ಬೆಂಗಳೂರು:ಗೌರಿ, ಗಣೇಶ ಹಬ್ಬದ ಪ್ರಯುಕ್ತ ಮಹಾಲಕ್ಷ್ಮೀ ಲೇಔಟ್ ನಾಗಪುರ ವಾರ್ಡ್‌ನಲ್ಲಿರುವ ಶಾಸಕರ ಕಚೇರಿಯಲ್ಲಿ ಸಚಿವ ಗೋಪಾಲಯ್ಯ ಶಾಸಕರ ಅನುದಾನದಡಿ ವಿಶೇಷ ಚೇತನರಿಗೆ ತ್ರಿಚಕ್ರ ವಾಹನಗಳನ್ನು ಉಚಿತವಾಗಿ ವಿತರಿಸಿದರು.
ಶಾಸಕರ ಅನುದಾನದಡಿ ವಿಶೇಷಚೇತನರಿಗೆ ತ್ರಿಚಕ್ರವಾಹನ ವಿತರಿಸಿದ ಸಚಿವ ಗೋಪಾಲಯ್ಯ - ಶಾಸಕರ ಅನುದಾನದಡಿ 28 ವಿಕಲಚೇತನರಿಗೆ ತ್ರಿ ಚಕ್ರವಾಹನ
ಸರ್ಕಾರದ ಅನುದಾನದ ತ್ರಿಚಕ್ರ ವಾಹನಗಳನ್ನು ಸರಿಯಾಗಿ ಬಳಸಿಕೊಳ್ಳಬೇಕು. ನಮಗೆ ಯಾರೂ ಏನೂ ಸಹಾಯ ಮಾಡುವುದಕ್ಕೆ ಆಗುವುದಿಲ್ಲ ಎಂದು ಮರುಕ ಪಡಬಾರದು. ಧೈರ್ಯದಿಂದ ಎಲ್ಲರೂ ಸೇರಿ ಜೀವನ ನಡೆಸಲು ಸರ್ಕಾರ ನಿಮ್ಮೆಲ್ಲರಿಗೂ ಈ ವ್ಯವಸ್ಥೆ ಕಲ್ಪಿಸಿದೆ ಎಂದರು.
ಬಳಿಕ ಮಾತನಾಡಿದ ಸ್ಥಳೀಯ ಶಾಸಕರು ಹಾಗೂ ಆಹಾರ, ನಾಗರಿಕ ಪೂರೈಕೆ ಸರಬರಾಜು ಇಲಾಖೆ ಸಚಿವರೂ ಆಗಿರುವ ಕೆ. ಗೋಪಾಲಯ್ಯ, 'ಸರ್ಕಾರದ ಅನುದಾನದ ತ್ರಿಚಕ್ರ ವಾಹನಗಳನ್ನು ಸರಿಯಾಗಿ ಬಳಸಿಕೊಳ್ಳಬೇಕು. ನಮಗೆ ಯಾರೂ ಏನೂ ಸಹಾಯ ಮಾಡುವುದಕ್ಕೆ ಆಗುವುದಿಲ್ಲ ಎಂದು ಮರುಕ ಪಡಬಾರದು. ಧೈರ್ಯದಿಂದ ಎಲ್ಲರೂ ಸೇರಿ ಜೀವನ ನಡೆಸಲು ಸರ್ಕಾರ ನಿಮ್ಮೆಲ್ಲರಿಗೂ ಈ ವ್ಯವಸ್ಥೆ ಕಲ್ಪಿಸಿದೆ. ಇದರ ಪ್ರಯೋಜನ ಪಡೆದು ಸ್ವಾವಲಂಬಿಯಾಗಿ ಬದುಕು ನಡೆಸಿ' ಎಂದು ಫಲಾನುಭವಿಗಳಿಗೆ ಕಿವಿಮಾತು ಹೇಳಿದರು.
ಇದೇ ವೇಳೆ, ನಾಡಿನ ಜನರಿಗೆ ಹಬ್ಬದ ಶುಭಾಶಯಗಳನ್ನು ಹೇಳಿದರು. ಒಟ್ಟು 28 ಫಲಾನುಭವಿಗಳಿಗೆ ವಾಹನಗಳನ್ನು ನೀಡಲಾಯಿತು.