ಕರ್ನಾಟಕ

karnataka

ETV Bharat / city

ಇಸ್ಕಾನ್ ದೇವಸ್ಥಾನಕ್ಕೆ ಭಕ್ತರಿಗಿಲ್ಲ ಪ್ರವೇಶ, ಆನ್​​​ಲೈನ್​​ನಲ್ಲೇ ಪೂಜೆ ವೀಕ್ಷಿಸಲು ಅವಕಾಶ

ಆಗಸ್ಟ್ 11 & 12ರಂದು ಇಸ್ಕಾನ್​ ದೇವಸ್ಥಾನದಲ್ಲಿ ಕೃಷ್ಣ ಜನ್ಮಾಷ್ಟಮಿಗೆ ನಡೆಯಲಿರುವ ಪೂಜೆಯನ್ನು ಆನ್​​​ಲೈನ್​​ನಲ್ಲಿ ವೀಕ್ಷಿಸಲು ದೇವಸ್ಥಾನ ಆಡಳಿತ ಮಂಡಳಿ ಅವಕಾಶ ಕಲ್ಪಿಸಿದೆ.

Bangalore ISKCON Temple
ಆನ್​​​ಲೈನ್​​ನಲ್ಲೇ ಪೂಜೆ ವೀಕ್ಷಿಸಲು ಅವಕಾಶ

By

Published : Aug 8, 2020, 5:45 PM IST

ಬೆಂಗಳೂರು:ಕೊರೊನಾ ಕಾಟದಿಂದಾಗಿ ಇಸ್ಕಾನ್​ ದೇವಸ್ಥಾನಕ್ಕೆ ಭಕ್ತರ ಪ್ರವೇಶಕ್ಕೆ ನಿಷೇಧ ಹೇರಿದ್ದು, ಆಗಸ್ಟ್ 11 & 12ರಂದು ಕೃಷ್ಣ ಜನ್ಮಾಷ್ಟಮಿಗೆ ನಡೆಯಲಿರುವ ಪೂಜೆಯನ್ನು ಆನ್​​​ಲೈನ್​​ನಲ್ಲಿ ವೀಕ್ಷಣೆ ಅವಕಾಶ ಕಲ್ಪಿಸಲಾಗಿದೆ.

ಬೆಂಗಳೂರಿನಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಳ ಹಿನ್ನೆಲೆ ಆನ್​​ಲೈನ್​​​ನಲ್ಲೇ ದೇವರ ಅಭಿಷೇಕ, ಆರತಿ, ದೀಪೋತ್ಸವ, ಪಂಚಗವ್ಯ, ಅಲಂಕಾರ, ಪೂಜೆಯನ್ನು ವೀಕ್ಷಿಸುವಂತೆ ಇಸ್ಕಾನ್ ಆಡಳಿತ ಮಂಡಳಿ ತಿಳಿಸಿದೆ.

ಇಸ್ಕಾನ್ ದೇವಸ್ಥಾನಕ್ಕೆ ಭಕ್ತರಿಗೆ ಪ್ರವೇಶ ನಿಷೇಧ

ಸ್ವಾಗತಂ ಕೃಷ್ಣ ಲೈವ್ಎಂಬ ಶೀರ್ಷಿಕೆಯಡಿ ಇಸ್ಕಾನ್ ಸಾಮಾಜಿಕ ಜಾಲತಾಣದ ಮೂಲಕ ಕಾರ್ಯಕ್ರಮ ಪ್ರಸಾರ ಮಾಡುತ್ತಿದೆ. ಪ್ರತಿ ವರ್ಷ ಕೃಷ್ಣ ಜನ್ಮಾಷ್ಟಮಿ ದಿನದಂದು ಲಕ್ಷಾಂತರ ಭಕ್ತರು ಇಸ್ಕಾನ್​​​ಗೆ ಭೇಟಿ ನೀಡುತ್ತಿದ್ದರು. ಆದರೆ, ಈ ಬಾರಿ ಇಸ್ಕಾನ್​​ನಲ್ಲಿ ಭಕ್ತರಿಗೆ ನಿಷೇಧ ಹೇರಿದೆ.

ABOUT THE AUTHOR

...view details