ಬೆಂಗಳೂರು: ದಿನಕ್ಕೆ 750 ಜನರಿಗೆ ವ್ಯಾಕ್ಸಿನೇಷನ್ ಮಾಡುತ್ತಿದ್ದೇವೆ. ಕೋವ್ಯಾಕ್ಸಿನ್ ನಮ್ಮ ಬಳಿ ಇಲ್ಲ. ಸರ್ಕಾರ ಕೊಟ್ಟ ಗೈಡ್ಲೈನ್ನಂತೆ ಎಲ್ಲ ನಡೆಯುತ್ತಿದೆ. 18 ವರ್ಷ ಮೇಲ್ಪಟ್ಟ 44 ವರ್ಷದೊಳಗಿನವರಿಗೆ ಪ್ರತಿದಿನ 150 ಡೋಸ್ ಕೂಡ ಇಷ್ಟು ದಿನ ನೀಡುತ್ತಿದ್ದೆವು. ಇವತ್ತಿನಿಂದ ಈ 150 ಡೋಸ್ ಕೂಡ 45 ವರ್ಷ ಮೇಲ್ಪಟ್ಟವರಿಗೆ ನೀಡಿದ್ದೇವೆ ಎಂದು ಲಸಿಕೆ ವಿಳಂಬ ವಿಚಾರವಾಗಿ ಕೆ.ಸಿ. ಜನರಲ್ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ವೆಂಕಟೇಶಯ್ಯ ಮಾಹಿತಿ ನೀಡಿದರು.
2ನೇ ಡೋಸ್ ತೆಗೆದುಕೊಳ್ಳುವವರಿಗೆ ಪ್ರಾಮುಖ್ಯತೆ ನೀಡುತ್ತಿದ್ದೇವೆ. 45 ವರ್ಷ ಮೇಲ್ಪಟ್ಟವರಿಗೆ ಎರಡನೇ ಡೋಸ್ ಕೊಡುತ್ತಿದ್ದೇವೆ. ಲಸಿಕೆ ಸಾಕಷ್ಟಿದೆ. ನಮಗೆ ಬೇಕಾದಷ್ಟು ಪಟ್ಟಿ ಮಾಡಿ ಬಿಬಿಎಂಪಿಯಿಂದ ತರಿಸಿಕೊಳ್ತಿದ್ದೇವೆ ಎಂದು ಮಾಹಿತಿ ನೀಡಿದರು.