ಬೆಂಗಳೂರು:ತಡವಾಗಿ ಮನೆಗೆ ಬಂದ ಕಾರಣ ಅಣ್ಣನೊಬ್ಬ ತನ್ನ ತಮ್ಮನನ್ನು ಪ್ರಶ್ನೆ ಮಾಡಿದ್ದಾನೆ. ಈ ಸಿಟ್ಟಿನಲ್ಲಿ ತಮ್ಮ ಪಿಸ್ತೂಲ್ನಿಂದ ಗಾಳಿಯಲ್ಲಿ ಗುಂಡು ಹಾರಿಸಿದ್ದಾನೆ. ಈ ವೇಳೆ ಜಗಳ ಬಿಡಿಸಲು ಒಬ್ಬ ಸ್ನೇಹಿತನಿಗೆ ಗಾಯವಾಗಿರುವ ಘಟನೆ ಬೆಂಗಳೂರಿನ ಮಾಜಿ ಕಾರ್ಪೊರೇಟರ್ ಮನೆಯಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಬಿಬಿಎಂಪಿ ಮಾಜಿ ಸದಸ್ಯ ಸಮೀವುಲ್ಲಾ ಎಂಬುವರ ಮನೆಯಲ್ಲಿ ಡಿಸೆಂಬರ್ 20ರ(ಸೋಮವಾರ) ಬೆಳಗಿನ ಜಾವ ಈ ಘಟನೆ ನಡೆದಿದೆ. ಸಮೀವುಲ್ಲಾಗೆ ಅಮಿನ್ದಾದ ಮತ್ತು ಸಲ್ಮಾನ್ ಎಂಬ ಇಬ್ಬರು ಮಕ್ಕಳಿದ್ದಾರೆ. ಹೊರ ಹೋಗಿದ್ದ ಕಿರಿಯ ಮಗ ಸಲ್ಮಾನ್ ನಿನ್ನೆ ಮನೆಗೆ ತಡವಾಗಿ ಸ್ನೇಹಿತನ ಜೊತೆ ಬಂದಿದ್ದ.
ಮನೆಯಲ್ಲಿದ್ದ ಅಣ್ಣ ಅಮಿನ್ ದಾದಾ ತಮ್ಮನನ್ನು ಪ್ರಶ್ನಿಸಿ ಗದರಿಸಿದ್ದಾರೆ. ಇದರಿಂದ ಕೆರಳಿದ ಸಲ್ಮಾನ್ ಪಿಸ್ತೂಲ್ನಿಂದ ಮೂರು ಬಾರಿ ಫೈರ್ ಮಾಡಿದ್ದಾನೆ. ಮೊದಲ ಗುಂಡು ಗೋಡೆಗೆ, ಎರಡನೇ ಗುಂಡು ಮನೆಯ ಛಾವಣಿಗೆ ಹಾರಿಸಿ, ಮೂರನೇಯದಾಗಿ ತನ್ನ ತಲೆಗೆ ಇಟ್ಟುಕೊಂಡು ಶೂಟ್ ಮಾಡಿಕೊಳ್ಳಲು ಮುಂದಾಗಿದ್ದಾನೆ. ಈ ವೇಳೆ ಬಿಡಿಸಲು ಬಂದ ಸ್ನೇಹಿತ ಫೈಜಲ್ನ ಬಲಗೈಗೆ ಗುಂಡು ಹಾರಿಸಿದ್ದಾನೆ. ಸದ್ಯ ಫೈಜಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.