ಬೆಂಗಳೂರು: ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಚಿನ್ನಾಭರಣ ತೆಗೆದುಕೊಂಡು ವಂಚಿಸಿರುವ(bangalore fraud case) ಆರೋಪದ ಮೇಲೆ ತಾಯಿಯೇ ಮಗಳ ಮೇಲೆ ದೂರು(lady complaint against her daughter) ದಾಖಲಿಸಿರುವ ಘಟನೆ ರಾಜಧಾನಿಯ ಜೆಪಿ ನಗರ ಪೊಲೀಸ್ ಠಾಣೆ(jp nagar police station) ವ್ಯಾಪ್ತಿಯಲ್ಲಿ ನಡೆದಿದೆ.
ಸುಮಾರು 4 ಕೋಟಿ ರೂ. ಮೌಲ್ಯದ 7.5 ಕೆಜಿ ವಜ್ರ ಹಾಗೂ ಚಿನ್ನಾಭರಣ ತೆಗೆದುಕೊಂಡು ಮಗಳು ನಾಪತ್ತೆಯಾಗಿದ್ದಾಳೆ (daughter escaped) ಎಂದು ಮಗಳ ವಿರುದ್ಧವೇ ತಾಯಿ ದೂರು ನೀಡಿದ್ದಾರೆ. ವಿಜಯಲಕ್ಷ್ಮಿ ಎನ್ನುವವರು ಮಗಳು ತೇಜವಂತಿ(Accused tejavanti) ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಈ ಸಂಬಂಧ ಜೆ.ಪಿ ನಗರ ಪೊಲೀಸ್ ಠಾಣೆಯಲ್ಲಿ ಎಫ್.ಐ.ಆರ್ ದಾಖಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.