ಬೆಂಗಳೂರು:ಹೈದರಾಬಾದ್ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ ಆರ್ಟಿಕಲ್ 371ಜೆ ಅನುಷ್ಠಾನದ ಲೋಪದೋಶ ಸರಿಪಡಿಸುವಂತೆ ಬಿಜೆಪಿ ಶಾಸಕರ ನಿಯೋಗ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರಿಗೆ ಮನವಿ ಸಲ್ಲಿಸಿತು.
ಹೈ.ಕ ಭಾಗಕ್ಕೆ ಸಂವಿಧಾನದ 371(ಜೆ) ಕಲಂ ಅನ್ವಯ ಮೀಸಲಾತಿ ನೀಡುತ್ತಿಲ್ಲ. ನಿಗದಿಗೊಳಿಸಲಾದ ಮೀಸಲಾತಿ ಉಲ್ಲಂಘಿಸಿ ನೇಮಕಾತಿ ನಡೆಯುತ್ತಿದೆ. ಇದನ್ನು ಸರಿಪಡಿಸಬೇಕು ಹಾಗು ಸಮಗ್ರ ಅನುಷ್ಠಾನದಲ್ಲಾಗುತ್ತಿರುವ ಲೋಪದೋಷಗಳನ್ನು ಸರಿಪಡಿಸುವಂತೆ ಮನವಿ ಸಲ್ಲಿಸಲಾಯಿತು.
ಮನವಿ ಆಲಿಸಿದ ಸಿಎಂ, ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಕೊರೊನಾ ಕಾರಣಕ್ಕೆ ನೇಮಕಾತಿಯಲ್ಲಿ ವಿಳಂಬವಾಗಿದೆ, ಆರ್ಥಿಕ ಸ್ಥಿತಿಗತಿ ನೋಡಿಕೊಂಡು ನೇಮಕಾತಿ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ ಎನ್ನಲಾಗಿದೆ.
ಶಾಸಕ ಕರುಣಾಕರ ರೆಡ್ಡಿ, ಸೋಮಶೇಖರ್ ರೆಡ್ಡಿ, ಹಾಲಪ್ಪ ಆಚಾರ್ಯ, ಪರಣ್ಣ ಮನವಳ್ಳಿ, ರಾಜ್ ಕುಮಾರ್ ತೇಲ್ಕೂರ್ ವಿಧಾನ ಪರಿಷತ್ ಸದಸ್ಯರಾದ ಶಶಿಲ್ ನಮೋಶಿ, ಬಿಜಿ ಪಾಟೀಲ್ ನಿಯೋಗದಲ್ಲಿದ್ದರು.
ಇದನ್ನೂ ಓದಿ:ಸಿಡಿ ಪ್ರಕರಣ: ಶ್ರವಣ್ ಸೋದರ ಚೇತನ್ ಅಕ್ರಮ ಬಂಧನ ಆರೋಪ, ಪೋಷಕರಿಂದ ಹೈಕೋರ್ಟ್‌ಗೆ ಅರ್ಜಿ