ಕರ್ನಾಟಕ

karnataka

ETV Bharat / city

ಪ್ರಾಮಾಣಿಕವಾಗಿರುವುದೇ ನ್ಯಾಯಮೂರ್ತಿಗಳ ನಿಜವಾದ ಲಕ್ಷಣ: ನ್ಯಾ.ಸುಧೀಂದ್ರ ರಾವ್ - Bengaluru lawyer association

ಶೇ. 100ರಷ್ಟು ಪ್ರಾಮಾಣಿಕವಾಗಿ ಇರುವುದೇ ನಿಜವಾದ ನ್ಯಾಯಮೂರ್ತಿಯ ಲಕ್ಷಣ ಎಂದು ನ್ಯಾಯಮೂರ್ತಿ ಎನ್ .ಕೆ ಸುಧೀಂದ್ರರಾವ್ ತಿಳಿಸಿದರು.

felicitation to judges in bengaluru,ವಕೀಲರ ಸಂಘ
ವಕೀಲರ ಸಂಘ

By

Published : Dec 4, 2021, 4:13 AM IST

ಬೆಂಗಳೂರು:ನ್ಯಾಯಮೂರ್ತಿಗಳು ನೂರಕ್ಕೆ ನೂರರಷ್ಟು ಪ್ರಾಮಾಣಿಕವಾಗಿರಬೇಕು. ಶೇ. 100ರಷ್ಟು ಪ್ರಾಮಾಣಿಕವಾಗಿ ಇರುವುದೇ ನಿಜವಾದ ನ್ಯಾಯಮೂರ್ತಿಯ ಲಕ್ಷಣ ಎಂದು ನ್ಯಾಯಮೂರ್ತಿ ಎನ್ .ಕೆ ಸುಧೀಂದ್ರರಾವ್ ಅಭಿಪ್ರಾಯಪಟ್ಟರು.

ತಮ್ಮ ನಿವೃತ್ತಿ ದಿನವಾದ ಶುಕ್ರವಾರ ಬೆಂಗಳೂರು ವಕೀಲರ ಸಂಘದ ವತಿಯಿಂದ ಏರ್ಪಡಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಗೌರವ ಸ್ವೀಕರಿಸಿ ಮಾತನಾಡಿದ ನ್ಯಾ. ಸುಧೀಂದ್ರರಾವ್, ಯಾವುದೇ ನ್ಯಾಯಮೂರ್ತಿ ಪ್ರಾಮಾಣಿಕವಾಗಿ ತಮ್ಮ ಕರ್ತವ್ಯ ನಿರ್ವಹಿಸಿದ್ದಾರೆ ಎಂದು ಹೇಳುವ ಅಗತ್ಯವಿಲ್ಲ. ಯಾಕೆಂದರೆ, ನ್ಯಾಯಮೂರ್ತಿ ಎಂಬ ಪದವೇ ಪ್ರಾಮಾಣಿಕತೆಯ ಮತ್ತೊಂದು ಜೀವಂತ ರೂಪ ಎಂದು ಬಣ್ಣಿಸಿದರು.

ವಕೀಲರ ಸಂಘದ ಅಧ್ಯಕ್ಷ ಎ.ಪಿ.ರಂಗನಾಥ್‌ ಮಾತನಾಡಿ, ಸುಧೀಂದ್ರ ರಾವ್ ಅವರು ಬೆಂಗಳೂರು ಲೋಕಾಯುಕ್ತ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾಗಿದ್ದ ಅವಧಿಯಲ್ಲಿ ರಾಜಕಾರಣಿಗಳು ಅಧಿಕಾರಿಗಳ ಪಾಲಿಗೆ ಸಿಂಹಸ್ವಪ್ನವಾಗಿದ್ದರು. ಅವರು ನ್ಯಾಯಾಧೀಶರಾಗಿ ಜಾತೀಯತೆ ಮತ್ತು ಭ್ರಷ್ಟಾಚಾರದ ಕಡು ವಿರೋಧಿಯಾಗಿದ್ದರು. ಯಾರಿಗೂ ಜಾತಿ, ಮತಗಳ ಆಧಾರದಲ್ಲಿ ಮಣೆ ಹಾಕದೆ ಕಠಿಣವಾದ ತೀರ್ಪುಗಳನ್ನು ನೀಡಿದ್ದರು ಎಂದು ಶ್ಲಾಘಿಸಿದರು.

ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಮಾತನಾಡಿ, ಸುಧೀಂದ್ರರಾವ್‌ ನ್ಯಾಯಾಂಗದ ಪ್ರಾಮಾಣಿಕತೆ ಮತ್ತು ಸಮಗ್ರತೆಯನ್ನು ಎತ್ತಿ ಹಿಡಿದ ನ್ಯಾಯಮೂರ್ತಿ ಎಂದರು.

ಕಾರ್ಯಕ್ರಮದಲ್ಲಿ ಅಡ್ವೊಕೇಟ್ ಜನರಲ್‌ ಪ್ರಭುಲಿಂಗ ನಾವದಗಿ, ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಎಂ.ಬಿ ನರಗುಂದ್, ಸಹಾಯಕ ಸಾಲಿಸಿಟರ್‌ ಜನರಲ್‌ ಶಾಂತಿಭೂಷಣ್‌, ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಅರುಣ್ ಶ್ಯಾಮ್ ಹಾಗೂ ಹಲವು ಹಿರಿಯ–ಕಿರಿಯ ವಕೀಲರು ಹಾಜರಿದ್ದರು.

ABOUT THE AUTHOR

...view details