ಕರ್ನಾಟಕ

karnataka

ETV Bharat / city

ಪರಿಷತ್​ ಫಲಿತಾಂಶ : 'ಕೈ' ಕೆಡವಿ ಗೆದ್ದ ಬಿಜೆಪಿ ಅಭ್ಯರ್ಥಿ ಗೋಪಿನಾಥ ರೆಡ್ಡಿ

ಎಲ್ಲಾ ಮತ ಎಣಿಕೆ ಕಾರ್ಯ ‌ಮುಗಿದಿದೆ. ನನಗೆ 1200ಕ್ಕೂ ಹೆಚ್ಚು ‌ಮತಗಳು ಬಂದಿದೆ. ಕೆಲವೇ ಕ್ಷಣದಲ್ಲಿ ಚುನಾವಣಾ ‌ಆಯೋಗ ಫಲಿತಾಂಶ ‌ಘೋಷಣೆ ಮಾಡುತ್ತದೆ..

gopinath-reddy-won-in-council-election
ಬಿಜೆಪಿ ಅಭ್ಯರ್ಥಿ ಗೋಪಿನಾಥ ರೆಡ್ಡಿ

By

Published : Dec 14, 2021, 12:03 PM IST

ಬೆಂಗಳೂರು : ಬಹು ಕುತೂಹಲಕ್ಕೆ ಕಾರಣವಾಗಿದ್ದ ಬೆಂಗಳೂರು ನಗರ ಪರಿಷತ್ ಚುನಾವಣೆ ಫಲಿತಾಂಶ ಹೊರ ಬಿದ್ದಿದೆ. ಕಾಂಗ್ರೆಸ್​ ಅಭ್ಯರ್ಥಿ ಕೆಜಿಎಫ್​ ಬಾಬು ವಿರುದ್ಧ ಬಿಜೆಪಿ ಅಭ್ಯರ್ಥಿ ಗೋಪಿನಾಥ ರೆಡ್ಡಿ ಗೆಲುವು ಸಾಧಿಸಿದ್ದಾರೆ.

bangalore council election results :ಜಿದ್ದಾಜಿದ್ದಿನ ಕಣವಾಗಿದ್ದ ಬೆಂಗಳೂರು ನಗರ ವಿಧಾನ ಪರಿಷತ್​ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಗೋಪಿನಾಥ ರೆಡ್ಡಿ, ಕಾಂಗ್ರೆಸ್‌ನ ಯೂಸೂಫ್ ಷರೀಫ್ ವಿರುದ್ಧ 400 ಮತಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದ್ದಾರೆ.

ಈ ಕುರಿತು ಗೋಪಿನಾಥ್ ರೆಡ್ಡಿ ಹೇಳಿಕೆ ನೀಡಿದ್ದಾರೆ. ಎಲ್ಲಾ ಮತ ಎಣಿಕೆ ಕಾರ್ಯ ‌ಮುಗಿದಿದೆ. ನನಗೆ 1200ಕ್ಕೂ ಹೆಚ್ಚು ‌ಮತಗಳು ಬಂದಿದೆ. ಕೆಲವೇ ಕ್ಷಣದಲ್ಲಿ ಚುನಾವಣಾ ‌ಆಯೋಗ ಫಲಿತಾಂಶ ‌ಘೋಷಣೆ ಮಾಡುತ್ತದೆ.

ಇದು ವೈಯಕ್ತಿಕ ಗೆಲುವಷ್ಟೇ ಅಲ್ಲ, ಪಕ್ಷದ ಗೆಲುವು ಆಗಿದೆ. ಬೈರತಿ ಬಸವರಾಜ್, ಸೋಮಶೇಖರ್, ಲಿಂಬಾವಳಿ ಸೇರಿದಂತೆ ಹಲವು‌ ಮುಖಂಡರ ಶ್ರಮವಿದೆ ಎಂದು ಹೇಳಿದರು.

  • ಬೆಂಗಳೂರು ನಗರ ವಿಧಾನ ಪರಿಷತ್ ಕ್ಷೇತ್ರ ಮತದಾನದ ವಿವರ ಈ ಕೆಳಗಿನಂತಿವೆ
  1. ಒಟ್ಟು ಚಲಾವಣೆ ಮತ- 2070
  2. ಅಸಿಂಧು -13
  3. ಸಿಂಧುವಾದ ಮತಪತ್ರ - 2057
  4. ಬಿಜೆಪಿಯ ಗೋಪಿನಾಥ ರೆಡ್ಡಿ- 1227
  5. ಕಾಂಗ್ರೆಸ್‌ನ ಯೂಸೂಫ್ ಷರೀಪ್- 830
  6. ಜಿ.ಎಂ ಶೀನಪ್ಪ-0
  7. 397 ಮತಗಳ ಅಂತರದಿಂದ ಗೋಪಿನಾಥ ರೆಡ್ಡಿ ಗೆಲುವು

ABOUT THE AUTHOR

...view details