ಕರ್ನಾಟಕ

karnataka

ETV Bharat / city

ಕಾವೇರಿಗೆ ಮುಂದುವರಿದ ಮಠಾಧೀಶರ ಭೇಟಿ: ಮುಂಜಾನೆಯಿಂದಲೇ ಸಿಎಂ ನಿವಾಸದಲ್ಲಿ ಸ್ವಾಮೀಜಿಗಳ ದಂಡು

ಸಿಎಂ ಯಡಿಯೂರಪ್ಪ ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ವಿವಿಧ ಮಠಾಧೀಶರು ಬಿಎಸ್​ವೈ ಬೆಂಬಲಕ್ಕೆ ನಿಂತಿದ್ದಾರೆ. ಇಂದು ಸಹ ಯಾದಗಿರಿ ಮತ್ತು ಕಲಬುರಗಿಯಿಂದ ಕೆಲ ಮಠಾಧೀಶರು ಸಿಎಂ ನಿವಾಸ ಕಾವೇರಿಗೆ ಆಗಮಿಸಿದ್ದಾರೆ.

kalburgi and yadagiri
ಕಾವೇರಿಯತ್ತ ಮುಖ ಮಾಡಿದ ಮಠಾಧೀಶರು

By

Published : Jul 21, 2021, 10:55 AM IST

ಬೆಂಗಳೂರು: ನಿನ್ನೆಯಿಂದಲೂ ಮುಖ್ಯಮಂತ್ರಿ ನಿವಾಸ ಕಾವೇರಿಗೆ ಅನೇಕ ಮಠಾಧೀಶರು ಭೇಟಿ ನೀಡಿ ಬಿಎಸ್​ವೈ ಜೊತೆ ಚರ್ಚೆ ನಡೆಸುತ್ತಿದ್ದು ಇಂದು ಕೂಡ ಯಾದಗಿರಿ ಮತ್ತು ಕಲಬುರಗಿಯಿಂದ ಕೆಲ ಮಠಾಧೀಶರು ಆಗಮಿಸಿದ್ದಾರೆ.

ಸಿಎಂ ಬದಲಾವಣೆ ವದಂತಿ ಬೆನ್ನಲ್ಲೇ ಬೆಳಂ ಬೆಳಗ್ಗೆ ಕಾವೇರಿಗೆ ದೌಡಾಯಿಸುತ್ತಿರುವ ಮಠಾಧೀಶರುಗಳು, ಸಿಎಂ ಬಿಎಸ್​ವೈಗೆ ತಮ್ಮ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ.

ಮುಖ್ಯಮಂತ್ರಿ ನಿವಾಸ ಕಾವೇರಿಗೆ ಆಗಮಿಸಿದ ಮಠಾಧೀಶರು

ಇದನ್ನೂ ಓದಿ:ಬಿಎಸ್​ವೈ ಇಲ್ಲದಿದ್ದರೆ ಬಿಜೆಪಿ ಸರ್ವನಾಶ ಖಂಡಿತ: ದಿಂಗಾಲೇಶ್ವರ ಶ್ರೀ ಎಚ್ಚರಿಕೆ

ಉಡುಪಿಯ ಪೇಜಾವರ ಶ್ರೀಗಳು, ಡಾ. ಶಿವಮೂರ್ತಿ ಮುರುಘಾ ಶರಣರು, ಮಾದಾರ ಚೆನ್ನಯ್ಯ ಗುರುಪೀಠದ ಶ್ರೀ ಬಸವಮೂರ್ತಿ ಮಾದಾರಚೆನ್ನಯ್ಯ ಶ್ರೀಗಳು, ಶ್ರೀ ಸಿದ್ಧರಾಮೇಶ್ವರ ಸ್ವಾಮಿಗಳು, ಹೊಸೂರಿನ ದಿಂಗಾಲೇಶ್ವರ ಸ್ವಾಮೀಜಿಗಳು ಸೇರಿದಂತೆ ಅನೇಕ ಮಠಾಧೀಶರು ಮುಖ್ಯಮಂತ್ರಿ ಬದಲಾವಣೆಗೆ ಇದು ಸೂಕ್ತ ಕಾಲವಲ್ಲ ಎಂದು ಬಿ.ಎಸ್ ಯಡಿಯೂರಪ್ಪಗೆ ಬೆಂಬಲ ಸೂಚಿಸಿದ್ದಾರೆ.

ABOUT THE AUTHOR

...view details