ಬೆಂಗಳೂರು:ಹಿಜಾಬ್ ಸಂಘರ್ಷದ ಹಿಂದೆ ಎಸ್ಡಿಪಿಐ ಬೆಂಬಲಿತ CFI ಸಂಘಟನೆ ಇರೋ ಮಾಹಿತಿ ಇದೆ. ಈ ಬಗ್ಗೆ ತನಿಖೆ ಬಳಿಕ ಎಲ್ಲವೂ ಗೊತ್ತಾಗಲಿದೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದರು.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಇದರ ಹಿಂದೆ CFI- ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಇದೆ ಅಂತ ಗೊತ್ತಾಗಿದೆ. ತನಿಖೆ ನಡೆಯುತ್ತಿದ್ದು ಶೀಘ್ರವೇ ವರದಿ ಬರಲಿದೆ. ಈಗಾಗಲೇ ಗೃಹಸಚಿವರ ಜೊತೆ ಮಾತನಾಡಿದ್ದೇನೆ. ತನಿಖೆ ಮಾಡಿ, ಸಮಸ್ಯೆ ಬಗೆಹರಿಸಲು ಮನವಿ ಮಾಡಿದ್ದೇವೆ. ಇದರ ಹಿಂದೆ ಯಾರು ಯಾರಿದ್ದಾರೆ ಎನ್ನೋ ಬಗ್ಗೆ ತನಿಖೆ ಆಗಲಿ. ತನಿಖೆ ಆಗಬೇಕು ಎನ್ನುವ ಹಂತದಲ್ಲಿದೆ, ಆದೇಶ ಆಗಿಲ್ಲ. ರಾಜ್ಯದೆಲ್ಲೆಡೆ ಹರಡಿಸಬೇಕು ಅಂತ ಕೆಲವರು ಹೊರಟಾಗ ತನಿಖೆ ಅಗತ್ಯವಿದೆ ಅಂತ ಅನಿಸುತ್ತಿದೆ. ಈ ಬಗ್ಗೆ ತನಿಖೆ ಬಳಿಕ ಎಲ್ಲವೂ ಗೊತ್ತಾಗುತ್ತದೆ. ಯಾರು ಈ ಘಟನೆ ಹಿಂದೆ ಇದ್ದಾರೆ ಎಂಬ ತನಿಖೆ ಆಗುತ್ತದೆ. ಆ ಮೇಲೆ ಕ್ರಮ ತಗೊಳುತ್ತೇವೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ರಜೆ ತೀರ್ಮಾನ ಕೈಗೊಳ್ಳಲು ಸೂಚನೆ:
5 ಸಾವಿರಕ್ಕೂ ಹೆಚ್ಚು ಪಿಯುಸಿ ಕಾಲೇಜು ನಡೆಯುತ್ತಿವೆ. 10-15 ಕಾಲೇಜಿನಲ್ಲಿ ಸಂಘರ್ಷದ ವಾತಾವರಣ ಶುರುವಾಗಿದೆ. ಕೆಲ ಪದವಿ ಕಾಲೇಜಿನಲ್ಲಿ ಸಂಘರ್ಷ ಉದ್ಭವ ಆಗಿದೆ. ಎಲ್ಲಿ ಕಾನೂನು ಸುವ್ಯವಸ್ಥೆ ಸಮಸ್ಯೆ ಆಗುತ್ತೆ ಅಲ್ಲಿ ಎರಡು ದಿನ ರಜೆ ಕೊಡಿ ಎಂದು ಸೂಚನೆ ನೀಡಲಾಗಿದೆ ಎಂದರು.
ಡಿಡಿಪಿಯುಗಳು ಡಿಸಿಗಳ ಜೊತೆ ಚರ್ಚೆ ಮಾಡಿ ರಜೆ ಕೊಡುವ ಅಧಿಕಾರ ಕೊಡಲಾಗಿದೆ. ರಾಜ್ಯದಲ್ಲಿ ಅನೇಕ ವಿದ್ಯಾರ್ಥಿಗಳು ಸಮವಸ್ತ್ರ ಧರಿಸಿ ಬರ್ತಿದ್ದಾರೆ. ಪರೀಕ್ಷೆ, ತರಗತಿ ಚೆನ್ನಾಗಿ ನಡೆಯುತ್ತಿವೆ. ಬಹುತೇಕ ವಿದ್ಯಾರ್ಥಿಗಳು ನಿಯಮ ಪಾಲನೆ ಮಾಡುತ್ತೇವೆ ಅಂತಿದ್ದಾರೆ. ಬಾಗಲಕೋಟೆ, ವಿಜಯಪುರ ಸೇರಿ ಹಲವು ಕಡೆ ಸ್ವಲ್ಪ ಸಮಸ್ಯೆ ಇವತ್ತು ಆಗಿದೆ. ಡಿಸಿಗಳ ಜೊತೆ ಚರ್ಚೆ ಮಾಡಿ, ಡಿಡಿಪಿಯುಗಳು ರಜೆ ಘೋಷಣೆ ಮಾಡಲು ಸೂಚನೆ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದರು.
ಒಂದು ಶಾಲೆಯಲ್ಲಿ ಆರಂಭವಾದ ಗಲಾಟೆ. ಕುಂದಾಪುರ ಕಾಲೇಜಿನಲ್ಲಿ ನೂರಾರು ಜನರ ಬಳಿ ತೆಗೆದುಕೊಂಡು ಹೋದ್ರು. ರಾಜಕೀಯ ನಾಯಕರು ಶಕ್ತಿ ತುಂಬಲು, ತುಪ್ಪ ಸುರಿಯೋ ಕೆಲಸ ಮಾಡಿದ್ರು. ಶಾಲಾ ಕಾಲೇಜು ನಡೆಯುವಾಗ ಮಕ್ಕಳು ಪ್ರತಿಭಟನೆ ನಡೆಸುತ್ತಿದ್ದರು. ಅದೆಲ್ಲವನ್ನೂ ಬಿಟ್ಟು, ಸಮವಸ್ತ್ರ ಧರಿಸಿ ತರಗತಿಗೆ ಹಾಜರಾಗುವಂತೆ ಸಚಿವರು ಸೂಚನೆ ನೀಡಿದರು.
ರಾಜಕೀಯ ಬೇಳೆ ಬೇಯಿಸಿಕೊಳ್ಳಬೇಕು ಅನ್ನೋದಾಗಿದ್ರೆ. ಉಡುಪಿ ಘಟನೆ ಒಂದು ತಿಂಗಳು ತಣ್ಣಗೆ ಕಾಪಾಡುತ್ತಿರಲಿಲ್ಲ ನಾವು. ಶಾಂತಿ ಸೌಹಾರ್ದಯುತವಾಗಿಯೇ ಇದನ್ನು ನಾವು ಬಗೆಹರಿಸಿದ್ದೇವೆ. ಹಿಜಾಬ್ ಹಾಕ್ಕೊಂಡೇ ಬರಬೇಕು ಅಂದ್ರೆ ಆನ್ಲೈನ್ ಎಜುಕೇಷನ್ ಪಾಲಿಸಿ ಅಂತ ಅಲ್ಲಿಯ ಎಸ್ಡಿಎಂ ಅಧ್ಯಕ್ಷರು ಹೇಳಿದ್ದರು. ಮೊದಲು ಗಲಾಟೆಯನ್ನು ರಾಜ್ಯವ್ಯಾಪಿ ನಿಯಂತ್ರಣ ಮಾಡೋ ಕೆಲಸ ಮಾಡಿದ್ವಿ. ಆದ್ರೆ ಶಾಂತಿಯುತವಾದಾಗ ಇದು ಹಬ್ಬಿಸೋ ಕೆಲಸ ಕೆಲವರು ಮಾಡಿದ್ರು. ಉಡುಪಿಯಿಂದ ಕುಂದಾಪುರಕ್ಕೆ ತೆಗೆದುಕೊಂಡು ಹೋಗೋ ಕೆಲಸ ಮಾಡಿದರು. ರಾಜಕೀಯ ನಾಯಕರು ತುಪ್ಪ ಸುರಿಯೋ ಕೆಲಸ ಮಾಡಿದಾಗ ಇದು ದೊಡ್ಡದಾಗಿದೆ. ಪಾಕಿಸ್ತಾನಕ್ಕೆ ಹೋಗಿ, ಇದು ಪಾಕಿಸ್ತಾನ ಅಲ್ಲ ಅಂತ ಯಾರು ಪ್ರಚೋದನಾಕಾರಿ ಹೇಳಿಕೆ ಕೊಡಬಾರದು ಎಂದು ಆಗ್ರಹಿಸಿದರು.
ಆನ್ ಲೈನ್ ಶಿಕ್ಷಣ ಸಮರ್ಪಕ ಅಲ್ಲ:
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯರ ಆನ್ಲೈನ್ ತರಗತಿ ಆರಂಭಿಸಿ ಎಂಬ ಆಗ್ರಹಕ್ಕೆ ನಮ್ಮ ರಾಜ್ಯದಲ್ಲಿ ಕೊರೊನಾ ಸಮಯದಲ್ಲಿ ಭೌತಿಕ ತರಗತಿ ನಡೆಸಿದ್ದೇವೆ. 10-12 ಕಾಲೇಜಿಗೋಸ್ಕರ ಎಲ್ಲಾ ಮಕ್ಕಳಿಗೆ ತೊಂದರೆ ಕೊಡಲು ಸಾಧ್ಯವಿಲ್ಲ. ಮಕ್ಕಳು ಕಾನೂನು ಪಾಲನೆ ಮಾಡಬೇಕು. ಕಾನೂನು ಸುವ್ಯವಸ್ಥೆ ಕಾಪಾಡಬೇಕು. ಪಿಯುಸಿ ವೇಳಾಪಟ್ಟಿ ಪ್ರಕಟ ಮಾಡಲಾಗಿದೆ. ಮಕ್ಕಳು ಸಮವಸ್ತ್ರ ಧರಿಸಿ ಕಾಲೇಜಿಗೆ ಬರಬೇಕು ಎಂದರು.
ಶಿವಮೊಗ್ಗದಲ್ಲಿ ರಾಷ್ಟ್ರಧ್ವಜ ಇಳಿಸಿ ಕೇಸರಿ ಧ್ವಜ ಏರಿಸಲು ಹೋಗಿದ್ರೆ ಅದು ಸರಿಯಲ್ಲ. ಈ ಬಗ್ಗೆ ಮಾಹಿತಿ ಪಡೆದು ಅಗತ್ಯ ಕ್ರಮ ತಗೋತೀವಿ. ಕೆಲವರು ಧರ್ಮ ಪಾಲನೆ ನಮ್ಮ ಹಕ್ಕು ಎನ್ನುತ್ತಿದ್ದಾರೆ. ಪ್ರಚೋದನೆ ನೀಡುವ ಮಾತು ಆಡುತ್ತಿದ್ದಾರೆ. ಅನೇಕ ನಾಯಕರು ಏನೇನೋ ಮಾತಾಡ್ತಿದ್ದಾರೆ. ವಿದ್ಯಾರ್ಥಿಗಳು ಶಾಂತಿ ಕದಡುವ ಕೆಲಸ ಮಾಡಬಾರದು ಎಂದು ಮನವಿ ಮಾಡಿದರು.
ಓದಿ: ಮಂಡ್ಯ: ನೂರಾರು ಕೇಸರಿ ಶಾಲು ತೊಟ್ಟ ವಿದ್ಯಾರ್ಥಿಗಳ ವಿರುದ್ಧ ಮುಸ್ಲಿಂ ವಿದ್ಯಾರ್ಥಿನಿ ಏಕಾಂಗಿ ಹೋರಾಟ!