ಕರ್ನಾಟಕ

karnataka

ETV Bharat / city

ಜ.19 ರಂದು ಪಲ್ಸ್ ಪೋಲಿಯೊ ಲಸಿಕೆ: ಭಾಗಿಯಾಗ್ತಾರಾ ಆಶಾ ಕಾರ್ಯಕರ್ತೆಯರು?

ರಾಜ್ಯದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಕಳೆದ ಒಂದು ತಿಂಗಳಿಂದ ವಿವಿಧ ಹಂತದಲ್ಲಿ ಪಲ್ಸ್ ಪೋಲಿಯೋ ಕಾರ್ಯಕ್ರಮಕ್ಕೆ ಸಿದ್ಧತೆ ನಡೆಸುತ್ತಿದ್ದು, ಇದೇ ಜನವರಿ‌‌ 19 ರಂದು ಲಸಿಕಾ ಕಾರ್ಯಕ್ರಮ ನಡೆಯಲಿದೆ.

january-19th-pulse-polio-vaccine-program
ಜ. 19 ರಂದು ಪಲ್ಸ್ ಪೋಲಿಯೊ ಲಸಿಕೆ

By

Published : Jan 10, 2020, 11:02 PM IST

ಬೆಂಗಳೂರು:ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಕಳೆದ ಒಂದು ತಿಂಗಳಿಂದ ವಿವಿಧ ಹಂತದಲ್ಲಿ ಪಲ್ಸ್ ಪೋಲಿಯೋ ಕಾರ್ಯಕ್ರಮಕ್ಕೆ ಸಿದ್ಧತೆ ನಡೆಸುತ್ತಿದ್ದು, ಇದೇ ಜನವರಿ‌‌ 19 ರಂದು ಲಸಿಕಾ ಕಾರ್ಯಕ್ರಮ ನಡೆಯಲಿದೆ.

ಆಶಾ ಕಾರ್ಯಕರ್ತೆಯರು ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಮತ್ತು ಸಮುದಾಯದ ನಡುವೆ ಸೇತುವೆಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಆದರೆ ಕರ್ನಾಟಕ ಆಶಾ ಕಾರ್ಯಕರ್ತೆಯರ ಸಂಘದ ಪದಾಧಿಕಾರಿಗಳು ವಿವಿಧ ಬೇಡಿಕೆಗಳಿಗೆ ಮಂಡಿಸಿ ಕ್ಷೇತ್ರ ಮಟ್ಟದಲ್ಲಿ ಮುಷ್ಕರ ಮಾಡಲು ಕರೆ ನೀಡಿದ್ದಾರೆ.

ಅದರಲ್ಲಿ ಕೆಲವು ಕಾರ್ಯಕರ್ತೆರು ಮಾತ್ರ ಪಾಲ್ಗೊಂಡಿದ್ದು ಶೇ. 70ರಷ್ಟು ಆಶಾ ಕಾರ್ಯಕರ್ತೆಯರು ಕ್ಷೇತ್ರ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಇಲಾಖೆಗೆ ಮಾಹಿತಿ ಇದೆ ಎಂದು ಪ್ರಕಟಣೆ ಹೊರಡಿಸಿದೆ.

ಜ. 19 ರಂದು ಪಲ್ಸ್ ಪೋಲಿಯೊ ಲಸಿಕೆ

ಪಲ್ಸ್ ಪೋಲಿಯೋ ಕಾರ್ಯಕ್ರಮ ಅನುಷ್ಠಾನಕ್ಕೆ ಆಶಾ ಕಾರ್ಯಕರ್ತೆಯರ ನೇಮಕಾತಿಗಿಂತ ಮುಂಚೆ ಅನುಸರಿಸುತ್ತಿದ್ದ, ಸಾಮಾಜಿಕ ಸಂಘಟನಾ ಕಾರ್ಯತಂತ್ರಕ್ಕೆ ಇಲಾಖೆ ಸಜ್ಜಾಗಿದೆ. ಶುಶ್ರೂಷಕ ಮತ್ತು ಅರೆ ವೈದ್ಯಕೀಯ ಕಾಲೇಜುಗಳ ವಿದ್ಯಾರ್ಥಿಗಳು, ಸ್ವಯಂಸೇವಾ ಸಂಸ್ಥೆಗಳ ಪ್ರತಿನಿಧಿಗಳು ಮತ್ತು ಸಿಬ್ಬಂದಿಗಳನ್ನು ಬಳಸಿಕೊಳ್ಳಲು ಮುಂದಾಗಿದೆ.

ಇದಲ್ಲದೆ ಈ ಕಾರ್ಯಕ್ರಮದಲ್ಲಿ ಆಶಾ ಕಾರ್ಯಕರ್ತೆಯರನ್ನು ಮನವೊಲಿಸಲು ತಿಳಿಸಲಾಗಿದ್ದು, ನಿರಾಕರಿಸಿದರೆ ಅಂಗನವಾಡಿ ಕಾರ್ಯಕರ್ತೆಯರು - ಸಹಾಯಕಿಯರು, ಬಿಸಿಯೂಟ ಯೋಜನೆಯ ಕಾರ್ಯಕ್ರಮದ ಸಿಬ್ಬಂದಿಗಳನ್ನ ಬಳಸಿಕೊಳ್ಳಲಿದೆ.

ಈ ಕಾರ್ಯಕ್ರಮಕ್ಕೆ ಆಶಾ ಕಾರ್ಯಕರ್ತರ ಮುಷ್ಕರದಿಂದ ಯಾವುದೇ ಅಡಚಣೆಗಳ ಆಗುವುದಿಲ್ಲ, ಸಾರ್ವಜನಿಕರು ಯಾವುದೇ ಆತಂಕಕ್ಕೆ ಒಳಗಾಗಬಾರದೆಂದು ಇಲಾಖೆ ವಿನಂತಿಸಿದೆ.

ABOUT THE AUTHOR

...view details