ಮಂಗಳೂರು:ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಯುಎಇಗೆ ಸಂಚಾರ ಮಾಡುತ್ತಿದ್ದ ವಿಮಾನ ಸೇವೆ ಇಂದಿನಿಂದ ಆರಂಭವಾಗಿದೆ. ಕೋವಿಡ್ ಸೋಂಕು ಪರೀಕ್ಷೆಗೆ ಒಳಪಟ್ಟವರಿಗೆ ಮಾತ್ರ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗಿದೆ.
ಇಂದು ಮಧ್ಯಾಹ್ನ 2.45ಕ್ಕೆ ಯುಎಇಗೆ ಪ್ರಯಾಣಿಕರನ್ನು ಹೊತ್ತು ಹೊರಟ ವಿಮಾನವು ತಿರುವನಂತಪುರಂಗೆ ಸಾಗಿ ಅಲ್ಲಿಂದ ದುಬೈಗೆ ಸಾಗಿದೆ. ಯುಎಇ ಸರಕಾರದ ಷರತ್ತುಬದ್ಧ ನಿಯಮದಂತೆ ಪ್ರತಿ ಪ್ರಯಾಣಿಕನು ವಿಮಾನ ಏರುವ ಮೊದಲು ವಿಮಾನ ನಿಲ್ದಾಣದಲ್ಲಿ ಆರು ಗಂಟೆಯೊಳಗಿನ ಆರ್ಟಿಪಿಸಿಆರ್ ತಪಾಸಣೆಗೆ ಒಳಗಾಗಬೇಕು.