ಕರ್ನಾಟಕ

karnataka

ETV Bharat / city

ನಾಡಿನ ಸಮಸ್ತ ಜನತೆಗೆ ಗೌರಿ-ಗಣೇಶ ಹಬ್ಬಕ್ಕೆ ಶುಭಾಶಯ ಸಲ್ಲಿಸಿದ ಹೆಚ್​ಡಿಕೆ - don't make pollution

ನಾಡಿನ ಸಮಸ್ತ ಜನತೆಗೆ ಮಾಜಿ ಮುಖ್ಯಮಂತ್ರಿ ಹೆಚ್‍.ಡಿ. ಕುಮಾರಸ್ವಾಮಿ ಅವರು ಗೌರಿ-ಗಣೇಶ ಹಬ್ಬಕ್ಕೆ ಶುಭಾಶಯ ಕೋರಿದ್ದಾರೆ.

gowri ganesha festival wishes from former chief minister

By

Published : Sep 1, 2019, 4:33 PM IST

ಬೆಂಗಳೂರು:ನಾಡಿನ ಸಮಸ್ತ ಜನತೆಗೆ ಮಾಜಿ ಮುಖ್ಯಮಂತ್ರಿ ಹೆಚ್‍.ಡಿ.ಕುಮಾರಸ್ವಾಮಿ ಅವರು ಗೌರಿ-ಗಣೇಶ ಹಬ್ಬಕ್ಕೆ ಶುಭಾಶಯ ಕೋರಿದ್ದಾರೆ

ಟ್ವಿಟರ್​ ಹಾಗೂ ವಿಡಿಯೋ ಮೂಲಕ ಶುಭಾಶಯ ಸಲ್ಲಿಸಿರುವ ಅವರು, ಪರಿಸರ ಸ್ನೇಹಿಯಾಗಿ ಹಬ್ಬವನ್ನು ಆಚರಿಸುವ ಮೂಲಕ ಎಲ್ಲರಿಗೂ ಮಾದರಿಯಾಗೋಣ. ವಿಘ್ನ ವಿನಾಶಕನು ಎಲ್ಲರ ಬಾಳಲ್ಲೂ ಸುಖ, ಸಂತೋಷ, ಸಮೃದ್ಧಿಯನ್ನು ತರಲಿ ಎಂದು ಹಾರೈಸಿದ್ದಾರೆ.
ಮಾಜಿ ಮುಖ್ಯಮಂತ್ರಿ ಹೆಚ್‍.ಡಿ.ಕುಮಾರಸ್ವಾಮಿ
ಇತ್ತೀಚೆಗೆ ಪ್ಲಾಸ್ಟರ್​​ ಆಪ್‍ ಪ್ಯಾರಿಸ್‍ (ಪಿಒಪಿ) ಗಣೇಶ ಮೂರ್ತಿ ಬಳಕೆ ಹೆಚ್ಚಾಗುತ್ತಿದೆ. ಇದರಿಂದ ಪರಿಸರಕ್ಕೆ ಹಾನಿಯಾಗಲಿದೆ. ಬಣ್ಣದ ಗಣೇಶನನ್ನು ಪೂಜಿಸಿ ಕೆರೆಗಳಲ್ಲಿ ವಿಸರ್ಜಿಸಲಾಗುತ್ತಿದೆ. ಇದರ ಬದಲು ಮನೆಯಲ್ಲೇ ಬಕೆಟ್‍ಗಳಲ್ಲಿ ವಿಸರ್ಜಿಸಿ ಉಳಿಯುವ ಮಣ್ಣನ್ನು ಗಿಡಗಳಿಗೆ ಬಳಸಿ, ಪರಿಸರ ಹಾನಿ ತಪ್ಪಿಸಿ ಎಂದು ಮನವಿ ಮಾಡಿದ್ದಾರೆ.
ಸಿದ್ದರಾಮಯ್ಯಗೆ ಮೊದಲ ಶತ್ರು ಅಂತ ಹೇಳಿಲ್ಲ:ಡಿಜಿಟಲ್ ಮಾಧ್ಯಮದ ಪತ್ರಕರ್ತರಿಗೆ ಕೆಲ ದಿನಗಳ ಹಿಂದೆ ನೀಡಿದ ಸಂದರ್ಶನವನ್ನು ಇಂದು ಕೆಲವು ವಿದ್ಯುನ್ಮಾನ ಮಾಧ್ಯಮಗಳು ತಿರುಚಿವೆ. ಸಿದ್ದರಾಮಯ್ಯ ಅವರು ಚುನಾವಣೆಗೂ ಮುನ್ನ ಬಿಜೆಪಿಗಿಂತ ನಮ್ಮ ಪಕ್ಷವನ್ನು ಹೆಚ್ಚು ಟೀಕಿಸುತ್ತಿದ್ದರು ಎಂದು ಹೇಳಿದ್ದೆ. ಆದರೆ ಸಿದ್ದರಾಮಯ್ಯ ಅವರು ನನ್ನ ಮೊದಲ ಶತ್ರು ಎಂದಿರಲಿಲ್ಲ. ಆ ಬಗ್ಗೆ ಅನಗತ್ಯ ಗೊಂದಲ ಬೇಡ ಎಂದು ಟ್ವಿಟರ್​ನಲ್ಲಿ ಬರೆದುಕೊಂಡಿದ್ದಾರೆ.

ABOUT THE AUTHOR

...view details