ಬೆಂಗಳೂರು: ರಾಮನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ನಡೆದ ಸರ್ಕಾರಿ ಕಾರ್ಯಕ್ರಮವೊಂದರಲ್ಲಿ ಸಚಿವ ಅಶ್ವತ್ಥನಾರಾಯಣರ ಭಾಷಣಕ್ಕೆ ಸಂಸದ ಡಿ.ಕೆ.ಶಿವಕುಮಾರ್ ಅಡ್ಡಿಯುಂಟು ಮಾಡಿದ್ದನ್ನು ಖಂಡಿಸಿ ಬಿಜೆಪಿ ಸರಣಿ ಟ್ವೀಟ್ ಮಾಡಿ ಕಾಂಗ್ರೆಸ್ ನಾಯಕರನ್ನು ತರಾಟೆಗೆ ತೆಗೆದುಕೊಂಡಿದೆ.
ಕಾಂಗ್ರೆಸ್ ಸಂಸ್ಕೃತಿ ಎಂದರೆ ಗೂಂಡಾ ಸಂಸ್ಕೃತಿ ಎಂಬುದಕ್ಕೆ ಇದಕ್ಕಿಂತ ಬೇರೆ ಉದಾಹರಣೆ ಬೇರೆ ಬೇಕಿಲ್ಲ. ಒಬ್ಬ ಸಂಸದರಿಗೆ ರಾಜ್ಯದ ಮುಖ್ಯಮಂತ್ರಿ ಇರುವ ವೇದಿಕೆಯಲ್ಲಿ ಹೇಗೆ ವರ್ತಿಸಬೇಕೆಂಬ ಪರಿಜ್ಞಾನವಿಲ್ಲದಿರುವುದು ವಿಪರ್ಯಾಸ. ಯಥಾ ರಾಜ ತಥಾ ಪ್ರಜಾ ಎಂಬಂತೆ ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ವರ್ತಿಸುತ್ತಿರುವುದು ಖಂಡನೀಯ ಎಂದು 'ರೌಡಿಬ್ರದರ್ಸ್' ಎಂದು ಹ್ಯಾಷ್ಟ್ಯಾಗ್ ನೀಡಿ ಟ್ವೀಟ್ ಮಾಡಿದೆ.
ರಾಮನಗರ ಜಿಲ್ಲೆ ಎಂದರೆ 'ಕನಕಪುರ ರಿಪಬ್ಲಿಕ್' ಎಂದು ಡಿ.ಕೆ. ಸಹೋದರರು ಭಾವಿಸಿದಂತಿದೆ. ನಿಮ್ಮ ಅಟ್ಟಹಾಸ, ದೌರ್ಜನ್ಯ, ರಾಜಕೀಯ ಮೇಲಾಟವನ್ನು ಎಲ್ಲ ಕಾಲಕ್ಕೂ ನೋಡಿಕೊಂಡು ಸುಮ್ಮನಿರಲು ಸಾಧ್ಯವಿಲ್ಲ. ಸಾರ್ವಜನಿಕ ಸಭೆಯಲ್ಲಿ ಸಂಸದ ಡಿ.ಕೆ. ಸುರೇಶ್, ಎಂಎಲ್ಸಿ ರವಿ ಅವರ ವರ್ತನೆ ಅಕ್ಷಮ್ಯವಾದುದು ಎಂದು ಟೀಕಿಸಿದೆ.