ಕರ್ನಾಟಕ

karnataka

ETV Bharat / city

ತುಂಬಿದ ಕೆರೆಯಲ್ಲಿದ್ದ ಟಿಸಿ ಫ್ಯೂಸ್‌ ತೆಗೆದು ಅವಘಡ ತಪ್ಪಿಸಿದ ಲೈನ್‌ಮ್ಯಾನ್ - ದೊಡ್ಡಬಳ್ಳಾಪುರ ಲೈನ್​ ಮ್ಯಾನ್​

ತುಂಬಿದ ಕರೆಯಲ್ಲಿ ಮುಳುಗುವ ಹಂತದಲ್ಲಿದ್ದ ಜೋಡಿ ವಿದ್ಯುತ್ ಕಂಬಗಳ ಎಲ್.ಟಿ.ಡಿಸ್ಟ್ರಿಬ್ಯೂಷನ್ ಬಾಕ್ಸ್‌ನಿಂದ ಫ್ಯೂಸ್​ ತೆಗೆಯುವ ಮೂಲಕ ಮುಂದೆ ನಡೆಯಬಹುದಾಗಿದ್ದ ದೊಡ್ಡ ಅವಘಡವನ್ನು ಲೈನ್‌ಮ್ಯಾನ್ ತಪ್ಪಿಸಿದರು.

lineman-missed-huge-disaster-by-removing-tc-pews-in-lake
ಲೈನ್​ ಮ್ಯಾನ್

By

Published : Nov 21, 2021, 1:24 PM IST

ದೊಡ್ಡಬಳ್ಳಾಪುರ:ಪ್ರಾಣ ಪಣಕ್ಕಿಟ್ಟುಲೈನ್‌ಮ್ಯಾನ್​ ಒಬ್ಬರು ತುಂಬಿದ ಕೆರೆಯ ಮಧ್ಯೆ ಇದ್ದ ಜೋಡಿ ವಿದ್ಯುತ್ ಕಂಬದ ಎಲ್.ಟಿ ಡಿಸ್ಟ್ರಿಬ್ಯೂಷನ್ ಬಾಕ್ಸ್‌ನಿಂದ ಫ್ಯೂಸ್​ ತೆಗೆಯುವ ಮೂಲಕ ಅವಘಡ ತಪ್ಪಿಸಿದ್ದಾರೆ.


ನಿರಂತರ ಮಳೆಯಿಂದ ತಾಲೂಕಿನ ಅರೇಹಳ್ಳಿ ಗುಡ್ಡದಹಳ್ಳಿ ಕೆರೆ ತುಂಬಿದೆ. ಇದರಿಂದ ಕೆರೆಯ ನಡುವೆ ಸುತ್ತಮುತ್ತಲಿನ ಗ್ರಾಮಗಳಿಗೆ ವಿದ್ಯುತ್ ಪೂರೈಕೆಗಾಗಿ ಟಿ.ಸಿ.ಜೋಡಿ ವಿದ್ಯುತ್ ಕಂಬಗಳನ್ನು ಅಳವಡಿಸಲಾಗಿತ್ತು. ಕೆರೆಯಲ್ಲಿ ನೀರಿನ ಮಟ್ಟ ಹೆಚ್ಚಾಗುತ್ತಿದಂತೆ ಎಲ್.ಟಿ ಡಿಸ್ಟ್ರಿಬ್ಯೂಷನ್ ಬಾಕ್ಸ್ ಮುಳುಗುವ ಹಂತದಲ್ಲಿತ್ತು. ಒಂದು ವೇಳೆ ಬಾಕ್ಸ್ ಮುಳುಗಿದ್ದರೆ ಬಹುದೊಡ್ಡ ಅನಾಹುತಕ್ಕೆ ಕಾರಣವಾಗುತ್ತಿತ್ತು.

ಈ ಪರಿಸ್ಥಿತಿಯ ಗಂಭೀರತೆ ಅರಿತ ಲೈನ್‌ಮ್ಯಾನ್ ನೂತನ್ ಪ್ರಸಾದ್ ಅವರು ಕೆರೆಯಲ್ಲಿದ್ದ ಟಿ.ಸಿ ಬಳಿಗೆ ಹೋಗಿ ಡೋಲೋ ಫ್ಯೂಸ್‌ ಅನ್ನು ಪ್ಲಾಸ್ಟಿಕ್ ಪೈಪ್ ಮೂಲಕ ತೆಗೆದು ಹಾಕಿದರು. ಇದರಿಂದ ಭವಿಷ್ಯದಲ್ಲಿ ಸಂಭವಿಸಬಹುದಾದ ಅವಘಡವನ್ನು ತಪ್ಪಿಸಿದರು. ಲೈನ್‌ಮ್ಯಾನ್ ಕಾರ್ಯಕ್ಕೆ ಇಲಾಖೆಯ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ABOUT THE AUTHOR

...view details