ಕರ್ನಾಟಕ

karnataka

ETV Bharat / city

ಸರ್ಕಾರದ ವಿರುದ್ಧವೇ ಪ್ರತಿಭಟನೆಗಿಳಿದ ಸರ್ಕಾರಿ ನೌಕರರು.. ಅವರ ಬೇಡಿಕೆಗಳಿಷ್ಟೇ.. - ತುಟ್ಟಿಭತ್ಯೆ ಸ್ಥಗಿತ'

ಸರ್ಕಾರ ಕೋವಿಡ್ ನೆಪವೊಡ್ಡಿ ಕಳೆದ ವರ್ಷ 2020ನೇ ಸಾಲಿನ ಗಳಿಕೆ ರಜೆ ಮತ್ತು ತುಟ್ಟಿಭತ್ಯೆ ಮುಟ್ಟುಗೋಲು ಹಾಕಿಕೊಂಡಿತಲ್ಲದೆ, 2021ನೇ ಸಾಲಿನಲ್ಲಿಯೂ ಸಹ ಸೌಲಭ್ಯ ರದ್ದುಗೊಳಿಸಿರುವುದು ಸರಿಯಲ್ಲ..

Karnataka Government Employees Union President P Guruswamy
ಕರ್ನಾಟಕ ಸರ್ಕಾರದ ಸಚಿವಾಲಯ ನೌಕರರ ಸಂಘದ ಅಧ್ಯಕ್ಷ ಪಿ.ಗುರುಸ್ವಾಮಿ

By

Published : Jan 12, 2021, 5:15 PM IST

ಬೆಂಗಳೂರು :ತುಟ್ಟಿಭತ್ಯೆ ಸ್ಥಗಿತ, ಗಳಿಕೆ ರಜೆ ನಗದೀಕರಣ ರದ್ಧತಿ, ಸೇವಾ ನಿಯಮಗಳ ತಿದ್ದುಪಡಿ, ಹುದ್ದೆಗಳ ಕಡಿತ ಮತ್ತು ಕಾರ್ಮಿಕ ವಿರೋಧಿ ಅಂಶಗಳ ಕುರಿತು ಹಲವಾರು ಆದೇಶಗಳನ್ನು ಹೊರಡಿಸಿರುವುದನ್ನು ಖಂಡಿಸಿ ಕರ್ನಾಟಕ ಸರ್ಕಾರ ಸಚಿವಾಲಯ ನೌಕರರ ಸಂಘ ಹಾಗೂ ವಿಧಾನಸಭೆ ಮತ್ತು ವಿಧಾನ ಪರಿಷತ್ ಸಚಿವಾಲಯ ನೌಕರರ ಸಂಘದ ಸದಸ್ಯರು ವಿಧಾನಸೌಧ ಆವರಣದ ಗಾಂಧಿ ಪ್ರತಿಮೆ ಬಳಿ ಇಂದು ಪ್ರತಿಭಟನೆ ನಡೆಸಿದರು.

ಆರ್ಥಿಕ ಸಂಕಷ್ಟ ಹಿನ್ನೆಲೆ-2021ರ ಕ್ಯಾಲೆಂಡರ್ ವರ್ಷದಲ್ಲಿ ಗಳಿಕೆ ರಜೆ ನಗದೀಕರಣ ಪಡೆಯುವ ಸೌಲಭ್ಯವನ್ನು ರದ್ದುಗೊಳಿಸಿದ್ದಕ್ಕೆ ವಿರೋಧ ವ್ಯಕ್ತಪಡಿಸಿದ ಸಚಿವಾಲಯದ ಸಿಬ್ಬಂದಿ, ಕೂಡಲೇ ಈ ನಿರ್ಧಾರ ಹಿಂಪಡೆಯಬೇಕು ಎಂದು ಆಗ್ರಹಿಸಿದರು. ಜೊತೆಗೆ‌ ತಡೆಹಿಡಿಯಲಾಗಿರುವ ತುಟ್ಟಿಭತ್ಯೆ ಹೆಚ್ಚಳದ ಅಂಶವನ್ನು ಶೀಘ್ರ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.

ಇದನ್ನೂ ಓದಿ...ರಾಜ್ಯದಲ್ಲಿ 10 ದಶಲಕ್ಷ ಉದ್ಯೋಗ ಸೃಷ್ಟಿಗೆ ಸರ್ಕಾರ ಬದ್ಧ: ಡಿಸಿಎಂ ಅಶ್ವತ್ಥ ನಾರಾಯಣ

ಬೆಲೆ ಸೂಚ್ಯಂಕದ ಆಧಾರದ ಮೇರೆಗೆ ನೌಕರರಿಗೆ ನೀಡಲಾಗುತ್ತಿದ್ದ ತುಟ್ಟಿಭತ್ಯೆ ಕಡಿತಗೊಳಿಸಲಾಗಿದೆ. ಕೆಸಿಎಸ್​ಆರ್ (ಸಿಸಿಎ) ನಿಯಮಗಳಿಗೆ ಸರ್ಕಾರ ತಿದ್ದುಪಡಿ ತಂದಿದ್ದು, ಸಂವಿಧಾನ ಕೊಡ ಮಾಡುವ ನೌಕರರ ಮೂಲಭೂತ ಹಕ್ಕುಗಳನ್ನು ನಿಯಂತ್ರಿಸಲಾಗಿದೆ.

ರಾಜ್ಯ ಸರ್ಕಾರ ಅವೈಜ್ಞಾನಿಕವಾಗಿ ಹುದ್ದೆಗಳನ್ನೇ ಕಡಿತ ಮಾಡಲು ಹೊರಟಿರುವುದು ಸಮಂಜಸವಲ್ಲ. ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವುದರ ಬದಲಿಗೆ ಆಡಳಿತ ಸುಧಾರಣಾ ಆಯೋಗ ಭಾಗ-2 ಅನ್ನು ಜಾರಿಗೊಳಿಸಿರುವುದು ಎಷ್ಟು ಸರಿ? ಎಂದು ನೌಕರರು ಪ್ರಶ್ನಿಸಿದ್ದಾರೆ.

ಕರ್ನಾಟಕ ಸರ್ಕಾರದ ಸಚಿವಾಲಯ ನೌಕರರ ಸಂಘದ ಅಧ್ಯಕ್ಷ ಪಿ.ಗುರುಸ್ವಾಮಿ

ಪ್ರಮುಖ ಬೇಡಿಕೆಗಳೇನು?: ತುಟ್ಟಿಭತ್ಯೆ ಎನ್ನುವುದು ನೌಕರರು, ಶಿಕ್ಷಕರು ಮತ್ತು ಪಿಂಚಣಿದಾರರನ್ನು ಬೆಲೆಯೇರಿಕೆಯ ಬಾಧೆಯಿಂದ ರಕ್ಷಿಸಲು ಇರುವ ಗ್ರಾಹಕ ಬೆಲೆ ಸೂಚ್ಯಂಕ ಆಧಾರಿತ ಪರಿಹಾರ. ಈ ಸಾಲಿನ ತುಟ್ಟಿ ಭತ್ಯೆಯನ್ನು ಬಿಡುಗಡೆ ಮಾಡಬೇಕು. ಖಾಲಿ ಇರುವ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಬೇಕು.

ನಿವೃತ್ತ ಅಧಿಕಾರಿ, ನೌಕರರ ಪುನರ್ ನೇಮಕಾತಿ ಪ್ರಕ್ರಿಯೆ ಕೈಬಿಡಬೇಕು. ಸಚಿವಾಲಯದ 540 ಕಿರಿಯ ಸಹಾಯಕರ ಹುದ್ದೆಯ ರದ್ಧತಿ ಪ್ರಸ್ತಾವನೆ ವಾಪಸ್ ಪಡೆಯಬೇಕು. ಕಾನೂನು ಕೋಶದ ಅಧೀನ ಕಾರ್ಯದರ್ಶಿ ಹುದ್ದೆಗಳನ್ನು ರದ್ದುಪಡಿಸಿರುವ ಆದೇಶ ಹಿಂಪಡೆಯಬೇಕು. ನೂತನ ಪಿಂಚಣಿ ಯೋಜನೆಯನ್ನು ರದ್ದುಪಡಿಸಿ, ನಿಶ್ಚಿತ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಬೇಕು.

ಕೇಂದ್ರ ಸರ್ಕಾರದ ನೌಕರರಿಗಿರುವ ವೇತನವನ್ನು ರಾಜ್ಯ ಸರ್ಕಾರಿ ನೌಕರರಿಗೂ ನೀಡಬೇಕು. ಕರ್ನಾಟಕ ನಾಗರೀಕ ಸೇವಾ (ನಡತೆ) ನಿಯಮಗಳಲ್ಲಿ ಹೊರಡಿಸಿರುವ ಈ ಕೆಳಕಂಡ ಅಂಶಗಳ ತಿದ್ದುಪಡಿಯನ್ನು ಕೈಬಿಡಬೇಕು. ಮುಷ್ಕರ ನೌಕರರ ಸಂವಿಧಾನಾತ್ಮಕ ಹಕ್ಕು, ನೌಕರರ ಕುಂದುಕೊರತೆ ವಿಚಾರಗಳಲ್ಲಿ ಧಕ್ಕೆಯುಂಟಾದಾಗ ನೌಕರರ ಹಿತಾಸಕ್ತಿ ಕಾಯ್ದುಕೊಳ್ಳುವ ಸಂದರ್ಭದಲ್ಲಿ ನ್ಯಾಯ ಕೋರುವುದು ಅನಿವಾರ್ಯವಾಗಿರುತ್ತದೆ. ಆದುದರಿಂದ ನೌಕರರ ಬೇಡಿಕೆಗಳ ಕುರಿತಂತೆ ಪ್ರತಿಭಟನೆ/ಮುಷ್ಕರದಲ್ಲಿ ಭಾಗವಹಿಸಲು ನಿರ್ಬಂಧ ಇರಬಾರದು.

ಇದನ್ನೂ ಓದಿ...ಸಂಯೋಜಿತ ಹೃದಯ, ಎರಡು ಶ್ವಾಸಕೋಶ ಕಸಿ ಯಶಸ್ವಿ: ಮರುಜೀವ ಪಡೆದ ರೋಗಿಗಳು

ನೌಕರರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಮೊಟಕುಗೊಳಿಸುವ, ಸೃಜನಾತ್ಮಕತೆಗೆ ಅಂಕುಶವೊಡ್ಡುವ ತಿದ್ದುಪಡಿಗಳನ್ನು ಸಂಘ ವಿರೋಧಿಸುತ್ತದೆ. ವ್ಯಕ್ತಿ ಸ್ವಾತಂತ್ರ್ಯಕ್ಕೆ ತಡೆಯೊಡ್ಡುವಂತಹ ಯಾವುದೇ ಕ್ಷೇತ್ರದ ವಿಷಯಗಳ ಕುರಿತು ಬರೆಯಬಹುದಾದ ಹಕ್ಕು ಪ್ರತಿಯೊಬ್ಬ ನೌಕರರದೂ ಆಗಿರುತ್ತದೆ. ನೌಕರರಿಗಾಗುವ ಅನ್ಯಾಯದ ಬಗ್ಗೆ ಅರಿವು ಮೂಡಿಸುವುದು ನೌಕರ ಸಂಘಟನೆಗಳ ಕರ್ತವ್ಯ.

ಆದ್ದರಿಂದ ಮಾಧ್ಯಮಗಳಲ್ಲಿ ವಾಸ್ತವ ಹೇಳಿಕೆ ಅಥವಾ ಅಭಿಪ್ರಾಯವನ್ನು ವ್ಯಕ್ತಪಡಿಸತಕ್ಕದ್ದಲ್ಲ ಎಂಬ ಷರತ್ತನ್ನು ಕೈಬಿಟ್ಟು ಮಾನ್ಯತೆ ಹೊಂದಿರಲಿ. ಇಲ್ಲದಿರಲಿ ನೌಕರ ಸಂಘಟನೆಗಳು ನೌಕರ ಪರ ಧ್ವನಿಯಾಗಲು ನಿರ್ಬಂಧ ಹೇರಬಾರದು. ರಾಜಕೀಯ ಸಂಘಟನೆಗಳಲ್ಲಿ ಕುಟುಂಬ ಸದಸ್ಯರು ಭಾಗವಹಿಸಲು ಇರುವ ನಿರ್ಬಂಧವನ್ನು ಕೈಬಿಡಬೇಕು.

ಕರ್ನಾಟಕ ಸರ್ಕಾರದ ಸಚಿವಾಲಯ ನೌಕರರ ಸಂಘದ ಅಧ್ಯಕ್ಷ ಪಿ.ಗುರುಸ್ವಾಮಿ ಮಾತನಾಡಿ, ಇದು ಸಾಂಕೇತಿಕ ಪ್ರತಿಭಟನೆ. ಸರ್ಕಾರ ನಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ಮುಂದೆ ಹೋರಾಟದ ರೂಪು ರೇಷೆ ಬದಲಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ABOUT THE AUTHOR

...view details