ಬೆಂಗಳೂರು: ನೈಜೀರಿಯನ್ ಪ್ರಜೆಗಳು ಹೊರಗಿದ್ದರೂ, ಒಳಗಿದ್ದರೂ ಕಿರಿಕ್ ಎನ್ನಲಾಗುತ್ತಿದೆ. ಸಿಲಿಕಾನ್ ಸಿಟಿಯಲ್ಲಿ ಇವರು ಆಡಿದ್ದೇ ಆಟ. ಕ್ರೈಂ ಚಟುವಟಿಕೆಗಳಲ್ಲಿ, ಡ್ರಗ್ಸ್ ಪ್ರಕರಣಗಳಲ್ಲಿ ಇವರೇ ಹೆಚ್ಚಾಗಿದ್ದಾರೆ.
ಓದಲೆಂದು ವಿದೇಶದಿಂದ ಬರುತ್ತಾರೆ. ಆದರೆ, ಅಕ್ರಮ ಚಟುವಿಟಿಕೆಗಳಲ್ಲಿ ತೊಡಗಿಕೊಂಡು ವೀಸಾ ಅವಧಿ ಮುಗಿದಿದ್ದರೂ ಕೂಡ, ಅಕ್ರಮ ವಾಸ, ಅಕ್ರಮ ಚಟುವಟಿಕೆ ತೊಡಗಿಕೊಳ್ಳುತ್ತಿದ್ದಾರೆ. ಜೈಲಿನ ಒಳಗೆ ನೈಜೀರಿಯನ್ ಯುವತಿಯರೊಂದಿಗೆ ಕಿರಿಕ್ ಮಾಡುತ್ತಿದ್ದಾರೆ. ಪರಪ್ಪನ ಅಗ್ರಹಾರ ಜೈಲಲ್ಲಿ ನೈಜೀರಿಯನ್ಸ್ ವರ್ತನೆಗೆ ಜೈಲಾಧಿಕಾರಿಗಳು ಸಹ ಬೇಸತ್ತಿದ್ದಾರೆ ಎನ್ನುವ ಮಾಹಿತಿ ಮೂಲಗಳಿಂದ ದೊರೆತಿದೆ.
ಸೋಮವಾರ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿದ್ದ ವಿದೇಶಿ ಪ್ರಜೆ ಸಾವನ್ನಪ್ಪಿರುವ ಆರೋಪ ಕೇಳಿ ಬಂದಿತ್ತು. ಈ ಹಿನ್ನೆಲೆ ಮೃತನ ಕಡೆಯವರು ಜೆ.ಸಿ.ನಗರದ ಠಾಣೆಯ ಮುಂಭಾಗ ಪ್ರತಿಭಟನೆ ನಡೆಸಿದ ಹಿನ್ನೆಲೆ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಈ ಸಂದರ್ಭದಲ್ಲಿ ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಾಠಿ ಚಾರ್ಜ್ ಮಾಡಿದ ಘಟನೆ ವರದಿಯಾಗಿತ್ತು.
ಇದನ್ನೂ ಓದಿ:ಬೆಂಗಳೂರು ಪೊಲೀಸರ ವಶದಲ್ಲಿದ್ದ ವಿದೇಶಿ ಪ್ರಜೆ ಸಾವು ಆರೋಪ: ಠಾಣೆ ಮುಂದೆ ಹೈಡ್ರಾಮಾ, ಖಾಕಿಯಿಂದ ಲಾಠಿ ಚಾರ್ಜ್
ಪರಪ್ಪನ ಅಗ್ರಹಾರದಲ್ಲಿ ನೈಜೀರಿಯನ್ಸ್ ಅಪರಾಧಿಗಳ ಗಲಾಟೆ ಜೋರಾಗಿದೆ. ಸೆಂಟ್ರಲ್ ಜೈಲಿನಲ್ಲಿ ಬರೋಬ್ಬರಿ 150 ಮಂದಿ ನೈಜೀರಿಯನ್ಸ್ ಇದ್ದಾರೆ. ಇದರಲ್ಲಿ 20 ಮಂದಿ ಯುವತಿಯರಿದ್ದು, ಅಸಭ್ಯ ವರ್ತನೆ ತೋರುತ್ತಿದ್ದಾರೆ ಎನ್ನಲಾಗ್ತಿದೆ. ಎರಡು ಬ್ಯಾರಕ್ಗಳಲ್ಲಿ ಹಾಕಿದರೂ ಮಧ್ಯ ರಾತ್ರಿ ಅವರವರೇ ಜಗಳವಾಡಿಕೊಳ್ಳುತ್ತಿದ್ದಾರೆ ಎನ್ನುತ್ತಾರೆ ಹೆಸರು ಹೇಳಲಿಚ್ಛಿಸದ ಜೈಲಾಧಿಕಾರಿ.
ಪ್ರಶ್ನಿಸಲು ಹೋದ ಜೈಲಿನ ಸಿಬ್ಬಂದಿಗೆ ಅವಾಜ್ ಹಾಕಿ ಅನುಚಿತ ವರ್ತನೆ ತೋರುತ್ತಾರೆ. ಸರಿಯಾದ ಬಟ್ಟೆ ಧರಿಸದೇ ಜೈಲಿನಲ್ಲಿ ಮನಬಂದತೆ ನೈಜೀರಿಯನ್ಸ್ ಯುವತಿಯರು ಓಡಾಡುತ್ತಾರೆ. ಇತ್ತೀಚೆಗೆ ಜೈಲಾಧಿಕಾರಿಗಳಿಂದ ನೈಜೀರಿಯನ್ಸ್ ಅಪರಾಧಿಗಳಿಗೆ ವಾರ್ನಿಂಗ್ ಮಾಡಲಾಗಿದೆ. ಎಷ್ಟೇ ವಾರ್ನ್ ಮಾಡಿದರೂ ಸಿಬ್ಬಂದಿಗಳನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆಗೆ ಯತ್ನಿಸಲಾಗುತ್ತದೆ.
ಕಳೆದ ಎರಡು ತಿಂಗಳಲ್ಲಿ ಅತಿ ಹೆಚ್ಚು ನೈಜೀರಿಯನ್ ಪ್ರಜೆಗಳನ್ನು ಬಂಧಿಸಲಾಗಿದೆ. ಗಾಂಜಾ, ಡ್ರಗ್ಸ್, ವೇಶ್ಯಾವಾಟಿಕೆ ದಂಧೆ ಕೇಸ್ಗಳಲ್ಲಿ ಹಲವರನ್ನ ಬಂಧಿಸಲಾಗಿದೆ. ಕೇವಲ 70 ಮಂದಿಯಿದ್ದ ಜೈಲಿನಲ್ಲಿ ಈಗ 150 ಮಂದಿ ನೈಜೀರಿಯನ್ಸ್ ಇದ್ದಾರೆ. ಪಿಜ್ಜಾ, ಬರ್ಗರ್, ಬೇಕರಿ ಫುಡ್ ಬೇಕೆಂದು ನೈಜೀರಿಯನ್ಸ್ ಕಿರಿಕ್ ಮಾಡುತ್ತಾರೆ. ಜೈಲಿನ ಊಟ ನಮಗೆ ಬೇಡ, ತಿನ್ನುವುದಿಲ್ಲ ಎಂದು ಊಟ ಬಿಸಾಡಿ ಗಲಾಟೆ ಮಾಡುತ್ತಾರೆ. ನೈಜೀರಿಯನ್ಸ್ ಉಪಟಳಕ್ಕೆ ಬ್ಯಾರಕ್ ಹೋಗಲು ಸಿಬ್ಬಂದಿ ಭಯಪಡುತ್ತಿದ್ದಾರೆ.
ಕೋವಿಡ್ 19 ಹಿನ್ನೆಲೆ ಹೊರಗಿನ ಊಟ ತಿಂಡಿ ತಿನಿಸುಗಳಿಗೆ ಬ್ರೇಕ್ ಹಾಕಿರುವ ಜೈಲಾಧಿಕಾರಿಗಳ ಕ್ರಮದಿಂದ ಸಿಟ್ಟಿಗೆದ್ದು ಕೇಳುವ ಆಹಾರ ಕೊಡಿ ಎಂದು ಸಿಬ್ಬಂದಿ ಜತೆ ಗಲಾಟೆಗೆ ಇಳಿಯುತ್ತಾರೆ. ಬ್ಯಾರಕ್ನಲ್ಲಿರದೇ ಜೈಲಿನಲ್ಲಿ ಮನಬಂದಂತೆ ಓಡಾಡುತ್ತಿದ್ದಾರೆ. ಬ್ಯಾರಕ್ ಬಿಟ್ಟು ಬರದಂತೆ ಸೂಚಿಸಿದರೂ ಕೇರ್ ಮಾಡುವುದಿಲ್ಲ ಎಂದು ಅಧಿಕಾರಿಯೊಬ್ಬರು ಈಟಿವಿ ಭಾರತಕ್ಕೆ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ಸತ್ತ ಆಫ್ರಿಕನ್ ದೇಶದ ಪ್ರಜೆ ವಿದ್ಯಾರ್ಥಿಯಲ್ಲ ಎಂದ ರವಾಂಡ ರಾಯಭಾರ ಕಚೇರಿ ಅಧಿಕಾರಿ