕ್ತ ಅಂದರು.

ನೈಟ್ ಕರ್ಫ್ಯೂ ಒಂದೇ ಮಾರ್ಗ ಅಲ್ಲ

ಇನ್ನು ನೈಟ್ ಕರ್ಫ್ಯೂ ಸಂಬಂಧ ಟಾಸ್ಕ್ ಪೋರ್ಸ್ ಕಮಿಟಿಯ ಸದಸ್ಯ ಗಿರೀಶ್ ಬಾಬು ಮಾಹಿತಿ ನೀಡಿದ್ದು, ಕೊರೊನಾ ಕಂಟ್ರೋಲ್​ಗೆ ನೈಟ್​​ ಕರ್ಫ್ಯೂ ಒಂದೇ ಮಾರ್ಗವಲ್ಲ. ಜನರನ್ನ ಮಾನಸಿಕವಾಗಿ ಸಿದ್ಧತೆ ಮಾಡಬಹುದೇ ವಿನಃ ನೈಟ್ ಕರ್ಫ್ಯೂ ಮೂಲಕ ಸಂಪೂರ್ಣ ಕೋವಿಡ್ ನಿಯಂತ್ರಣ ದೂರದ ಮಾತು. ನೈಟ್ ಕರ್ಫ್ಯೂ ಎಂಬ ಒಂದೇ ಮಾರ್ಗದಿಂದ ಇಳಿಕೆ ಆಗೋದಿಲ್ಲ.‌ ಕೊರೊನಾ ನಿಯಮ‌ ಕಡ್ಡಾಯ ಪಾಲನೆ ಮಾಡಿ, ಕಠಿಣ ಕ್ರಮ ತಂದರೆ ಅಷ್ಟೇ ಸೋಂಕು ಕಡಿಮೆ ಯಾಗಬಹುದು ಎಂದು ಅಭಿಪ್ರಾಯ ತಿಳಿಸಿದ್ದಾರೆ.

ABOUT THE AUTHOR

...view details