ಕರ್ನಾಟಕ

karnataka

ETV Bharat / city

ರಾಜ್ಯ ಬಿಜೆಪಿ ಸರ್ಕಾರಕ್ಕೆ 1 ವರ್ಷ.. ಸಸಿ ನೆಟ್ಟು ಸಂಭ್ರಮಿಸಿದ ಸಚಿವ ಗೋಪಾಲಯ್ಯ - plant sapling

ಮುಂದಿನ 3 ವರ್ಷಗಳ ಕಾಲ ಹೀಗೆ ಜನಪರ ಆಡಳಿತ, ಎಲ್ಲ ವರ್ಗದ ಜನರ ಕಲ್ಯಾಣಕ್ಕಾಗಿ ಮಹತ್ವದ ಯೋಜನೆಗಳನ್ನು ಅನುಷ್ಠಾನಕ್ಕೆ ಸಿಎಂ ಬಿಎಸ್‌ವೈ ಅವರ ಕೈ ಬಲಪಡಿಸ್ತೇವೆ..

minister-gopalya-drive-to-plant-saplings
ಸಚಿವ ಗೋಪಾಲಯ್ಯ

By

Published : Jul 28, 2020, 4:42 PM IST

ಬೆಂಗಳೂರು : ರಾಜ್ಯ ಬಿಜೆಪಿ ಸರ್ಕಾರ ಒಂದು ವರ್ಷ ಪೂರೈಸಿದ ಹಿನ್ನೆಲೆ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ ಗೋಪಾಲಯ್ಯ ಸಸಿ ನೆಟ್ಟು ಸಂಭ್ರಮಿಸಿದ್ದಾರೆ. ಇಂದು ಮಹಾಲಕ್ಷ್ಮಿಲೇಔಟ್ ವಿಧಾನಸಭಾ ಕ್ಷೇತ್ರದ ವ್ಯಾಪ್ತಿ ಬರುವ ಶಂಕರಮಠ ವಾರ್ಡ್​ನ ಕುರುಬರಹಳ್ಳಿಯ ಚಾಲುಕ್ಯ ವೃತ್ತದ ಪಾರ್ಕ್​ನಲ್ಲಿ ಸಸಿ ನೆಟ್ಟರು.

ಸಸಿ ನೆಡುವ ಕಾರ್ಯಕ್ಕೆ ಸಚಿವ ಗೋಪಾಲಯ್ಯ ಚಾಲನೆ

ಈ ವೇಳೆ ಮಾತನಾಡಿದ ಸಚಿವರು, ನಮ್ಮ ರಾಜ್ಯದ ಜನಪ್ರಿಯ ಮುಖ್ಯ ಮಂತ್ರಿಗಳಾದ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ವರ್ಷ ಪೂರೈಸಿದೆ. ಮುಂದಿನ 3 ವರ್ಷಗಳ ಕಾಲ ಹೀಗೆ ಜನಪರ ಆಡಳಿತ, ಎಲ್ಲ ವರ್ಗದ ಜನರ ಕಲ್ಯಾಣಕ್ಕಾಗಿ ಮಹತ್ವದ ಯೋಜನೆಗಳನ್ನು ಅನುಷ್ಠಾನಕ್ಕೆ ತರಲು ಸಚಿವ ಸಂಪುಟದ ಎಲ್ಲ ಸದಸ್ಯರು ಸಿಎಂ ಕೈ ಬಲಪಡಿಸುತ್ತೇವೆ ಎಂದರು.

ABOUT THE AUTHOR

...view details