ಕರ್ನಾಟಕ

karnataka

ETV Bharat / city

ಹೊಸದಾಗಿ 4,272 ಮಂದಿಗೆ ಕೋವಿಡ್ ದೃಢ ; 115 ಸೋಂಕಿತರು ಬಲಿ - ಆಲ್ಪಾ ವೈರಸ್

6,126 ಸೋಂಕಿತರು ಗುಣಮುಖರಾಗಿದ್ದಾರೆ. ಈತನಕ‌ 26,91,123 ಜನರು ಡಿಸ್ಜಾರ್ಜ್ ಆಗಿದ್ದಾರೆ. 1,05,226 ಕೋವಿಡ್ ಸಕ್ರಿಯ ಪ್ರಕರಣಗಳಿವೆ. ವೈರಸ್​ಗೆ 115 ಸೋಂಕಿತರು ಬಲಿಯಾಗಿದ್ದು, ಸಾವಿನ ಸಂಖ್ಯೆ 34,654ಕ್ಕೆ ಏರಿದೆ. ಸಾವಿನ‌ ಶೇಕಡಾವಾರು ಪ್ರಮಾಣ ಮತ್ತೆ 2.69%ರಷ್ಟಿದೆ..

Karnataka Covid Update
Karnataka Covid Update

By

Published : Jun 26, 2021, 7:17 PM IST

ಬೆಂಗಳೂರು :ರಾಜ್ಯದಲ್ಲಿಂದು 1,65,010 ಜನರಿಗೆ ಕೊರೊನಾ‌ ಟೆಸ್ಟ್ ಮಾಡಲಾಗಿದ್ದು, ಇದರಲ್ಲಿ 4,272 ಮಂದಿಗೆ ಕೋವಿಡ್ ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 28,31,026ಕ್ಕೆ ಏರಿಕೆಯಾಗಿದೆ. ಸದ್ಯ ಪಾಸಿಟಿವಿಟಿ ದರ ಶೇ. 2.58ರಷ್ಟಿದೆ.

6,126 ಸೋಂಕಿತರು ಗುಣಮುಖರಾಗಿದ್ದಾರೆ. ಈತನಕ‌ 26,91,123 ಜನರು ಡಿಸ್ಜಾರ್ಜ್ ಆಗಿದ್ದಾರೆ. 1,05,226 ಕೋವಿಡ್ ಸಕ್ರಿಯ ಪ್ರಕರಣಗಳಿವೆ. ವೈರಸ್​ಗೆ 115 ಸೋಂಕಿತರು ಬಲಿಯಾಗಿದ್ದು, ಸಾವಿನ ಸಂಖ್ಯೆ 34,654ಕ್ಕೆ ಏರಿದೆ. ಸಾವಿನ‌ ಶೇಕಡಾವಾರು ಪ್ರಮಾಣ ಮತ್ತೆ 2.69%ರಷ್ಟಿದೆ.

ಇದನ್ನೂ ಓದಿ:ಕೋವಿಡ್​ಗಿಂತ ಹೆಚ್ಚು ಅಪಾಯಕಾರಿ ಡೆಲ್ಟಾ ಪ್ಲಸ್​.. ಇದ್ರಿಂದ ಬಚಾವ್ ಆಗ್ಬೇಕಿದ್ರೇ ಇಷ್ಟು ಮಾಡಿ ಸಾಕು..
ಯುಕೆಯ ರೂಪಾಂತರಿ ವೈರಸ್ ಆಲ್ಪಾ(Alpha/B.1.1.7) 127 ಜನರಲ್ಲಿ ಕಾಣಿಸಿದ್ದರೆ, ಇತ್ತ ಸೌತ್ ಆಫ್ರಿಕಾದ ಬೇಟಾ ವೈರಸ್ (BETA/B.1.351) 6 ಜನರಲ್ಲಿ ಪತ್ತೆಯಾಗಿದೆ. ಹಾಗೇ ಭಾರತದ ರೂಪಾಂತರಿ ( Delta/B.617.2) ಡೆಲ್ಟಾ 318 ಜನರಿಗೆ, ಕಪ್ಪಾ (Kappa/B.1.617) 112 ಸೋಂಕು ಕಾಣಿಸಿದೆ. ಇದೀಗ ಡೆಲ್ಟಾ ಪ್ಲಸ್( Delta plus/ B.1.617.2.1(AY.1) ಇಬ್ಬರಲ್ಲಿ ಕಾಣಿಸಿದ್ದು, ಎಚ್ಚರಿಕೆ ವಹಿಸುವ ಅಗತ್ಯವಿದೆ.

ABOUT THE AUTHOR

...view details