ಬೆಂಗಳೂರು:ಇತ್ತೀಚೆಗೆ ದೇಶದಲ್ಲಿ ಕಿಡ್ನಿ ಸಮಸ್ಯೆ ಹೆಚ್ಚಾಗುತ್ತಲೇ ಇದ್ದು, ಒಂದಲ್ಲಾ ಒಂದು ಕಾರಣಕ್ಕೆ ಕಿಡ್ನಿ ವೈಫಲ್ಯ ಪ್ರಕರಣಗಳು ಹೆಚ್ಚುತ್ತಲಿವೆ. ವಾರ್ಷಿಕವಾಗಿ 2ರಿಂದ 3 ಲಕ್ಷ ಜನರು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಹೀಗಾಗಿ ಕಿಡ್ನಿ ಸಮಸ್ಯೆಯನ್ನು ತಡೆಗಟ್ಟಲು ಹಾಗೂ ಜನರಲ್ಲಿ ಕಿಡ್ನಿ ಕುರಿತು ಅರಿವು ಮೂಡಿಸುವ ಸಲುವಾಗಿ ರೀಗಲ್ ಆಸ್ಪತ್ರೆಯ ಯುರೊಲೊಜಿಸ್ಟ್ ಡಾ.ವಿ.ಸೂರಿರಾಜು 'ಕಿಡ್ನಿ ಸೀಕ್ರೆಟ್ಸ್ ರಿವೀಲ್ಡ್' ಎಂಬ ಇಂಗ್ಲಿಷ್ ಪುಸ್ತಕವೊಂದನ್ನ ಬರೆದಿದ್ದಾರೆ.
'ಕಿಡ್ನಿ ಸೀಕ್ರೆಟ್ಸ್ ರಿವೀಲ್ಡ್' ಪುಸ್ತಕ 170 ಪುಟಗಳನ್ನು ಹೊಂದಿದ್ದು, ಕಿಡ್ನಿ ಕುರಿತಾದ ಸಿಂಪಲ್ ಟಿಪ್ಸ್ ಅನ್ನು ಇದರಲ್ಲಿ ಮುದ್ರಿಸಲಾಗಿದೆ. ಅಮೆಜಾನ್ ಬೆಸ್ಟ್ ಸೆಲ್ಲರ್ ಪಡೆದ ಈ ಪುಸ್ತಕಕ್ಕೆ, ಇದೀಗ ಗೋಲ್ಡನ್‌ಬುಕ್ ಅವಾರ್ಡ್ ಸಿಕ್ಕಿದೆ. ವಿಂಗ್ಸ್ ಸಂಸ್ಥೆಯವರು ಗೋಲ್ಡನ್ ಬುಕ್ ಅವಾರ್ಡ್ ನೀಡಿದ್ದಾರೆ. ಪ್ರಶಸ್ತಿಗಾಗಿ ಪರಿಗಣಿಸಲು ಸ್ವೀಕರಿಸಿದ 5000 ನಾಮಿನೇಷನ್ಗಳ ಪೈಕಿ ಆಯ್ಕೆಯಾದ 35 ಪುಸ್ತಕಗಳಲ್ಲಿ ಈ ಪುಸ್ತಕವೂ ಒಂದಾಗಿದೆ.