ಬೆಂಗಳೂರು:ಭ್ರಷ್ಟರ ವಿರುದ್ದ ಎಸಿಬಿ ಸಮರ ಸಾರುತ್ತಿದೆ. ಗರ್ಭಿಣಿಗೆ ಹೆರಿಗೆ ಸಂಬಂಧ ಚಿಕಿತ್ಸೆಗೆ ಪ್ರತಿದಿನ 500 ರೂ. ಕೊಡುವಂತೆ ಬೇಡಿಕೆ ಇಟ್ಟಿದ್ದ ನರ್ಸ್ ಎಸಿಬಿ ಬಲೆಗೆ ಬಿದ್ದಿದ್ದಾರೆ.
ಬೆಂಗಳೂರು ನಿವಾಸಿಯೊಬ್ಬರು ಹೆರಿಗೆ ಸಂಬಂಧ ಕೆಸಿ ಜನರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ, ನರ್ಸ್ ತಮ್ಮ ಬೇಡಿಕೆ ಇಟ್ಟಿದ್ದಾರೆ. ಅಷ್ಟು ಮಾತ್ರವಲ್ಲದೇ ಹಣ ಕೊಡದೇ ಹೋದರೆ ಚಿಕಿತ್ಸೆ ಇಲ್ಲ ಎಂದು ಗರ್ಭಿಣಿಯ ಪತಿಗೆ ಬೆದರಿಸಿದ್ದಾರೆ ಎನ್ನಲಾಗಿದೆ.
ನರ್ಸ್ ಕೋಕಿಲಾ ಲಂಚ ದಾಹದಿಂದ ಗರ್ಭಿಣಿಯ ಪತಿ ಬೇಸತ್ತು, ಕೆಸಿ ಜನರಲ್ ಆಸ್ಪತ್ರೆಯಲ್ಲಿ ನಡೆಯುವ ಅವ್ಯವಹಾರದ ಬಗ್ಗೆ ಎಸಿಬಿಗೆ ದೂರು ನೀಡಿದರು. ಹೀಗಾಗಿ ಖಚಿತ ಮಾಹಿತಿ ಮೇರೆಗೆ ಎಸಿಬಿ ದಾಳಿ ನಡೆಸಿದ್ದು, ಕೋಕಿಲಾ 500 ರೂ. ಲಂಚ ಪಡೆಯುವಾಗ ರೆಡ್ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.
ಕೋಕಿಲಾ ಸ್ಟಾಫ್ ನರ್ಸ್ ಆಗಿ ಕೆಲ ವರ್ಷಗಳಿಂದ ಕೆಸಿ ಜನರಲ್ ಆಸ್ಪತ್ರೆಯಲ್ಲಿ ಕೆಲಸ ನಿರ್ವಹಣೆ ಮಾಡುತ್ತಿದ್ದರು. ಸದ್ಯ ಎಸಿಬಿ ತನಿಖೆ ಎದುರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.