ಬೆಂಗಳೂರು: ಆಗಸ್ಟ್ 23 ರಿಂದ 9-12ನೇ ತರಗತಿಯವರೆಗೆ ಶಾಲೆಗಳನ್ನು ತೆರೆಯಲು ಶಿಕ್ಷಣ ಸಚಿವರು ಆದೇಶ ಹೊರಡಿಸಿದ್ದಾರೆ. ಈಗಾಗಲೇ ತರಗತಿಗಳಲ್ಲಿ ಎಷ್ಟು ವಿದ್ಯಾರ್ಥಿಗಳು ಇರಬೇಕೆಂದು ನಿರ್ಧಾರವಾಗಿದೆ. ಕೋವಿಡ್ ವೈರಸ್ ಹರಡದಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದರು.
ಶಾಲೆಗಳಲ್ಲಿ ಕೊರೊನಾ ಸೋಂಕು ಹರಡದಂತೆ ಕ್ರಮ: ಸಚಿವ ಆರ್. ಅಶೋಕ್ - Minister R Ashok news
ಶಾಲೆಗಳಲ್ಲಿ ಕೊರೊನಾ ಸೋಂಕು ಹರಡದಂತೆ ಕ್ರಮ ಕೈಗೊಳ್ಳಲಾಗಿದೆ. ಸದ್ಯಕ್ಕೆ 9 -12ನೇ ತರಗತಿಗಳನ್ನು ಆರಂಭಿಸಿ ಪ್ರಾಯೋಗಿಕವಾಗಿ ನೋಡಿಕೊಂಡು, ನಂತರ ಹಂತ ಹಂತವಾಗಿ 7 ಮತ್ತು 8 ನೇ ತರಗತಿಗಳನ್ನು ತೆರೆಯಲಾಗುವುದು ಎಂದು ಸಚಿವ ಆರ್. ಅಶೋಕ್ ಹೇಳಿದರು.
ವಿಧಾನಸೌಧದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಬೆಂಗಳೂರಿನಲ್ಲಿ ಕಾರ್ಪೊರೇಷನ್, ಸರ್ಕಾರಿ ಶಾಲೆ ತೆರೆಯಬೇಕು. ಆದರೆ, ತರಗತಿಯಲ್ಲಿ ಹೆಚ್ಚು ಮಕ್ಕಳಿರಬಾರದು ಎಂಬ ಆದೇಶ ಹೊರಡಿಸಲಾಗಿದೆ. ಸದ್ಯಕ್ಕೆ 9-12ನೇ ತರಗತಿಗಳನ್ನು ಆರಂಭಿಸಿ ಪ್ರಾಯೋಗಿಕವಾಗಿ ನೋಡಿಕೊಂಡು, ನಂತರ ಹಂತ ಹಂತವಾಗಿ 7 ಮತ್ತು 8 ನೇ ತರಗತಿಗಳನ್ನು ಕೂಡ ತೆರೆಯಲಾಗುವುದು ಎಂದರು.
ಮಾಸ್ಕ್ ವಿಚಾರದಲ್ಲಿ ಮಾರ್ಷಲ್ಗಳ ಕಿರಿಕಿರಿ ಹಾಗೂ ರಾಜಕಾರಣಿಗಳು ಮಾಸ್ಕ್ ಹಾಕದ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ರಾಜಕಾರಣಿಗಳಾಗಲಿ ಅಥವಾ ಅಧಿಕಾರಿಗಳಾಗಲಿ ಎಲ್ಲರೂ ಮಾಸ್ಕ್ ಹಾಕುವುದು ಕಡ್ಡಾಯ. ಕೋವಿಡ್ ನಿಯಮ ಉಲ್ಲಂಘನೆ ಮಾಡಿದರೆ ದಂಡ ಕಟ್ಟಬೇಕಾಗುತ್ತದೆ. ದೆಹಲಿಯಲ್ಲಿ 5 ಸಾವಿರ ರೂ. ದಂಡ ಹಾಕಲಾಗುತ್ತದೆ. ನಮ್ಮಲ್ಲಿಯೇ ಮಾಸ್ಕ್ ದಂಡದ ದರ ಕಡಿಮೆ ಇದೆ. ನಿಯಮಗಳನ್ನು ಎಲ್ಲರೂ ಪಾಲಿಸಬೇಕು ಎಂದರು.