ಬೆಂಗಳೂರು:ಸಿಡಿ ಹಿಂದೆ ಕೇವಲ ಕಾಂಗ್ರೆಸ್ ನಾಯಕರು ಮಾತ್ರವಲ್ಲ, ಬಿಜೆಪಿ ನಾಯಕರ ಕೈವಾಡ ಇದ್ದರೂ ಇರಬಹುದು ಎಂದು ಶಾಸಕ ಬಸನಗೌಡ ಯತ್ನಾಳ್ ಆರೋಪಿಸಿದ್ದಾರೆ.
ಸಿಡಿ ಹಿಂದೆ ಬಿಜೆಪಿ ನಾಯಕರ ಕೈವಾಡನೂ ಇರಬಹುದು: ಯತ್ನಾಳ್ ಈ ಕುರಿತು ಪ್ರತಿಕ್ರಿಯಿಸಿದ ಅವರು, ಸಿಡಿ ಹಿಂದೆ ಬಿಜೆಪಿ ನಾಯಕರ ಕೈವಾಡವೂ ಇದೆ. ಪತ್ರಕರ್ತನ ಪುತ್ರಿಯ ಬರ್ತ್ ಡೇ ಕಾರ್ಯಕ್ರಮಕ್ಕೆ ಯಾರ್ಯಾರು ಹೋಗಿದ್ದರು. ಬರೇ ಕಾಂಗ್ರೆಸ್ ಮುಖಂಡರು ಮಾತ್ರವಲ್ಲ. ಬಿಜೆಪಿ ನಾಯಕರೂ ಬರ್ತ್ ಡೇ ಪಾರ್ಟಿಗೆ ಹೋಗಿದ್ದರು. ಅವರ ಫೋಟೋಗಳನ್ನು ಬಿಡುಗಡೆ ಮಾಡಬೇಕು. ಕಾರ್ಯಕ್ರಮಕ್ಕೆ ಯಾರೆಲ್ಲ ಹೋಗಿದ್ದರು ಎಂಬುದನ್ನು ಬಹಿರಂಗಪಡಿಸಬೇಕು. ಎಸ್‌ಐಟಿಯಿಂದ ನ್ಯಾಯ ಸಿಗಲ್ಲ. ಎಸ್‌ಐಟಿಯು ಸಿಎಂ ಹಾಗೂ ವಿಜಯೇಂದ್ರ ಅವರ ಹಿಡಿತದಲ್ಲಿದೆ. ಹೀಗಾಗಿ, ಸಿಬಿಐ ತನಿಖೆ ಮಾಡಲು ಒತ್ತಾಯಿಸಿದೆ ಎಂದರು.
ನಾನು ಮೀಸಲಾತಿ ಹೋರಾಟ ಮಾತ್ರ ಸ್ಥಗಿತ ಮಾಡಿದ್ದೇನೆ. ಆದರೆ, ಭ್ರಷ್ಟಾಚಾರ ಹಾಗೂ ಕುಟುಂಬ ರಾಜಕಾರಣದ ವಿರುದ್ಧ ಹೋರಾಟ ನಿರಂತರ. ಭ್ರಷ್ಟಾಚಾರಿಗಳ ವಿರುದ್ಧ ಹೋರಾಟ ಮುಂದುವರೆಯುತ್ತದೆ. ನಾನು ಬಿಜೆಪಿ ಹಾಗೂ ಮೋದಿಯ ನಿಷ್ಠಾವಂತ ಬೆಂಬಲಿಗ ಎಂದು ಯತ್ನಾಳ್ ಹೇಳಿದರು.
ಓದಿ:ಪಂಚಮಸಾಲಿ ಹೋರಾಟ ಅಂತ್ಯ?: 6 ತಿಂಗಳು ಹೋರಾಟ ನಿಲ್ಲಿಸುವಂತೆ ಮನವಿ ಮಾಡಿದ್ದೇಕೆ ಯತ್ನಾಳ್?
ಸಮಗ್ರ ಮೀಸಲಾತಿ ಸೇರುವ ಎಲ್ಲ ಪ್ರಸ್ತಾವದ ಬಗ್ಗೆ ಸಿಎಂಗೆ ನಾನು ಮನವಿ ಮಾಡಿದ್ದೆ. ನಿವೃತ್ತ ನ್ಯಾಯಾಧೀಶರಿಂದ ವರದಿ ತರಿಸಿಕೊಂಡು ಸ್ಪಷ್ಟ ತೀರ್ಮಾನ ಎಂದು ಹೇಳಿದ್ದರು. ಸ್ವಾಮೀಜಿಗಳ ಹೋರಾಟ ಆರು ತಿಂಗಳ ಮಟ್ಟಿಗೆ ಸ್ಥಗಿತಗೊಳಿಸಲು ಮನವಿ ಮಾಡುತ್ತೇನೆ. ಆರು ತಿಂಗಳ ನಂತರ ನಾವು ಏನು ಮಾಡಬೇಕೆಂಬ ತೀರ್ಮಾನ ಮಾಡುತ್ತೇವೆ. ಸಿಎಂ ಸದನದಲ್ಲಿ ಭರವಸೆ ನೀಡಿದ್ದಾರೆ. ಆದರೆ, ಇದು ಮುಂದೂಡುವ ತಂತ್ರವಷ್ಟೇ. ನ್ಯಾ.ಸುಭಾಷ್ ಅಡಿ ನೇತೃತ್ವದ ಸಮಿತಿ ಕೇವಲ ಮುಂದೂಡುವ ತಂತ್ರವಾಗಿದೆ ಎಂದು ಮತ್ತೆ ಬಿಎಸ್ವೈ ಮೇಲೆ ಯತ್ನಾಳ್ ಗುಡುಗಿದರು.
ಸಿಎಂ ಮಾತ್ರವಲ್ಲ ಇಡೀ ಕುಟುಂಬವೇ ಭ್ರಷ್ಟಾಚಾರದಲ್ಲಿ ಭಾಗಿಯಾಗಿದೆ. ಎಲ್ಲ ವರ್ಗಾವಣೆಯು ಸಿಎಂ ಮನೆಯಿಂದಲೇ ಆಗೋದು. ಅದಲ್ಲದೆ, ಡಿ ಗ್ರೇಡ್ ವರ್ಗಾವಣೆ ಸಮೇತ ಸಿಎಂ ಕುಟುಂಬದಿಂದಲೇ ಆಗಬೇಕು. ಅಷ್ಟು ಭ್ರಷ್ಟಾಚಾರದಲ್ಲಿ ಸಿಎಂ ಮತ್ತು ಕುಟುಂಬ ತೊಡಗಿದೆ ಎಂದು ಗಂಭೀರ ಆರೋಪ ಮಾಡಿದರು.