ಕರ್ನಾಟಕ

karnataka

By

Published : Jun 16, 2021, 7:46 AM IST

ETV Bharat / city

ಹಾಸಿಗೆ ಕೊರತೆಗೆ ಬೆಂಗಳೂರಲ್ಲೇ 15 ಸಾವಿರ ಸಾವು: 3ನೇ ಅಲೆಯಲ್ಲಾದ್ರೂ ಎಚ್ಚೆತ್ತುಕೊಳ್ಳುತ್ತಾ ಸರ್ಕಾರ?

ಕೊರೊನಾ ಎರಡನೇ ಅಲೆ ಇನ್ನೇನು ತನ್ನ ಪ್ರತಾಪವನ್ನು ಕಡಿಮೆ ಮಾಡುತ್ತಿದೆ ಎನ್ನುವಾಗಲೇ ಮೂರನೇ ಅಲೆ ಸುದ್ದಿ ಕೇಳಿದೆ. ಹಾಗಾಗಿ ರಾಜ್ಯದಲ್ಲಿ ಟ್ರಯಾಜ್ ಸೆಂಟರ್ ಹಾಗೂ ವಿಧಾನಸಭಾ ಕ್ಷೇತ್ರಕ್ಕೆ ಒಂದರಂತೆ ಇರುವ ಸಿಸಿಸಿ ಕೇಂದ್ರಗಳನ್ನು ಮುಚ್ಚದಿರಲು ಸರ್ಕಾರ ತೀರ್ಮಾನಿಸಿದೆ. ಅಲ್ಲದೆ ಇಡೀ ರಾಜ್ಯದಲ್ಲಿ ಮೂರನೇ ಅಲೆಗೆ ಸಿದ್ಧತೆಯಾಗಿ ಒಟ್ಟು 1500 ಕೋಟಿ ರೂ ವೆಚ್ಚದಲ್ಲಿ ಆಸ್ಪತ್ರೆಗಳ ಬೆಡ್, ಮೂಲಸೌಕರ್ಯ ಹೆಚ್ಚಳ ಹಾಗೂ ವೈದ್ಯರು ಸಿಬ್ಬಂದಿಗಳ ನೇಮಕಕ್ಕೆ ಖರ್ಚು ಮಾಡಲು ನಿರ್ಧರಿಸಿದೆ.

Bangalore
ಹಾಸಿಗೆ ಕೊರತೆ

ಬೆಂಗಳೂರು:ಯಾರೂ ಊಹಿಸಲೂ ಸಾಧ್ಯವಾಗದ ರೀತಿಯಲ್ಲಿ ಎರಡನೇ ಅಲೆಯ ಕೋವಿಡ್ ಸೋಂಕು ಜನರಿಗೆ ಹರಡಿತು. ನಗರದಲ್ಲಿ ಮೆಡಿಕಲ್ ಎಮರ್ಜೆನ್ಸಿ ಘೋಷಣೆಯಾಗಿತ್ತು. 26 ಸಾವಿರವರೆಗೂ ಪ್ರತಿನಿತ್ಯ ಕೋವಿಡ್ ಸೋಂಕು ಪ್ರಕರಣ ದೃಢಪಡುತ್ತಿದ್ದವು. ಇತ್ತ ಶೇ.90 ರಷ್ಟು ಮಂದಿ ಹೋಂ ಐಸೋಲೇಷನ್​ನಲ್ಲಿದ್ದರೂ, ಉಳಿದ ಹತ್ತು ಪರ್ಸೆಂಟ್ ಜನಕ್ಕೂ ಬೆಡ್ ಒದಗಿಸಲು ಸಾಧ್ಯವಾಗಿಲ್ಲ. ಇದರಿಂದ ಹೋಂ ಐಸೋಲೇಷನ್​ನಲ್ಲೇ ಜನ ಸಾಯಲ್ಪಟ್ಟರು.

ಮೂರನೇ ಅಲೆ ಸಿದ್ಧತೆ ಬಗ್ಗೆ ಮಾತನಾಡಿದ ಬಿಬಿಎಂಪಿ ವಿಶೇಷ ಆಯುಕ್ತ

ಮೇ ಒಂದು ತಿಂಗಳಲ್ಲೇ 1599 ಮಂದಿ ಸತ್ತಿದ್ದರೆ, ಈವರೆಗೆ ನಾನಾ ಕಾರಣಗಳಿಗೆ, ಅದರಲ್ಲೂ ಪ್ರಮುಖವಾಗಿ ಬೆಡ್, ಆಕ್ಸಿಜನ್ ಕೊರತೆಯಿಂದಲೇ ಮೊದಲನೇ ಹಾಗೂ ಎರಡನೇ ಅಲೆಯಲ್ಲಿ ನಗರದಲ್ಲಿ 15,320 ಮಂದಿ ಸಾವನ್ನಪ್ಪಿದ್ದಾರೆ. ಇನ್ನು ಲೆಕ್ಕಕ್ಕೆ ಸಿಗದೆ ಅದೆಷ್ಟೋ ಮಂದಿ ಮೃತಪಟ್ಟಿದ್ದಾರೆ. ನಗರದಲ್ಲಿ ಇನ್ನೂ ಕೂಡಾ ಬೆಡ್ ಕೊರತೆ ಮುಗಿದಿಲ್ಲ. ಐಸಿಯು ಬೆಡ್​ಗಳಿಗೆ ಇನ್ನೂ ಕ್ಯೂ ವ್ಯವಸ್ಥೆಯೇ ಜಾರಿಯಲ್ಲಿದೆ. ಕಾರಣ ನಗರದಲ್ಲಿ ಇನ್ನೂ ಕೂಡಾ 303 ಮಂದಿ ಐಸಿಯುನಲ್ಲಿ ಹಾಗೂ 440 ಮಂದಿ ಐಸಿಯು+ವೆಂಟಿಲೇಟರ್​ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಲವರು ದೀರ್ಘ ಕಾಲದಿಂದಲೂ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸರ್ಕಾರಿ ಬೆಡ್​ಗಳು ಸಾಲದೇ ಬಿಬಿಎಂಪಿ ಖಾಸಗಿ ಆಸ್ಪತ್ರೆಗಳ ಶೇ.50ರಷ್ಟು ಕೂಡಾ ತೆಗೆದುಕೊಂಡರೂ ಐಸಿಯು ಬೆಡ್​ಗಳು ಸಾಲಲಿಲ್ಲ. ಸದ್ಯ ಜನರಲ್ ಬೆಡ್​ಗಳು ಶೇ.30ರಷ್ಟು ಕಡಿಮೆ ಮಾಡಿದ್ದು, ಶೇ.20ರಷ್ಟು ಖಾಸಗಿ ಜನರಲ್ ಬೆಡ್​ಗಳನ್ನು ಮಾತ್ರ ಉಳಿಸಿಕೊಂಡಿದೆ. ನಗರದಲ್ಲಿ 83,195 ಸಕ್ರಿಯ ಪ್ರಕರಣಗಳಿದ್ದು ಈ ಪೈಕಿ 2543 ಮಂದಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದವರು ಹೋಂ ಐಸೋಲೇಷನ್​ನಲ್ಲಿದ್ದಾರೆ. ಹೀಗಾಗಿ ಈ ಬೆಡ್ ಕೊರತೆ ಮೂರನೇ ಅಲೆಯಲ್ಲಿ ಬಾಧಿಸದಿರಲು ಬಿಬಿಎಂಪಿ ಹಾಗೂ ಸರ್ಕಾರ ಈಗಿಂದಲೇ ಕೆಲವು ಕ್ರಮಗಳನ್ನು ಕೈಗೊಂಡಿದೆ.

ಟ್ರಯಾಜ್ ಸೆಂಟರ್ ಹಾಗೂ ವಿಧಾನಸಭಾ ಕ್ಷೇತ್ರಕ್ಕೆ ಒಂದರಂತೆ ಇರುವ ಸಿಸಿಸಿ ಕೇಂದ್ರಗಳನ್ನು ಮುಚ್ಚದಿರಲು ತೀರ್ಮಾನಿಸಿದೆ. ಅಲ್ಲದೆ ಇಡೀ ರಾಜ್ಯದಲ್ಲಿ ಮೂರನೇ ಅಲೆಗೆ ಸಿದ್ಧತೆಯಾಗಿ ಒಟ್ಟು 1500 ಕೋಟಿ ವೆಚ್ಚದಲ್ಲಿ ಆಸ್ಪತ್ರೆಗಳ ಬೆಡ್, ಮೂಲಸೌಕರ್ಯ ಹೆಚ್ಚಳ ಹಾಗೂ ವೈದ್ಯರು ಸಿಬ್ಬಂದಿ ನೇಮಕಕ್ಕೆ ಖರ್ಚು ಮಾಡಲು ನಿರ್ಧರಿಸಿದೆ. 1500 ಕೋಟಿಯ ಪೈಕಿ 800 ಕೋಟಿ ಆಕ್ಸಿಜನ್ ಮೊದಲಾದ ಮೂಲಸೌಕರ್ಯಕ್ಕೆ, 700 ಕೋಟಿ ಸಿಬ್ಬಂದಿಗಳು ವೈದ್ಯರ ವೇತನಕ್ಕೆ ಖರ್ಚು ಮಾಡಲು ನಿರ್ಧರಿಸಿದೆ. ನಾಲ್ಕು ಸಾವಿರ ವೈದ್ಯರು ಹಾಗೂ ಸಿಬ್ಬಂದಿಗಳ ನೇಮಕಕ್ಕೆ ಸರ್ಕಾರದ ಟಾಸ್ಕ್ ಫೋರ್ಸ್ ಕೂಡಾ ಸಲಹೆ ನೀಡಿದೆ.

ಪದ್ಮನಾಭನಗರದಲ್ಲಿ ಮಕ್ಕಳಿಗಾಗಿಯೇ ಆಸ್ಪತ್ರೆ ಸಜ್ಜು ಮಾಡಲಾಗ್ತಿದೆ. ಒಟ್ಟಿನಲ್ಲಿ ಕೋವಿಡ್ ಹರಡುವಿಕೆ ತಡೆಗಟ್ಟುವುದರ ಜೊತೆ ಹೆಚ್ಚು ವ್ಯಾಕ್ಸಿನೇಶನ್ ಮಾಡುವುದರೊಂದಿಗೆ ಕೋವಿಡ್ ತಡೆಗೆ ಪಾಲಿಕೆ ಯತ್ನಿಸುತ್ತಿದೆ.

ಇದನ್ನೂ ಓದಿ:ಕಾಡುಕೋಣದ ಜೊತೆ ಕಾದಾಡಿ ಮೃತಪಟ್ಟ ಹೆಣ್ಣು ಹುಲಿ...!

ABOUT THE AUTHOR

...view details