ಬೆಂಗಳೂರು:ನಗರದ ನಾಲ್ಕು ವಾರ್ಡ್ಗಳಲ್ಲಿ ಪ್ರಾಯೋಗಿಕವಾಗಿ ಜಾರಿಯಲ್ಲಿರುವ ಇಂದೋರ್ ಮಾದರಿಯ ಕಸ ವಿಲೇವಾರಿ ಯೋಜನೆಗೆ ನಾಳೆಯಿಂದ ಡಿಸಿಎಂ ಅಶ್ವಥ್ ನಾರಾಯಣ್ ಇರುವ ವಾರ್ಡ್ ನಂ.36 ರಲ್ಲೂ ಚಾಲನೆ ಸಿಗಲಿದೆ ಎಂದು ಮೇಯರ್ ಗೌತಮ್ ಕುಮಾರ್ ತಿಳಿಸಿದ್ದಾರೆ.
ಡಿಸಿಎಂ ವಾರ್ಡ್ನಲ್ಲೂ ಇಂದೋರ್ ಮಾದರಿ ಕಸ ವಿಲೇವಾರಿಗೆ ನಾಳೆ ಚಾಲನೆ: ಗೌತಮ್ ಕುಮಾರ್
ನಗರದ ನಾಲ್ಕು ವಾರ್ಡ್ ಗಳಲ್ಲಿ ಪ್ರಾಯೋಗಿಕವಾಗಿ ಜಾರಿಯಲ್ಲಿರುವ ಇಂದೋರ್ ಮಾದರಿಯ ಕಸ ವಿಲೇವಾರಿ ಯೋಜನೆ ನಾಳೆಯಿಂದ ಡಿಸಿಎಂ ಅಶ್ವಥ್ ನಾರಾಯಣ್ ಇರುವ ವಾರ್ಡ್ ನಂ.36 ರಲ್ಲೂ ಚಾಲನೆ ಗೊಳ್ಳಲಿದೆ ಎಂದು ಮೇಯರ್ ಗೌತಮ್ ಕುಮಾರ್ ತಿಳಿಸಿದ್ದಾರೆ.
ಡಿಸಿಎಂ ವಾರ್ಡ್ ನಲ್ಲೂ ಇಂದೋರ್ ಮಾದರಿ ಕಸ ವಿಲೇವಾರಿಗೆ ನಾಳೆ ಚಾಲನೆ: ಗೌತಮ್ ಕುಮಾರ್
ಹಗಲು ಹಾಗೂ ರಾತ್ರಿ ಪಾಳೆಯದಲ್ಲೂ ಕಸ ಸಂಗ್ರಹಣೆ, ಮಿಶ್ರ ತ್ಯಾಜ್ಯ ಆಗದಂತೆ ಎಚ್ಚರಿಕೆ ವಹಿಸಿ, ಬ್ಲಾಕ್ ಸ್ಪಾಟ್ ಕಡಿಮೆ ಮಾಡೋದು ಇಂದೋರ್ ಮಾದರಿಯ ಕಸ ನಿರ್ವಹಣೆಯ ಪ್ರಮುಖ ಉದ್ದೇಶವಾಗಿದೆ. ನಾಗರಿಕರೇ ಕಸ ವಿಂಗಡಿಸಿ ಕೊಡುವಂತೆ ನಿಯಮ ಜಾರಿ ಮಾಡಲಾಗಿದೆ. ಅಲ್ಲದೆ ಸಂಜೆ 6 ರಿಂದ ರಾತ್ರಿ 10 ರ ವರೆಗೂ ರಾತ್ರಿ ಪಾಳೆಯದಲ್ಲೂ ಕಸ ಸಂಗ್ರಹಿಸಲಾಗುತ್ತಿದೆ. ಆದರೆ ಸಂಗ್ರಹಿಸಿದ ಕಸವನ್ನು ಸಂಸ್ಕರಣೆ ಮಾಡೋದೆ ತಲೆನೋವಾಗಿ ಪರಿಣಮಿಸಿದೆ. ಈ ಬಗ್ಗೆ ಹೆಚ್ಚಿನ ಗಮನ ವಹಿಸಲಾಗುವುದು ಎಂದು ಮೇಯರ್ ಹೇಳಿದ್ದಾರೆ.