ದೊಡ್ಡಬಳ್ಳಾಪುರ(ಬೆಂಗಳೂರು ಗ್ರಾಮಾಂತರ) : ತಾಲೂಕಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಘಾಟಿ ಸುಬ್ರಮಣ್ಯಕ್ಕೆ ಇಂದು ಭಾರತ ತಂಡದ ಕ್ರಿಕೆಟರ್ ಕೆ.ಎಲ್. ರಾಹುಲ್ ಭೇಟಿ ನೀಡಿ ದೇವರ ದರ್ಶನ ಪಡೆದರು. ಸ್ನೇಹಿತರ ಜೊತೆಯಲ್ಲಿ ಬಂದಿದ್ದ ಅವರು ದೇವರ ದರ್ಶನ ಪಡೆದು ಹಿಂದೆ ಬರುವಾಗ ಬಾಲಕ ಕ್ರಿಕೆಟ್ ಅಭಿಮಾನಿಯೊಬ್ಬ ಮಾಸ್ಕ್ ಧರಿಸಿದ್ದರೂ ಕೆ.ಎಲ್. ರಾಹುಲ್ ಅವರನ್ನು ಗುರುತಿಸಿ, ಸೆಲ್ಫಿಗೆ ಆಸೆಪಟ್ಟ. ಆದ್ರೆ ಬಾಲಕನನ್ನು ನಯವಾಗಿಯೇ ತಡೆದ ರಾಹುಲ್ ಮುಂದೆ ಸಾಗಿದ್ದಾರೆ.
ಅಭಿಮಾನಿ ಬಾಲಕನ ಜೊತೆ ಸೆಲ್ಫಿಗೆ ನಿರಾಕರಿಸಿದ ಕೆ ಎಲ್ ರಾಹುಲ್
ಮಾಸ್ಕ್ ಹಾಕಿದ್ದರೂ ಕ್ರಿಕೆಟಿಗ ಕೆ ಎಲ್ ರಾಹುಲ್ ಅವರನ್ನು ಗುರುತಿಸಿ ಬಾಲಕ ಕ್ರಿಕೆಟ್ ಅಭಿಮಾನಿಯೋರ್ವ ಸೆಲ್ಫಿಗಾಗಿ ಮುಂದೆ ಹೋಗಿದ್ದಾನೆ. ಆದರೆ ರಾಹುಲ್ ಸೆಲ್ಫಿ ತೆಗೆಸಿಕೊಳ್ಳಲು ನಿರಾಕರಿಸಿರುವುದು ಅಭಿಮಾನಿಗೆ ಬೇಸರ ಮೂಡಿಸಿದೆ.
ಅಭಿಮಾನಿ ಜೊತೆ ಸೆಲ್ಫಿಗೆ ನಿರಾಕರಿಸಿದ ಕೆ ಎಲ್ ರಾಹುಲ್
ಬಾಲಕ ಹತ್ತಿರ ಬರುವುದನ್ನು ಗಮನಿಸಿದ ಕೆ.ಎಲ್. ರಾಹುಲ್ ಅವರು ಬಾಲಕನಿಂದ ದೂರ ಸರಿದಿದ್ದಾರೆ. ಬಾಲಕನ ಒಂದು ಸಣ್ಣ ಆಸೆಯನ್ನು ಈಡೇರಿಸದೆ ಅಭಿಮಾನಿಯನ್ನು ನಿರಾಸೆಗೊಳಿಸಿದ್ದು, ಕ್ರಿಕೆಟ್ ಅಭಿಮಾನಿಗಳಲ್ಲಿ ಬೇಸರ ತಂದಿದೆ. ಅಭಿಮಾನಿಗಳಿಂದಲೇ ಇವತ್ತು ಇವರೆಲ್ಲ ಕ್ರಿಕೆಟ್ ಲೋಕದಲ್ಲಿ ತಾರೆಗಳಾಗಿ ಮಿಂಚುತ್ತಿದ್ದಾರೆ. ಆದರೆ ಒಬ್ಬ ಕ್ರಿಕೆಟ್ ಅಭಿಮಾನಿಗೆ ಕೊಡುವ ಗೌರವ ಇದಲ್ಲವೆಂದು ದೇವಸ್ಥಾನದಲ್ಲಿದ್ದ ಭಕ್ತರು ಬೇಸರ ವ್ಯಕ್ತಪಡಿಸಿದರು.
ಇದನ್ನೂ ಓದಿ:ರನೌಟ್ ಮಾಡುವಾಗ ಚೇಷ್ಟೆ ಮಾಡಿ ನಾಯಕನಿಂದ ಬೈಸಿಕೊಂಡ ಪಂತ್: ವಿಡಿಯೋ