ಬೆಂಗಳೂರು: ರಾಜ್ಯದಲ್ಲಿಂದು 60,711 ಜನರಿಗೆ ಕೊರೊನಾ ತಪಾಸಣೆ ನಡೆಸಲಾಗಿದ್ದು,ಇದರಲ್ಲಿ 239 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 29,88,760 ಕ್ಕೆ ಏರಿಕೆ ಕಂಡಿದೆ.
ರಾಜ್ಯದಲ್ಲಿಂದು 139 ಮಂದಿಗೆ ಕೋವಿಡ್ : ಮೂವರು ಸೋಂಕಿತರ ಸಾವು - ಕೋವಿಡ್ ಬುಲೆಟಿನ್
ಕರ್ನಾಟಕ ಇಂದಿನ ಕೊರೊನಾ ಪ್ರಕರಣಗಳ ವರದಿ..
ಇನ್ನು 376 ಸೋಂಕಿತರು ಗುಣಮುಖರಾಗಿದ್ದು, ಈವರೆಗೆ 29,42,272 ಜನರು ಡಿಸ್ಚಾರ್ಜ್ ಆಗಿದ್ದಾರೆ. ಇತ್ತ ಸಕ್ರಿಯ ಪ್ರಕರಣಗಳು 8,370ರಷ್ಟು ಇವೆ. ಜೊತೆಗೆ ಪಾಸಿಟಿವಿಟಿ ದರ ಶೇ.0.39 ರಷ್ಟಿದೆ. ಇಂದು ಐವರು ಸೋಂಕಿತರು ಮೃತರಾಗಿದ್ದು, ಒಟ್ಟು ಸಾವಿನ ಸಂಖ್ಯೆ 38,089ಕ್ಕೆ ಏರಿದೆ.
ಇತ್ತ ರಾಜಧಾನಿ ಬೆಂಗಳೂರಲ್ಲಿ 139 ಜನರಿಗೆ ಸೋಂಕು ತಗುಲಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 12,52,106ಕ್ಕೆ ಏರಿದೆ. ಇನ್ನು 190 ಜನ ಗುಣಮುಖರಾಗಿದ್ದು, ಈವರೆಗೆ 12,29,397 ಜನ ಡಿಸ್ಚಾರ್ಜ್ ಆಗಿದ್ದಾರೆ. 3 ಸೋಂಕಿತರು ಮೃತರಾಗಿದ್ದು, ಸಾವಿನ ಸಂಖ್ಯೆ 16,284ಕ್ಕೆ ಏರಿದೆ. ಸದ್ಯ 6424 ಸಕ್ರಿಯ ಪ್ರಕರಣಗಳಿವೆ.
ರೂಪಾಂತರಿ ವೈರಸ್ ಅಪಡೇಟ್ಸ್ :
1) ಡೆಲ್ಟಾ ( Delta/B.617.2) - 1698
2) ಅಲ್ಪಾ(Alpha/B.1.1.7) - 155
3) ಕಪ್ಪಾ (Kappa/B.1.617) 160
4) ಬೇಟಾ ವೈರಸ್ (BETA/B.1.351) - 8
5) ಡೆಲ್ಟಾ ಪ್ಲಸ್ (Delta plus/B.1.617.2.1(AY.1) - 4
6) ಈಟಾ (ETA/B.1.525) - 1
7) ಡೆಲ್ಟಾ ಸಬ್ ಲೈನ್ ಏಜ್ AY.4 - 300
8) ಡೆಲ್ಟಾ ಸಬ್ ಲೈನ್ ಏಜ್ AY .12 - 15