ಕರ್ನಾಟಕ

karnataka

ETV Bharat / city

ವಿದ್ಯಾಗಮ ಕಾರ್ಯವೈಖರಿ ಬಗ್ಗೆ ಕೇಂದ್ರ ಶಿಕ್ಷಣ ಸಚಿವರಿಗೆ ಪತ್ರ ಬರೆದ ಸುರೇಶ್ ಕುಮಾರ್

ರಾಜ್ಯ ಸರ್ಕಾರ ಕೋವಿಡ್ ಸಂದರ್ಭದಲ್ಲಿ ಶಾಲಾ ಶಿಕ್ಷಣ ಮುಂದುವರಿಕೆಗಾಗಿ ವರದಿ ನೀಡಲು ತಜ್ಞರ ಸಮಿತಿಯೊಂದನ್ನು ರಚಿಸಿದೆ. ಆ ಸಮಿತಿ ತಂತ್ರಜ್ಞಾನ ಆಧಾರಿತ ಶಿಕ್ಷಣಕ್ಕಾಗಿ ಅತ್ಯುತ್ತಮ ವರದಿ ನೀಡಿದೆ. ಸದ್ಯದ ಪರಿಸ್ಥಿತಿಯಲ್ಲಿ ನಮ್ಮ ಎಲ್ಲಾ ಶಿಕ್ಷಣ ಅಗತ್ಯತೆಗಳನ್ನು ಈಡೇರಿಸಿದೆ ಎಂದು ವಿದ್ಯಾಗಮ ಕಲಿಕಾ ಕಾರ್ಯಕ್ರಮದ ಯಶಸ್ವಿ ಕಾರ್ಯವೈಖರಿಯ ಬಗ್ಗೆ ಶಿಕ್ಷಣ‌ ಸಚಿವ ಸುರೇಶ್ ಕುಮಾರ್ ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೊಖ್ರಿಯಾಲ್​ಗೆ ಪತ್ರ ಬರೆದಿದ್ದಾರೆ.

minister-suresh-kumar-writes-letter-to-union-minister-of-education-about-the-vidyagama-kalike
ಸಚಿವ ಸುರೇಶ್ ಕುಮಾರ್

By

Published : Aug 31, 2020, 10:54 PM IST

ಬೆಂಗಳೂರು: ರಾಜ್ಯದಲ್ಲಿನ ವಿದ್ಯಾಗಮ ಕಲಿಕಾ ಕಾರ್ಯಕ್ರಮದ ಯಶಸ್ವಿ ಕಾರ್ಯವೈಖರಿಯ ಬಗ್ಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ‌ ಸಚಿವ ಸುರೇಶ್ ಕುಮಾರ್ ಅವರು ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೊಖ್ರಿಯಾಲ್​ಗೆ ಪತ್ರ ಬರೆದಿದ್ದಾರೆ.

ಕೋವಿಡ್ 19 ಹಿನ್ನೆಲೆ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ತೊಡಗಿಸಿಕೊಳ್ಳಲು ಪರ್ಯಾಯ ಮಾರ್ಗಗಳನ್ನು ಅಳವಡಿಸಕೊಳ್ಳಬೇಕಾಗಿದೆ. ತರಗತಿ ಪಾಠಕ್ಕೆ ಯಾವುದೇ ಪರ್ಯಾಯ ವ್ಯವಸ್ಥೆ ಇಲ್ಲ. ಆದರೆ ಪ್ರತಿ ಮಕ್ಕಳು ಶೈಕ್ಷಣಿಕವಾಗಿ ಲಾಭ ಪಡೆಯುವುದನ್ನು ನಾವು ಖಚಿತ ಪಡಿಸಬೇಕು.

ನಮ್ಮ ರಾಜ್ಯ ಸರ್ಕಾರ ಕೋವಿಡ್ ಸಂದರ್ಭದಲ್ಲಿ ಶಾಲಾ ಶಿಕ್ಷಣ ಮುಂದುವರಿಕೆಗಾಗಿ ವರದಿ ನೀಡಲು ತಜ್ಞರ ಸಮಿತಿಯೊಂದನ್ನು ರಚಿಸಿದೆ. ಆ ಸಮಿತಿ ತಂತ್ರಜ್ಞಾನ ಆಧಾರಿತ ಶಿಕ್ಷಣಕ್ಕಾಗಿ ಅತ್ಯುತ್ತಮ ವರದಿ ನೀಡಿದೆ. ಈ ವರದಿ ಸದ್ಯದ ಪರಿಸ್ಥಿತಿಯಲ್ಲಿ ಎಲ್ಲಾ ನಮ್ಮ ಶಿಕ್ಷಣ ಅಗತ್ಯತೆ ಈಡೇರಿಸುವ ನಿಟ್ಟಿನಲ್ಲಿ ಮಾರ್ಗಸೂಚಿ ರೂಪಿಸಲು ಅನುವು ಮಾಡಿದೆ ಎಂದು ಪತ್ರದಲ್ಲಿ ವಿವರಿಸಿದ್ದಾರೆ.

ಕೇಂದ್ರ ಶಿಕ್ಷಣ ಸಚಿವರಿಗೆ ಪತ್ರ ಬರೆದ ಸಚಿವ ಸುರೇಶ್ ಕುಮಾರ್
ಅನೇಕ ತಜ್ಞರು ಮತ್ತು ಪರಿಣಿತರ ಜೊತೆ‌ ಸುದೀರ್ಘ ಸಮಾಲೊಚನೆ ಮಾಡಿದ ಬಳಿಕ ವಿದ್ಯಾಗಮ ಹುಟ್ಟಿಕೊಂಡಿದೆ. ವಿದ್ಯಾಗಮ ಕಲಿಕೆ ಮೂಲಕ ಶಿಕ್ಷಣ ವಿದ್ಯಾರ್ಥಿಗಳ ಮನೆ‌ಬಾಗಿಲಿಗೆ ಬಂದಿದೆ. ಮಕ್ಕಳಿರುವ ಸ್ಥಳಕ್ಕೆ ಶಿಕ್ಷಕರು ತೆರಳಿ ಪಾಠ ಹೇಳಿಕೊಡುತ್ತಿದ್ದಾರೆ. ನಮ್ಮ ರಾಜ್ಯದಲ್ಲಿ ಈ ವಿನೂತನ ಕಾರ್ಯಕ್ರಮದ ಮೂಲಕ ವಿದ್ಯಾರ್ಥಿಗಳು ತಮ್ಮ ಗೆಳೆಯರ ಜೊತೆ ಕಲಿಕೆಯನ್ನು ಆನಂದಿಸುತ್ತಿದ್ದಾರೆ. ಈ ಉಪಕ್ರಮ ಅತ್ಯಂತ ವಿನೂತನ ಹಾಗೂ ವೈಜ್ಞಾನಿಕವಾಗಿದೆ ಎಂದು ಸಚಿವ ಸುರೇಶ್​ಕುಮಾರ್​ ಬಣ್ಣಿಸಿದ್ದಾರೆ.
ಕೇಂದ್ರ ಶಿಕ್ಷಣ ಸಚಿವರಿಗೆ ಪತ್ರ ಬರೆದ ಸಚಿವ ಸುರೇಶ್ ಕುಮಾರ್
ವಿದ್ಯಾಗಮ ನಿರಂತರ ಕಲಿಕಾ ಕಾರ್ಯಕ್ರಮವಾಗಿದ್ದು, ಇದು ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ ಸಹಕಾರಿಯಾಗಿದೆ. ಸಮಿತಿ ನೀಡಿರುವ ವರದಿ, ಕಾರ್ಯಕ್ರಮದ ರೂಪುರೇಷೆ, ಅಧಿಕಾರಿಗಳಿಗೆ ಕಳುಹಿಸಿದ ಸುತ್ತೋಲೆಗಳನ್ನು ನಾನು ನಿಮಗೆ ಕಳುಹಿಸಿದ್ದೇನೆ. ಈ ಉಪಕ್ರಮ ಜಾಗತಿಕವಾಗಿ ಜಾರಿಗೊಳಿಸಲು ಯೋಗ್ಯವಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

For All Latest Updates

ABOUT THE AUTHOR

...view details