ಕರ್ನಾಟಕ

karnataka

ETV Bharat / city

ಏಳು ವರ್ಷಗಳ ನಂತರ ಪ್ರತ್ಯಕ್ಷವಾಗಿ ಪತ್ನಿಗೆ ಶಾಕ್‌ ಕೊಟ್ಟ ಗಂಡ

2015ರಲ್ಲಿ ಕೆಲಸಕ್ಕೆಂದು ಹೋಗಿದ್ದ ಕೋಟೆಪ್ಪ ಅಲ್ಲಿಂದ ನಾಪತ್ತೆಯಾಗಿದ್ದ. ನಂತರ ಸವಿತಾ ಫೋನ್ ಮಾಡಿದಾಗ ಕೋಟೆಪ್ಪನ ಮೊಬೈಲ್​ ಸ್ವಿಚ್ ಆಫ್ ಆಗಿತ್ತು. ಅಲ್ಲದೇ, ಎಲ್ಲ ಕಡೆ ಶೋಧಿಸಿದರೂ ಗಂಡ‌ನ‌ ಬಗ್ಗೆ ಮಾಹಿತಿ‌ ಸಿಕ್ಕಿರಲಿಲ್ಲ. ಹೀಗಾಗಿ ಆಡುಗೋಡಿ ಪೊಲೀಸ್​ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು.

ನಾಪತ್ತೆಯಾಗಿದ್ದವ ಏಳು ವರ್ಷಗಳ‌ ಬಳಿಕ ಪ್ರತ್ಯಕ್ಷ
missing person

By

Published : Mar 31, 2022, 4:37 PM IST

ಬೆಂಗಳೂರು:ಪತ್ನಿಯ ಜೊತೆಗಿನ ಕಲಹದ ಕಾರಣದಿಂದ ನಾಪತ್ತೆಯಾಗಿದ್ದ ವ್ಯಕ್ತಿಯೊಬ್ಬ ಏಳು ವರ್ಷಗಳ ಬಳಿಕ‌‌ ಪ್ರತ್ಯಕ್ಷವಾಗಿದ್ದಾನೆ. ಬೆಂಗಳೂರಿನ ಆಡುಗೋಡಿ‌‌‌ ಪೊಲೀಸರ ವಿಚಾರಣೆ ವೇಳೆ ಅಚ್ಚರಿಯ ಹೇಳಿಕೆಯನ್ನೂ ಆತ ನೀಡಿದ್ದಾನೆ. ಪತ್ನಿಯ ಕಾಟ ತಾಳಲಾರದೆ ಮನೆ ಬಿಟ್ಟು ಹೋಗಿದ್ದೆ. ಈಗ ಮತ್ತೆ ಯಾವುದೇ ಕಾರಣಕ್ಕೂ ಆಕೆಯೊಂದಿಗೆ ಸಂಸಾರ ನಡೆಸಲಾರೆ ಎಂದಿದ್ದಾನೆ.

ಉತ್ತರ ಕರ್ನಾಟಕ ಮೂಲದ ಕೋಟೆಪ್ಪ ಈ ಹಿಂದೆ ಆಡುಗೋಡಿಯಲ್ಲಿ ವಾಸವಾಗಿದ್ದ.‌ ಖಾಸಗಿ ಕಂಪನಿಯಲ್ಲಿ ಕೆಲಸ‌ ಮಾಡಿಕೊಂಡಿದ್ದ‌ ಈತ 2012ರಲ್ಲಿ ಸವಿತಾ ಎಂಬುವವರನ್ನು ಪ್ರೀತಿಸಿ ಮದುವೆಯಾಗಿದ್ದ. ಪ್ರಾರಂಭದಲ್ಲಿ ದಂಪತಿ‌ ಅನ್ಯೋನ್ಯವಾಗಿದ್ದರು. ಆದರೆ, ಕೆಲ ವರ್ಷಗಳ ಬಳಿಕ ಇವರ ಸಂಸಾರದಲ್ಲಿ ಏರುಪೇರಾಗಿತ್ತು. ಅಂತೆಯೇ 2015ರಲ್ಲಿ ಕೆಲಸಕ್ಕೆ ಎಂದು ಹೋಗಿದ್ದ ಕೋಟೆಪ್ಪ ಅಲ್ಲಿಂದ ನಾಪತ್ತೆಯಾಗಿದ್ದ ಎನ್ನಲಾಗಿದೆ.

ನಂತರ ಸವಿತಾ ಪೋನ್ ಮಾಡಿದಾಗ ಕೋಟೆಪ್ಪನ ಮೊಬೈಲ್​ ಸ್ವಿಚ್ ಆಫ್ ಆಗಿತ್ತು. ಅಲ್ಲದೇ, ಎಲ್ಲ ಕಡೆ ಶೋಧಿಸಿದರೂ ಗಂಡ‌ನ‌ ಬಗ್ಗೆ ಮಾಹಿತಿ‌ ಸಿಕ್ಕಿರಲಿಲ್ಲ. ಹೀಗಾಗಿ ಆಕೆ ಆಡುಗೋಡಿ ಪೊಲೀಸ್​ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು.

ಪತಿಗಾಗಿ ಕಾಯುತ್ತಿದ್ದ ಪತ್ನಿಗೆ ಶಾಕ್:ಕಳೆದ ಏಳು ವರ್ಷದಿಂದ ನಾಪತ್ತೆಯಾಗಿದ್ದ ಕೋಟೆಪ್ಪ ಒಂದು ವಾರದ ಹಿಂದೆ ಖಾಸಗಿ ಬ್ಯಾಂಕ್​ನಲ್ಲಿ 10 ಸಾವಿರ ರೂ ಎಫ್​ಡಿ ಮಾಡಿಸಿದ್ದಾನೆ. ಇದರ ಸಂದೇಶ ಪತ್ನಿ ಸವಿತಾರ ಮೊಬೈಲ್​ಗೆ ಬಂದಿದೆ. ಅಲ್ಲದೇ, ಪತಿಯೇ ಎಫ್​ಡಿ ಮಾಡಿಸಿರಬೇಕೆಂಬುವುದನ್ನು ಮನಗಂಡ ಸವಿತಾ ಆಡುಗೋಡಿ ಠಾಣೆಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಅಂತೆಯೇ, ಪೊಲೀಸರು ಕೋಟೆಪ್ಪನನ್ನು ಪತ್ತೆ ಕರೆತಂದು ವಿಚಾರಣೆಗೊಳಪಡಿಸಿದ್ದಾರೆ. ಆಗ 'ನನ್ನ ಪತ್ನಿಯ ಕಾಟ ತಾಳಲಾರದೆ ಮನೆ ಬಿಟ್ಟು ಹೋಗಿದ್ದೆ. ಯಾವುದೇ ಕಾರಣಕ್ಕೂ ಆಕೆಯೊಂದಿಗೆ ಸಂಸಾರ ನಡೆಸಲಾರೆ' ಎಂದು ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾನೆ ಎಂದು ತಿಳಿದುಬಂದಿದೆ‌‌. ಇದು ಏಳು ವರ್ಷದಿಂದ ಪತಿಗಾಗಿ ಕಾಯುತ್ತಿದ್ದ ಪತ್ನಿಗೆ ಆಘಾತ ಉಂಟುಮಾಡಿದೆ.

ಏಳು ವರ್ಷ ಎಲ್ಲಿದ್ದ?:2015ರಲ್ಲಿ ಬೆಂಗಳೂರಿನಿಂದ ನಾಪತ್ತೆಯಾಗಿ ಕೋಟೆಪ್ಪ ಒಡಿಶಾದಲ್ಲಿ ವಾಸಿಸುತ್ತಿದ್ದ‌. ಆದರೆ, ಇತ್ತೀಚಿಗೆ ಹರಿಹರದಲ್ಲಿ ವಾಸವಾಗಿರುವ ತಮ್ಮ ತಂದೆ ಅನಾರೋಗ್ಯಕ್ಕೆ ಒಳಗಾಗಿದ್ದಾರೆ ಎಂಬ ಮಾಹಿತಿ ಅರಿತು ಊರಿಗೆ ಬಂದಿದ್ದ ಎಂದು ಪೊಲೀಸ್​ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ.

ಇದನ್ನೂ ಓದಿ:ಚಿತ್ರದುರ್ಗದ ಬಳಿ ಲಾರಿ - ಆಟೋ ನಡುವೆ ಅಪಘಾತ: ಅಂತ್ಯ ಸಂಸ್ಕಾರಕ್ಕೆ ಹೊರಟಿದ್ದ ಮೂವರ ದುರ್ಮರಣ

ABOUT THE AUTHOR

...view details