ಬೆಂಗಳೂರು:ಬೆಂಗಳೂರಿನಲ್ಲಿರುವ ಭಾರತೀಯ ವಿಜ್ಞಾನ ಸಂಸ್ಥೆ(ಐಐಎಸ್ಸಿ) ಹಾಲಿನ ಕಲಬೆರಕೆ ಪತ್ತೆ ನೂತನ ವಿಧಾನ ಆವಿಷ್ಕಾರ ಮಾಡಿದೆ.ಇಲ್ಲಿನ ಇಂಜಿನಿಯರಿಂಗ್ ವಿಭಾಗದ ವಿಜ್ಞಾನಿಗಳು ಹಾಲಿನಲ್ಲಿನ ನೀರಿನ ಹಾಗೂ ಯೂರಿಯಾ ಕಲಬೆರಕೆ ಪತ್ತೆ ಮಾಡುವ ಹೊಸ ವಿಧಾನ ಕಂಡುಹಿಡಿದಿದ್ದಾರೆ.
ದಿನದಿಂದ ದಿನಕ್ಕೆ ಹಾಲಿನ ಬೇಡಿಕೆ ಹೆಚ್ಚಾಗುತ್ತಿದ್ದಂತೆ ಕಲಬೆರಕೆ ಹೆಚ್ಚಾಗುತ್ತಿದ್ದು, ಕೆಲವೊಂದು ರಾಸಾಯನಿಕ ಹಾಗೂ ನೀರು ಕಲಬೆರಕೆ ಮಾಡಲಾಗ್ತಿದೆ. ಇದರ ಬೆನ್ನಲ್ಲೇ ಭಾರತೀಯ ವಿಜ್ಞಾನ ಸಂಸ್ಥೆ ಕಂಡು ಹಿಡಿದಿರುವ ಈ ಆವಿಷ್ಕಾರ ಮಹತ್ವದ ಪಡೆದುಕೊಂಡಿದೆ.
ಹಾಲಿನಲ್ಲಿ ನೀರು ಬೆರೆಸಿದೆಯೋ ಇಲ್ಲವೋ ಎನ್ನುವುದನ್ನ ಪತ್ತೆ ಮಾಡಲು ಸದ್ಯ ಲ್ಯಾಕ್ಟೋಮೀಟರ್ ಬಳಸಲಾಗ್ತಿದ್ದು, ಹಾಲು ಹೆಪ್ಪುಗಟ್ಟಿಸಿ ಉಷ್ಣತೆ ಗಮನಿಸಬೇಕು.ಆದರೆ ಯೂರಿಯಾ ಕಲಬೆರಕೆ ಪತ್ತೆ ಕಷ್ಟ. ಆದರೆ ಇದೀಗ ಐಐಎಸ್ಸಿಯ ಸ್ನಾತಕೋತ್ತರ ಸಂಶೋಧಕ ವೀರ್ಕೇಶ್ವರ್ ಕುಮಾರ್ ಹಾಗೂ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಸುಸ್ಮಿತಾ ದಾಸ್ ನಡೆಸಿರುವ ಆವಿಷ್ಕಾರದಿಂದ ಕಲಬೆರಕೆ ಪತ್ತೆ ಮಾಡಬಹುದಾಗಿದೆ.