ಕರ್ನಾಟಕ

karnataka

ETV Bharat / city

ಹಸಿರು ಶಕ್ತಿ ಕಡೆಗೆ ಭಾರತದ ಹೆಜ್ಜೆ... ಜೈವಿಕ ಇಂಧನ ಉತ್ಪಾದನೆಯಲ್ಲಿ ಹೊಸ ಅಧ್ಯಾಯ - ಇಂಧನಕ್ಕೆ ಜೈವಿಕ ಡೀಸೆಲ್ ಮಿಶ್ರಣ ಮಾಡುವ ಮೂಲಕ ಡೀಸೆಲ್ ಬಳಕೆ

ಜೈವಿಕ ಇಂಧನ ಉತ್ಪಾದಿಸುವ ದೃಷ್ಟಿಯಿಂದ ಭಾರತ ಪ್ರಥಮ ಜಗತ್ತಿನ ರಾಷ್ಟ್ರಗಳೊಟ್ಟಿಗೆ ಸರಿ ಸಮನಾಗಿ ಹೆಜ್ಜೆ ಹಾಕಲು ಮುಂದಾಗಿದೆ. ಈಗಾಗಲೇ ಜತ್ರೋಪ ಗಿಡಗಳಿಂದ ಜೈವಿಕ ಇಂಧನ ತಯಾರಿಸಿರುವ ಭಾರತ, ಇದೀಗ ಅಡುಗೆ ಎಣ್ಣೆಯನ್ನು ಡೀಸೆಲ್‌ ಆಗಿ ಪರಿವರ್ತಿಸುವ ಕೆಲಸದಲ್ಲಿ ನಿರತವಾಗಿದೆ. ದೇಶದ ಜೈವಿಕ ಇಂಧನ ತಯಾರಿಕೆ ಕುರಿತ ಯತ್ನಗಳ ಸಂಪೂರ್ಣ ವಿಶ್ಲೇಷಣೆ ಇಲ್ಲಿದೆ.

indias-steps-towards-green-energy
ಹಸಿರು ಶಕ್ತಿ ಕಡೆಗೆ ಭಾರತದ ಹೆಜ್ಜೆಗಳು

By

Published : Dec 17, 2019, 10:45 AM IST

ಜೈವಿಕ ಇಂಧನ ಉತ್ಪಾದಿಸುವ ದೃಷ್ಟಿಯಿಂದ ಭಾರತ ಪ್ರಥಮ ಜಗತ್ತಿನ ರಾಷ್ಟ್ರಗಳೊಟ್ಟಿಗೆ ಸರಿ ಸಮನಾಗಿ ಹೆಜ್ಜೆ ಹಾಕಲು ಮುಂದಾಗಿದೆ. ಈಗಾಗಲೇ ಜತ್ರೋಪ ಗಿಡಗಳಿಂದ ಜೈವಿಕ ಇಂಧನ ತಯಾರಿಸಿರುವ ಭಾರತ, ಇದೀಗ ಅಡುಗೆ ಎಣ್ಣೆಯನ್ನು ಡೀಸೆಲ್‌ ಆಗಿ ಪರಿವರ್ತಿಸುವ ಕೆಲಸದಲ್ಲಿ ನಿರತವಾಗಿದೆ. ದೇಶದ ಜೈವಿಕ ಇಂಧನ ತಯಾರಿಕೆ ಕುರಿತ ಯತ್ನಗಳ ಸಂಪೂರ್ಣ ವಿಶ್ಲೇಷಣೆ ಇಲ್ಲಿದೆ.

ಜತ್ರೋಪ ಗಿಡದಿಂದ ಜೈವಿಕ ಇಂಧನಗಳನ್ನು ಯಶಸ್ವಿಯಾಗಿ ಹೊರತೆಗೆದ ಭಾರತೀಯ ಪೆಟ್ರೋಲಿಯಂ ಸಂಶೋಧನಾ ಸಂಸ್ಥೆ (ಐಐಪಿ) ಅಡುಗೆ ಎಣ್ಣೆಯನ್ನು ಡೀಸೆಲ್‌ ಆಗಿ ಪರಿವರ್ತಿಸುವ ಪ್ರಕ್ರಿಯೆಯಲ್ಲಿ ಮಗ್ನವಾಗಿದೆ. ಕಳೆದ ತಿಂಗಳು ಕೋಲ್ಕತ್ತಾದಲ್ಲಿ ನಡೆದ ಅಂತರರಾಷ್ಟ್ರೀಯ ವಿಜ್ಞಾನ ಮೇಳದಲ್ಲಿ ಐಐಪಿ ವಿಜ್ಞಾನಿಗಳು ಈ ವಿಷಯದ ಬಗ್ಗೆ ಪ್ರಾತ್ಯಕ್ಷಿಕೆ ನೀಡಿದರು. ತಾಜಾ ಖಾದ್ಯ ತೈಲಗಳಿಗೆ ಮೆಥನಾಲ್ ಮತ್ತು ಕೆಲವು ರಾಸಾಯನಿಕಗಳನ್ನು ಸೇರಿಸುವ ಮೂಲಕ ಡೀಸೆಲ್ ಆಗಿ ಪರಿವರ್ತಿಸಬಹುದು. ಅಗ್ಗದ ದರದಲ್ಲಿ ಇದರ ತಯಾರಿಕೆ ಸಾಧ್ಯ. ಐಐಪಿ ಹಲವು ವರ್ಷಗಳಿಂದ ಜತ್ರೋಪ ಗಿಡಗಳನ್ನು ಬಳಸಿ ಜೈವಿಕ ಇಂಧನ ಉತ್ಪಾದಿಸುತ್ತಿದೆ. ಅನೇಕ ರಾಜ್ಯಗಳ ರೈತರು ಜತ್ರೋಪವನ್ನು ವಾಣಿಜ್ಯ ಬೆಳೆಯಾಗಿ ಬೆಳೆಸಲು ಶುರು ಮಾಡಿದ್ದಾರೆ. ಈ ಸಸ್ಯಗಳನ್ನು ಕ್ಷಿಪ್ರ ಗತಿಯಲ್ಲಿ ಬೆಳೆಸಲು ಇಸ್ರೇಲ್ ಅಭಿವೃದ್ಧಿ ಮಾಡಿರುವ ತಂತ್ರಜ್ಞಾನವನ್ನು ಭಾರತೀಯ ರೈತರು ಅಳವಡಿಸಿಕೊಳ್ಳುತ್ತಿದ್ದಾರೆ. ಮತ್ತೊಂದೆಡೆ, ಕೇಂದ್ರ ಸರ್ಕಾರದ ಪ್ರೋತ್ಸಾಹದೊಂದಿಗೆ ದೇಶಾದ್ಯಂತ ಎಥೆನಾಲ್ ಅನ್ನು ಇಂಧನವಾಗಿ ಬಳಸಲಾಗುತ್ತಿದೆ. ಅಡುಗೆ ಎಣ್ಣೆಯಿಂದ ಜೈವಿಕ ಇಂಧನ ತಯಾರಿಸಲು ಯತ್ನಗಳು ನಡೆಯುತ್ತಿವೆ. ಐಐಪಿ ಜತ್ರೋಪದಿಂದ ಸಿದ್ಧಪಡಿಸಿದ ಜೈವಿಕ ಇಂಧನವನ್ನು ಹಲವು ವರ್ಷಗಳ ಹಿಂದೆ ಎರಡು ದ್ವಿ-ಸ್ಟ್ರೋಕ್ ಎಂಜಿನ್‌ಗಳಲ್ಲಿ ಯಶಸ್ವಿಯಾಗಿ ಬಳಸಲಾಯಿತು. ಮಹಾರಾಷ್ಟ್ರ ಸಾರಿಗೆ ಕಂಪನಿಯ ಕೆಲ ವಾಹನಗಳು ಸಹ ಈ ಇಂಧನ ಬಳಸಿ ಓಡುತ್ತಿದ್ದವು. ಈ ರೀತಿಯ ಪ್ರಯತ್ನಗಳ ಹೊರತಾಗಿಯೂ, ವಾಣಿಜ್ಯ ನೆಲೆಯಲ್ಲಿ ಜೈವಿಕ ಇಂಧನ ಉತ್ಪಾದನೆ ಇನ್ನೂ ಆರಂಭ ಆಗಿಲ್ಲ. ತಾಜಾ ಖಾದ್ಯ ತೈಲಗಳಿಂದ ಜೈವಿಕ ಇಂಧನಗಳು ವೇಗ ಪಡೆಯುತ್ತಿವೆ.

ಜೈವಿಕ ಇಂಧನವಾಗಿ ಯಶಸ್ಸು ಪಡೆದ ಜತ್ರೋಪದಿಂದ 330 ಕಿ. ಗ್ರಾಂ ಡೀಸೆಲ್ ತಯಾರಿಸಿ ಅದರ ಮೂಲಕ ಒಂದು ವಿಮಾನ ಕೂಡ ಹಾರಾಟ ನಡೆಸಿದೆ. 2018 ರಲ್ಲಿ ಸ್ಪೈಸ್‌ಜೆಟ್ ಏರ್‌ಲೈನ್ಸ್ ಒಡೆತನದ ಈ ವಿಮಾನ ದೆಹಲಿಯಿಂದ ಡೆಹ್ರಾಡೂನ್‌ಗೆ 45 ನಿಮಿಷಗಳ ಕಾಲ ಹಾರಿತು. 2019 ರ ಗಣರಾಜ್ಯೋತ್ಸವ ದಿನದ ಪಥ ಸಂಚಲನದ ವೇಳೆ ವಾಯುಪಡೆಯ ಎಎಸ್ -32 ಸಾರಿಗೆ ವಿಮಾನವನ್ನು ಜೈವಿಕ ಇಂಧನ ಬಳಸಿ ಚಲಾಯಿಸಲಾಯಿತು. ಜತ್ರೋಪ ಸಸ್ಯ ಶೇ 40ರಷ್ಟು ತೈಲದ ಅಂಶವನ್ನು ಒಳಗೊಂಡಿರುತ್ತದೆ. ವಿಮಾನ ಹಾರಾಟ ನಡೆಸುವಾಗ ಇದರ ಜೊತೆಗೆ ವಾಯುಯಾನ ಟರ್ಬೈನ್ ಇಂಧನ (ಎಟಿಎಫ್) ಕೂಡ ಇರಿಸಲಾಗಿತ್ತು. ಛತ್ತೀಸ್‌ಗಡದ ಮಾವೋವಾದಿ ಪೀಡಿತ ಪ್ರದೇಶಗಳಲ್ಲಿ ಸುಮಾರು 500 ರೈತರು ಜತ್ರೋಪ ಗಿಡಗಳನ್ನು ಬೆಳೆಸುತ್ತಿದ್ದಾರೆ. ಪ್ರಕೃತಿಯಲ್ಲಿ ಸಿಗುವ 400 ವಿವಿಧ ಬಗೆಯ ಬೀಜಗಳನ್ನು ಜೈವಿಕ ಇಂಧನ ಉತ್ಪಾದನೆ ಮಾಡಲು ಬಳಸಲಾಗುತ್ತದೆ. ಸೀಮೆಎಣ್ಣೆ ಇರುವ ವಾಯುಯಾನ ಟರ್ಬೈನ್ ಇಂಧನ ಬಳಸಿ ಹಾರಾಟ ನಡೆಸಿದರೆ ಹವಾಮಾನದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ವಿಮಾನಗಳ ಹಾರಾಟದಿಂದ ಸುಮಾರು ಶೇ 4.9 ರಷ್ಟು ಹವಾಮಾನ ಬದಲಾವಣೆ ಉಂಟಾಗುತ್ತದೆ.

ಜೈವಿಕ ಇಂಧನಗಳ ಬಳಕೆಯಿಂದ ಇಂಗಾಲದ ಹೊರಸೂಸುವಿಕೆ ಬಹಳಷ್ಟುಕಡಿಮೆ ಆಗುತ್ತದೆ ಎಂಬುದು ಐಐಪಿಯ ಹಿರಿಯ ವಿಜ್ಞಾನಿ ಡಾ.ರಂಜನ್ ರೇ ಅವರ ವಿವರಣೆ. ಭಾರತದಲ್ಲಿ ವೈಮಾನಿಕ ಚಟುವಟಿಕೆಗಳಿಗೆ ಬಳಸಲಾಗುವ ಜೆಟ್ ವಿಮಾನಗಳಿಗೆ ಪ್ರತಿ ವರ್ಷ 60 - 70 ಲಕ್ಷ ಟನ್ ಎಟಿಎಫ್ ಅಗತ್ಯ ಇದೆ. ಆ ಬೇಡಿಕೆಯ ಅರ್ಧದಷ್ಟನ್ನು ಜೈವಿಕ ಡೀಸೆಲ್ ಪೂರೈಸುತ್ತದೆ. ಹೀಗಿರುವಾಗ ಈ ಅರ್ಧದಷ್ಟು ಜೈವಿಕ ಡೀಸೆಲ್ನಲ್ಲಿ ಮೂರನೇ ಒಂದು ಭಾಗದಷ್ಟು ಅಡುಗೆ ಎಣ್ಣೆಯಿಂದ ತಯಾರಾದ ಇಂಧನ ಬಳಕೆಯಾದರೆ ಎಟಿಎಫ್ ವೆಚ್ಚ ಕಡಿಮೆ ಆಗುತ್ತದೆ. ಅಲ್ಲದೆ ಇಂಗಾಲದ ಹೊರಸೂಸುವಿಕೆ ಪ್ರಮಾಣ ಕೂಡ ತಗ್ಗುತ್ತದೆ. ಒಂದು ಲೀಟರ್ ಅಡುಗೆ ಎಣ್ಣೆಯಿಂದ 850 - 950 ಮಿ. ಲೀ ಜೈವಿಕ ಇಂಧನ ಉತ್ಪಾದಿಸಿ ಡೀಸೆಲ್ ಗೆ ಬಳಸಬಹುದು. ಹೋಟೆಲ್‌ಗಳು ಮತ್ತು ಇತರ ವಾಣಿಜ್ಯ ರೆಸ್ಟೋರೆಂಟ್‌ಗಳಲ್ಲಿ ಒಮ್ಮೆ ಬಳಸಿದ ಖಾದ್ಯ ತೈಲಗಳ ಮರು ಬಳಕೆಗೆ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಸಂಸ್ಥೆ ( ಎಫ್‌ ಎಸ್‌ ಎಸ್‌ ಎ ಐ ) ಹೊಸ ನಿರ್ಬಂಧಗಳನ್ನು ವಿಧಿಸಿದೆ. ಖಾದ್ಯ ತೈಲಗಳಿಂದ ಹೊರತೆಗೆಯಲಾದ ಜೈವಿಕ ಡೀಸೆಲ್‌ನಿಂದ, ಜೆಟ್ ವಿಮಾನ ಮತ್ತು ಮೋಟಾರು ವಾಹನಗಳನ್ನು ಸಹ ಓಡಿಸಬಹುದು. ಇದು ಹವಾಮಾನದ ಮೇಲೆ ಇಂಗಾಲದ ಹೆಜ್ಜೆಗುರುತುಗಳು ಮೂಡದಂತೆ ನೋಡಿಕೊಳ್ಳುತ್ತದೆ. ಆದ್ದರಿಂದ, ಜೈವಿಕ ಡೀಸೆಲ್ ಅನ್ನು ಹಲವು ವಿಧಗಳಲ್ಲಿ ಉತ್ಪಾದಿಸುವ ಯತ್ನಗಳು ನಡೆಯುತ್ತಿವೆ. ಈಗಾಗಲೇ ಸುಮಾರು 9 ರಾಜ್ಯಗಳು ಹಾಗೂ 4 ಕೇಂದ್ರಾಡಳಿತ ಪ್ರದೇಶಗಳಲ್ಲಿ, ಕಬ್ಬಿನಿಂದ ಎಥೆನಾಲ್ ಅನ್ನು ಹೊರತೆಗೆದು ಎಂಜಿನ್‌ಗಳಲ್ಲಿ ಇಂಧನವಾಗಿ ಬಳಸಲಾಗುತ್ತದೆ. ಭಾರತ 2005 ರಲ್ಲಿ ಸುಮಾರು 160 ಶತಕೋಟಿ ಲೀಟರ್ ಎಥೆನಾಲ್ ತಯಾರಿಸಿ ವಿಶ್ವದ ನಾಲ್ಕನೇ ಅತಿದೊಡ್ಡ ಎಥೆನಾಲ್ ಉತ್ಪಾದಕ ದೇಶ ಎನಿಸಿಕೊಂಡಿದೆ.

ಸಾಂಪ್ರದಾಯಿಕ ಇಂಧನಕ್ಕೆ ಜೈವಿಕ ಡೀಸೆಲ್ ಮಿಶ್ರಣ ಮಾಡುವ ಮೂಲಕ ಡೀಸೆಲ್ ಬಳಕೆಯನ್ನು ಶೇ 20ರಷ್ಟು ಕಡಿಮೆ ಮಾಡಲು ಭಾರತ ಚಿಂತಿಸಿದೆ. ಪೂರ್ವ ಏಷ್ಯಾದ ಇಂಧನ ಸುರಕ್ಷತೆ ಕುರಿತಂತೆ 2007 ರಲ್ಲಿ ಭಾರತ 10 ಆಸಿಯಾನ್ (ASEAN) ಸದಸ್ಯ ದೇಶಗಳೊಂದಿಗೆ (ಇಂಡೋನೇಷ್ಯಾ, ಮಲೇಷ್ಯಾ, ಫಿಲಿಪೈನ್ಸ್, ಸಿಂಗಾಪುರ್, ಥೈಲ್ಯಾಂಡ್, ಬ್ರುನಾಯ್, ವಿಯೆಟ್ನಾಂ, ಲಾವೋಸ್, ಬರ್ಮಾ ಮತ್ತು ಕಾಂಬೋಡಿಯಾ) ಸಿಬು ಘೋಷಣೆಗೆ ಸಹಿ ಹಾಕಿತು. ಜೊತೆಗೆ ಚೀನಾ, ಜಪಾನ್, ನ್ಯೂಜಿಲೆಂಡ್, ಭಾರತ, ದಕ್ಷಿಣ ಕೊರಿಯಾ ಹಾಗೂ ಆಸ್ಟ್ರೇಲಿಯಾ ಕೂಡ ಈ ಬಗೆಯ ಒಪ್ಪಂದ ಮಾಡಿಕೊಂಡವು. ಜೈವಿಕ ಇಂಧನಗಳ ಸಂಶೋಧನೆ ಮತ್ತು ಅಭಿವೃದ್ಧಿಯ ಗುರಿಯನ್ನು ಘೋಷಣೆ ಒಳಗೊಂಡಿದೆ. ಈ ದೇಶಗಳು ಈಗಾಗಲೇ ಜೈವಿಕ ಇಂಧನ ಉತ್ಪಾದನೆ ಹೆಚ್ಚಿಸಲು, ನಿರಂತರವಾಗಿ ಹೆಚ್ಚುತ್ತಿರುವ ವಾಯುಮಾಲಿನ್ಯವನ್ನು ನಿಯಂತ್ರಿಸಲು ಮತ್ತು ತೈಲ ನಿಕ್ಷೇಪಗಳ ಅವಲಂಬನೆ ಕಡಿಮೆ ಮಾಡಲು ಶ್ರಮಿಸುತ್ತಿವೆ. ಅಮೆರಿಕ, ಬ್ರೆಜಿಲ್, ಕೆನಡಾ, ಕೊಲಂಬಿಯಾ ಹಾಗೂ ವೆನೆಜುವೆಲಾ ಈಗಾಗಲೇ ಜೈವಿಕ ಇಂಧನ ಉತ್ಪಾದನೆಯಲ್ಲಿ ಪ್ರಮುಖ ಮೈಲಿಗಲ್ಲು ತಲುಪಿವೆ. ಜಗತ್ತಿನ ಶೇ 40 ರಷ್ಟು ಜೈವಿಕ ಇಂಧನ ಅಮೆರಿಕ ಒಂದರಲ್ಲೇ ತಯಾರಾಗುತ್ತದೆ. ಅಮೆರಿಕ ವರ್ಷಕ್ಕೆ 3 ರಿಂದ 4 ಟ್ರಿಲಿಯನ್ ಟನ್ ಜೈವಿಕ ಇಂಧನ ಉತ್ಪಾದನೆ ಮಾಡುತ್ತಿದ್ದು ಉದ್ಯಮದಲ್ಲಿ ದೊಡ್ಡಣ್ಣ ಎನಿಸಿಕೊಂಡಿದೆ. 2.5 ಬಿಲಿಯನ್ ಟನ್ ಹಸಿರು ಇಂಧನ ತಯಾರಿಸುವ ಬ್ರೆಜಿಲ್ ಎರಡನೇ ಅತಿದೊಡ್ಡ ಜೈವಿಕ ಇಂಧನ ಉತ್ಪಾದಕ ದೇಶವಾಗಿ ಹೊರಹೊಮ್ಮಿದೆ. ಒಂದು ಟನ್ ತೈಲ ಉರಿಸಿದಾಗ 3.15 ಟನ್ ಇಂಗಾಲ ಉತ್ಪತ್ತಿ ಆಗುತ್ತದೆ.

ಅನೇಕ ದೇಶಗಳು ತೈಲವನ್ನು ಕಲುಷಿತಗೊಳಿಸುವ ಬದಲಿಗೆ ಸುರಕ್ಷಿತ ಜೈವಿಕ ಇಂಧನಗಳ ಉತ್ಪಾದನೆ ಮಾಡಲು ನವೀನ ಯೋಜನೆಗಳೊಂದಿಗೆ ಮುಂದಡಿ ಇಡುತ್ತಿವೆ. ತಾಜಾ / ಬಳಸಿದ ಖಾದ್ಯ ತೈಲಗಳು ಹಾಗೂ ಪ್ರಾಣಿಗಳ ಕೊಬ್ಬಿನಿಂದ ಅಮೆರಿಕ ಭಾರಿ ಪ್ರಮಾಣದಲ್ಲಿ ಜೈವಿಕ ಇಂಧನ ತಯಾರು ಮಾಡುತ್ತಿದೆ. ಈ ರೀತಿಯ ಜೈವಿಕ ಇಂಧನವನ್ನು ನಾಗರಿಕ ಮತ್ತು ಮಿಲಿಟರಿ ಮೋಟಾರು ವಾಹನಗಳಲ್ಲಿ ಬಳಸಲಾಗುತ್ತಿದ್ದು 20 ರಷ್ಟು ಭಾಗ ಜೈವಿಕ ಇಂಧನ ಮತ್ತು 80 ರಷ್ಟು ಭಾಗ ಸಾಮಾನ್ಯ ಡೀಸೆಲ್‌ ಮಿಶ್ರಣ ಮಾಡಲಾಗುತ್ತಿದೆ. 2018 ರಲ್ಲಿ ಅಮೆರಿಕ ಜೈವಿಕ ಇಂಧನ ಬಳಸಿ ದೊಡ್ಡಮಟ್ಟದಲ್ಲಿ ವಿಮಾನ ಹಾರಾಟ ಆರಂಭಿಸಿದೆ.

ಜೋಳ, ಮರದ ಹೊಟ್ಟು, ಪಾಚಿ, ಪ್ರಾಣಿ ಮತ್ತಿತರ ತ್ಯಾಜ್ಯಗಳಂತಹ ಕಚ್ಚಾ ವಸ್ತುಗಳಿಂದ ಜೈವಿಕ - ಮೀಥೇನ್, ಬಯೋ ಡೀಸೆಲ್ ಮುಂತಾದ ಇಂಧನ ಉತ್ಪಾದಿಸಲು ಜಗತ್ತಿನೆಲ್ಲೆಡೆ ಪ್ರಯೋಗಗಳು ನಡೆಯುತ್ತಿವೆ. ಅಂತರರಾಷ್ಟ್ರೀಯ ಇಂಧನ ಸಂಸ್ಥೆ ನಿಗದಿಪಡಿಸಿರುವ ಗುರಿ ತಲುಪಲು ಮತ್ತು ಸುಸ್ಥಿರ ಅಭಿವೃದ್ಧಿ ಸಾಧನೆ ಮಾಡಲು, 2030 ರ ವೇಳೆಗೆ ಜಾಗತಿಕ ಜೈವಿಕ ಇಂಧನ ಉತ್ಪಾದನೆ ಮೂರು ಪಟ್ಟು ಹೆಚ್ಚಳ ಆಗಬೇಕಿದೆ. ಅಂತೆಯೇ, ಬೆಳೆ ಅಭಿವೃದ್ಧಿ ಕೇಂದ್ರಗಳನ್ನು ಜೈವಿಕ ಇಂಧನ ಉತ್ಪಾದನಾ ಘಟಕಗಳಾಗಿ ಪರಿವರ್ತಿಸಿದರೆ ಆಹಾರ ಸುರಕ್ಷತೆಗೆ ಧಕ್ಕೆ ಉಂಟಾಗುತ್ತದೆ ಎಂಬ ಆತಂಕ ಕೂಡ ಉಂಟು ! !

ABOUT THE AUTHOR

...view details