ಬೆಂಗಳೂರು :ರಾಜ್ಯದಲ್ಲಿಂದು 93,014 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದೆ. ಇದರಲ್ಲಿ 629 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ರಾಜ್ಯದ ಸೋಂಕಿತರ ಸಂಖ್ಯೆ 29,74,528ಕ್ಕೆ ಏರಿಕೆ ಆಗಿದೆ.
ರಾಜ್ಯದಲ್ಲಿಂದು 629 ಮಂದಿಗೆ ಕೋವಿಡ್ ಸೋಂಕು ದೃಢ ; 17 ಸೋಂಕಿತರು ಸಾವು
ಇಂದಿನ ಪಾಸಿಟಿವಿಟಿ ದರ ಶೇ.0.67ಕ್ಕೆ ಇಳಿಕೆ ಕಂಡಿದೆ. ಹಾಗೆಯೇ ಸಾವಿನ ಪ್ರಮಾಣ ಶೇ.2.70ರಷ್ಟಿದೆ. ವಿಮಾನ ನಿಲ್ದಾಣದಿಂದ 713 ಪ್ರಯಾಣಿಕರು ರಾಜ್ಯಕ್ಕೆ ಆಗಮಿಸಿದ್ದಾರೆ. ಯುನೈಟೆಡ್ ಕಿಂಗ್ಡಮ್ನಿಂದ ಬಂದ 6 ಮಂದಿ ಕೋವಿಡ್ ತಪಾಸಣೆಗೆ ಒಳಪಟ್ಟಿದ್ದಾರೆ..
ಇತ್ತ 782 ಮಂದಿ ವೈರಸ್ನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಜಾರ್ಜ್ ಆಗಿದ್ದಾರೆ. ಈವರೆಗೆ ಒಟ್ಟು 29,24,102 ಜನ ಚೇತರಿಸಿಕೊಂಡಿದ್ದಾರೆ. ಇಂದು 17 ಸೋಂಕಿತರು ಸಾವನ್ನಪ್ಪಿದ್ದಾರೆ. ಮೃತರ ಸಂಖ್ಯೆ 37,763ಕ್ಕೆ ಏರಿಕೆ ಆಗಿದೆ ಎಂದು ರಾಜ್ಯ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
ಒಟ್ಟು 12,634 ಪ್ರಕರಣ ಸಕ್ರಿಯವಾಗಿವೆ. ಇಂದಿನ ಪಾಸಿಟಿವಿಟಿ ದರ ಶೇ.0.67ಕ್ಕೆ ಇಳಿಕೆ ಕಂಡಿದೆ. ಹಾಗೆಯೇ ಸಾವಿನ ಪ್ರಮಾಣ ಶೇ.2.70ರಷ್ಟಿದೆ. ವಿಮಾನ ನಿಲ್ದಾಣದಿಂದ 713 ಪ್ರಯಾಣಿಕರು ರಾಜ್ಯಕ್ಕೆ ಆಗಮಿಸಿದ್ದಾರೆ. ಯುನೈಟೆಡ್ ಕಿಂಗ್ಡಮ್ನಿಂದ ಬಂದ 6 ಮಂದಿ ಕೋವಿಡ್ ತಪಾಸಣೆಗೆ ಒಳಪಟ್ಟಿದ್ದಾರೆ.