ಕರ್ನಾಟಕ

karnataka

ETV Bharat / city

Karnataka Covid: ರಾಜ್ಯದಲ್ಲಿಂದು 303 ಹೊಸ ಕೇಸ್ ಪತ್ತೆ, ಕೊರೊನಾ ಸಾವಿನಿಂದ ಜಿಲ್ಲೆಗಳು ಮುಕ್ತ - ಕರ್ನಾಟಕದಲ್ಲಿ ಒಮಿಕ್ರಾನ್

Karnataka Covid: ರಾಜ್ಯದಲ್ಲಿ ಇಂದು 303 ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, ಇಬ್ಬರು ಮೃತಪಟ್ಟಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದ್ದಾರೆ.

Karnataka Covid,ಕರ್ನಾಟಕದಲ್ಲಿ ಕೋವಿಡ್
ಕರ್ನಾಟಕದಲ್ಲಿ ಕೋವಿಡ್

By

Published : Dec 16, 2021, 7:49 PM IST

ಬೆಂಗಳೂರು:ರಾಜ್ಯದಲ್ಲಿಂದು 1,29,411 ಜನರಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದ್ದು, ಇದರಲ್ಲಿ 303 ಮಂದಿಗೆ ಸೋಂಕು ದೃಢಪಟ್ಟಿದೆ‌. ಈ ಮೂಲಕ ಸೋಂಕಿತರ ಸಂಖ್ಯೆ 30,01,554 ಕ್ಕೆ ಏರಿಕೆ ಆಗಿದೆ‌.

ಇನ್ನು 322 ಮಂದಿ ಗುಣಮುಖರಾಗಿದ್ದು, ಈವರೆಗೆ 29,56,088 ಜನ ಡಿಸ್ಚಾರ್ಜ್ ಆಗಿದ್ದಾರೆ. ಸೋಂಕಿನಿಂದ ಇಂದು ಇಬ್ಬರು ಮೃತಪಟ್ಟಿದ್ದು, 38,279ಕ್ಕೆ ಸಾವಿನ ಸಂಖ್ಯೆ ಏರಿದೆ. ಸದ್ಯ ಸಕ್ರಿಯ ಪ್ರಕರಣಗಳು 7,158 ಕ್ಕೆ ಏರಿಕೆ ಕಂಡಿದೆ. ಈ ಮೂಲಕ ಸೋಂಕಿತರ ಪ್ರಮಾಣ ಶೇ‌ 0.23 ರಷ್ಟು ಇದ್ದು, ಸಾವಿನ ಪ್ರಮಾಣ ಶೇ.0.66 ರಷ್ಟು ಇದೆ. ಇನ್ನು ವಿಮಾನ ನಿಲ್ದಾಣದಿಂದ 12,171 ಪ್ರಯಾಣಿಕರು ತಪಾಸಣೆಗೊಳಪಟ್ಟಿದ್ದು, ಹೈರಿಸ್ಕ್ ಇರುವ ದೇಶಗಳಿಂದ 3,739 ಅಂತಾರಾಷ್ಟ್ರೀಯ ಪ್ರಯಾಣಿಕರು ಆಗಮಿಸಿದ್ದಾರೆ.

ರಾಜಧಾನಿ ಬೆಂಗಳೂರಲ್ಲಿಂದು 197 ಮಂದಿಗೆ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 12,59,585 ಕ್ಕೆ ಏರಿದೆ. 135 ಜನರು ಡಿಸ್ಚಾರ್ಜ್ ಆಗಿದ್ದು 12,37,580 ಗುಣಮುಖರಾಗಿದ್ದಾರೆ. ಇಬ್ಬರು ಸಾವನ್ನಪ್ಪಿದ್ದು, ಸಾವಿನ ಸಂಖ್ಯೆ 16,374 ಕ್ಕೆ ಏರಿದೆ. ಸದ್ಯ ಸಕ್ರಿಯ ಪ್ರಕರಣಗಳು 5,630 ರಷ್ಟಿದೆ. ಇಂದು ರಾಜಧಾನಿ ಬೆಂಗಳೂರಿನಲ್ಲಿ ಬಿಟ್ಟರೆ ಬೇರೆ ಯಾವ ಜಿಲ್ಲೆಯಲ್ಲೂ ಸಾವಿನ ವರದಿಯಾಗಿಲ್ಲ.

ರೂಪಾಂತರಿ ಅಪ್​ಡೇಟ್ಸ್:
ಅಲ್ಪಾ - 155
ಬೇಟಾ -08
ಡೆಲ್ಟಾ - 2095
ಡೆಲ್ಟಾ ಸಬ್ ಲೈನ್ ಏಜ್ - 558
ಕಪ್ಪಾ - 160
ಈಟಾ - 01
ಒಮಿಕ್ರಾನ್ - 03

(ಇದನ್ನೂ ಓದಿ: ಮಹತ್ವದ ಪ್ರವಾಸದ ಸಂದರ್ಭದಲ್ಲಿ ಕಿತ್ತಾಟ ಒಳ್ಳೆಯದಲ್ಲ, ಕ್ರಿಕೆಟ್​ ಕಡೆಗೆ ಗಮನ ನೀಡಿ: ಕೊಹ್ಲಿಗೆ ಕಪಿಲ್​ ಬುದ್ಧಿಮಾತು)

ABOUT THE AUTHOR

...view details