ಕರ್ನಾಟಕ

karnataka

ETV Bharat / city

ವರದಕ್ಷಿಣೆ ಕಿರುಕುಳ ಆರೋಪ: ನವ ವಿವಾಹಿತೆ ಆತ್ಮಹತ್ಯೆ - ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿ

ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ನವ ವಿವಾಹತೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

bangalore
ನವ ವಿವಾಹಿತೆ ಆತ್ಮಹತ್ಯೆ

By

Published : Jun 7, 2021, 2:27 PM IST

ಬೆಂಗಳೂರು:ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ನವ ವಿವಾಹತೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

28 ವರ್ಷದ ಶ್ವೇತಾ ಮೃತ ನವ ವಿವಾಹತೆ. ಕಳೆದ ವರ್ಷ ಕೃಷ್ಣಮೂರ್ತಿ ಎಂಬುವರ ಜೊತೆ ಶ್ವೇತಾ ವಿವಾಹವಾಗಿತ್ತು. ಆರಂಭದಲ್ಲಿ ಅನ್ಯೋನ್ಯವಾಗಿದ್ದ ದಂಪತಿ ನಡುವೆ ಬಿರುಕು ಮೂಡಿದೆ‌. ಒಂದಲ್ಲೊಂದು ವಿಚಾರಕ್ಕೆ ಇಬ್ಬರ ನಡುವೆ ಗಲಾಟೆ ನಡೆಯುತ್ತಿತ್ತು. ಗಂಡನ ಹಿಂಸೆ ತಾಳಲಾರದೆ ತಾಯಿಗೆ ಕರೆ ಮಾಡಿ ನಿನ್ನೆ ಅಳಲು ತೋಡಿಕೊಂಡಿದ್ದಳು.

ಅನಂತರ ರೂಮ್​ಗೆ ಹೋಗಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಪಕ್ಕದ ಮನೆಯವರು ನೀಡಿದ ಮಾಹಿತಿ ಮೇರೆಗೆ ಪೋಷಕರು ಸ್ಥಳಕ್ಕೆ ಆಗಮಿಸಿದ್ದು, ಖಾಸಗಿ ಆಸ್ಪತ್ರೆ ದಾಖಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಘಟನೆ ಸಂಬಂಧ ಮಹಿಳೆಯ ಪೋಷಕರು ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಆಕೆಯ ಪತಿ ಹಾಗೂ ಕುಟುಂಬಸ್ಥರ ವಿರುದ್ಧ ದೂರು ನೀಡಿದ್ದಾರೆ.

ಇದನ್ನೂ ಓದಿ:3ನೇ ‌ಅಲೆಯಲ್ಲಿ ಮಕ್ಕಳು ಸೂಪರ್ ಸ್ಪ್ರೆಡರ್ಸ್ ಆಗ್ತಾರಾ? ಡಾ. ದೇವಿಶೆಟ್ಟಿ ಸಮಿತಿ ಹೇಳಿದ್ದೇನು?

ABOUT THE AUTHOR

...view details