ಬೆಂಗಳೂರು : ರಾಜ್ಯ ಸೇರಿದಂತೆ ದೇಶಾದ್ಯಂತ ಸದ್ಯ ಕುಂತ್ರು ನಿಂತ್ರು ಕೊರೊನಾ ಸೋಂಕು ಹಾಗೂ ಲಸಿಕೆಯದ್ದೇ ಚಿಂತೆ. ಸೋಂಕಿಗೆ ಚಿಕಿತ್ಸೆ ಪಡೆಯೋದ್ರಿಂದ ಹಿಡಿದು, ಲಸಿಕೆ ಪಡೆಯೋ ತನಕ ಕಾಯೋದೇ ಕೆಲಸ ಆಗಿದೆ. ಇದರ ಮಧ್ಯ ಲಸಿಕೆ ಪಡೆಯುವ ಕುರಿತು ಹಲವಾರು ಗೊಂದಲ ಜನರ ತಲೆಯಲ್ಲಿವೆ.
ಕೋವಿಡ್ ಲಸಿಕೆ ಯಾವಾಗ ಪಡಿಬೇಕು, ಮುಂದೂಡಬೇಕು ಅನ್ನೋ ಗೊಂದಲವಿದ್ರೆ ಈ ವರದಿ ನೋಡಿ..
ಲಸಿಕೆ ಪಡೆಯುವ ವಿಚಾರದಲ್ಲಿ ಗೊಂದಲ ಉಂಟಾದ ಹಿನ್ನೆಲೆ ಸರ್ಕಾರ ಕೋವಿಡ್-19 ಲಸಿಕಾಕರಣ ಪರಿಷ್ಕೃತ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಯಾರು ಯಾವಾಗ ಲಸಿಕೆ ಹಾಕಿಸಿಕೊಳ್ಳಬಹುದು? ಯಾವ ಸಂದರ್ಭದಲ್ಲಿ ಕೋವಿಡ್ -19 ವ್ಯಾಕ್ಸಿನೇಷನ್ ಪಡೆಯುವುದನ್ನು ಮುಂದೂಡಬಹುದು ಎನ್ನುವ ಕುರಿತು ವಿವರ ನೀಡಿದೆ..
ಕೋವಿಡ್ ಲಸಿಕೆ
ಸದ್ಯ ಇವೆಲ್ಲ ಗೊಂದಲಕ್ಕೆ ತೆರೆ ಎಳೆದಿರುವ ಸರ್ಕಾರ, ಕೋವಿಡ್-19 ಲಸಿಕಾಕರಣ ಕುರಿತು ಪರಿಷ್ಕೃತ ಮಾರ್ಗಸೂಚಿಗಳನ್ನ ಬಿಡುಗಡೆ ಮಾಡಿದೆ.
ಹಾಗಾದರೆ, ಯಾರು ಯಾವಾಗ ಲಸಿಕೆ ಹಾಕಿಸಿಕೊಳ್ಳಬಹುದು? ಯಾವ ಸಂದರ್ಭದಲ್ಲಿ ಕೋವಿಡ್-19 ವ್ಯಾಕ್ಸಿನೇಷನ್ ಪಡೆಯುವುದನ್ನು ಮುಂದೂಡಬಹುದು ಅನ್ನೋದನ್ನ ನೋಡುವುದಾದರೆ.
- ಕೋವಿಡ್ -19 ಸೋಂಕಿತರು ಚೇತರಿಸಿಕೊಂಡ 3 ತಿಂಗಳ ನಂತರ ಲಸಿಕೆ ಪಡೆಯಬೇಕು.
- ಎಸ್ಎಆರ್ಎಸ್-2 (SARS-2) ಮೊನೊಕ್ಲೋನಲ್ ಆಂಟಿಬಾಡಿ ಅಥವಾ ಪ್ಲಾಸ್ಮಾವನ್ನು ನೀಡಿದ ಎಸ್ಎಆರ್ಎಸ್-2 (SARS-2) ಕೋವಿಡ್ -19 ಸೋಂಕಿತರು ಚೇತರಿಸಿಕೊಂಡ 3 ತಿಂಗಳ ನಂತರ ಲಸಿಕೆ ಪಡೆಯಬೇಕು.
- ಮೊದಲನೇ ಡೋಸ್ ಪಡೆದ ನಂತರ ಕೋವಿಡ್ -19 ಸೋಂಕು ತಗುಲಿದರೆ, ಅವರಿಗೂ ಸಹ ಚೇತರಿಸಿಕೊಂಡ 3 ತಿಂಗಳ ನಂತರ ಎರಡನೇ ಡೋಸ್ ಲಸಿಕೆ ಪಡೆಯಬೇಕು.
- ಆಸ್ಪತ್ರೆಯಲ್ಲಿ ದಾಖಲಾಗಬೇಕಾದ ಅಥವಾ ಐಸಿಯು ಆರೈಕೆಯ ಅಗತ್ಯವಿರುವ ಯಾವುದೇ ಗಂಭೀರ ಅಥವಾ ಸಾಮಾನ್ಯ ಕಾಯಿಲೆ ಇರುವ ವ್ಯಕ್ತಿಗಳು ಸಹ ಕೋವಿಡ್-19 ಲಸಿಕೆ ಪಡೆಯಲು 4-8 ವಾರಗಳು ಕಾಯಬೇಕು.