ಬೆಂಗಳೂರು : ಹೊಸೂರು ರಸ್ತೆಯ ಗಾರ್ವೆಬಾವಿಪಾಳ್ಯದಲ್ಲಿರುವ ಪುನೀತ್ ಕ್ರಿಯೇಷನ್ ಗಾರ್ಮೆಂಟ್ಸ್ ಕಂಪನಿ ಜೂನ್ ತಿಂಗಳಲ್ಲಿನಲ್ಲಿಯೇ ತೆರೆದಿದ್ದರೂ ಸಹ ನೌಕರರಿಗೆ ಸಂಬಳ, ಭತ್ಯ ನೀಡದೆ ವಂಚನೆಮಾಡಿದೆ ಎಂದು ಆರೋಪಿಸಿ ಗಾರ್ಮೇಂಟ್ಸ್ ನೌಕರರು ಪ್ರತಿಭಟನೆ ಮಾಡುತ್ತಿದ್ದಾರೆ.
ಲಾಕ್ ಡೌನ್ ನಿಂದಾಗಿ ಎರಡು ತಿಂಗಳಿನಿಂದ ಮುಚ್ಚಿದ್ದ ಕಂಪನಿ ಜೂನ್ನಲ್ಲಿಯೇ ತನ್ನ ಕಾರ್ಯ ಪ್ರಾರಂಭಿಸಿತ್ತು, ಆದರೆ ನೌಕರರಿಗೆ ಸಂಬಳ ಭತ್ಯ ನೀಡದೆ ವಂಚನೆ ಮಾಡುತ್ತಿದೆ. ಅಲ್ಲದೆ ನೌಕರರು ಸಂಬಳ ಕೇಳಿದರೆ ಗಾರ್ಮೆಂಟ್ಸ್ ಕ್ಲೋಸ್ ಮಾಡುವುದಾಗಿ ಮಾಲೀಕರು ಹೇಳುತ್ತಿದ್ದು, ಸದ್ಯ 1000 ಕ್ಕೂ ಅಧಿಕ ಜನ ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ.
ವೇತನ, ಭತ್ಯ ನೀಡುವಂತೆ ಗಾರ್ಮೆಂಟ್ಸ್ ನೌಕರರ ಪ್ರತಿಭಟನೆ ಒಂದು ವೇಳೆ ಗಾರ್ಮೆಂಟ್ಸ್ ಮುಚ್ಚುವುದಾದರೆ ವೇತನ ESI, PF ಬ್ಯಾಲೆನ್ಸ್ ಕ್ಲಿಯರ್ ಮಾಡಿ ಎಂದು ಕಾರ್ಮಿಕರು ಪಟ್ಟು ಹಿಡಿದಿದ್ದು. ಕಳೆದ ಮೂರು ದಿನಗಳಿಂದ ಕಂಪನಿ ಮುಂದೆ ಹಗಲು ರಾತ್ರಿ ಪ್ರತಿಭಟನೆ ಮಾಡುತ್ತಿದ್ದಾರೆ.
ಈ ಹಿಂದೆ ಗಾರ್ಮೆಂಟ್ಸ್ ಮುಚ್ಚುವುದಾಗಿ ಹೇಳಿದ್ದ ಮಾಲೀಕರು ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ ಮತ್ತು ಪೊಲೀಸರ ಸಮ್ಮುಖದಲ್ಲಿ ESI, PF ಕೊಡಲು ಒಪ್ಪಿ, ಮೂರು ದಿನಗಳ ನಂತರ ಕೊಡುತ್ತೆವೆ ಎಂದು ಹೇಳಿದ್ದರು. ಅದರೆ ಈಗ ಕೊಡಲ್ಲ ಎನ್ನುತ್ತಿದ್ದಾರೆ. ಆದರೆ ಕೆಲಸವಿಲ್ಲದೆ ಬೀದಿಗೆ ಬಿದ್ದಿರುವ ಸಾವಿರಾರು ಕಾರ್ಮಿಕರು ತಮ್ಮ ಬೇಡಿಕೆಗಳು ಈಡೇರಿಸುವವರೆಗೂ ಪ್ರತಿಭಟನೆ ಮಾಡುವುದಾಗಿ ಪಟ್ಟು ಹಿಡಿದಿದ್ದಾರೆ.