ಬೆಂಗಳೂರು: ಕೊರೊನಾಗೆ ಚಿಕಿತ್ಸೆ ಕೊಡೋಕೆ ತನ್ನ ವಾಹನ ಇಲಿಯನ್ನೇ ನರ್ಸ್ ಆಗಿಸಿಕೊಂಡು ಆ್ಯಂಬುಲೆನ್ಸ್ ಹತ್ತಿ ನಗರಕ್ಕೆ ಬಂದಿದ್ದ ಡಾ. ಗಣೇಶ ವಾಹನನ ನಂತರ, ಈಗ ಇಂಡಿಯನ್ ಆರ್ಮಿ ಜೊತೆ ಪ್ರಧಾನಿ ನರೇಂದ್ರ ಮೋದಿಯನ್ನು ಕರೆದುಕೊಂಡು ಏಕದಂತ ನಗರದಲ್ಲಿ ಪ್ರತ್ಯಕ್ಷ ಆಗಿದ್ದಾನೆ.
ಹೌದು, ಗಣೇಶ ಚತುರ್ಥಿ ಹತ್ತಿರ ಬರುತ್ತಿದಂತೆ ವಿಭಿನ್ನ ಅಕಾರದ ಗಣೇಶನ ಮೂರ್ತಿಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತಿವೆ. ಅದೇ ರೀತಿ ಈ ವರ್ಷವೂ ಗಣೇಶ ಹಬ್ಬಕ್ಕೆ ದಿನಗಣನೆ ಶುರುವಾಗಿದೆ. ಕಲಾವಿದ ಶಶಿ ಎಂಬವರು ಕೊರೊನಾಗೆ ಚಿಕಿತ್ಸೆ ಕೊಡುತ್ತಿರುವ ವೈದ್ಯ ಗಣಪನ ಮೂರ್ತಿ ತಯಾರಿಸಿ ಗಮನ ಸೆಳೆದಿದ್ದರು. ಈಗ ಅದೇ ರೀತಿ ಪ್ರಧಾನಿ ಮೋದಿ ಜೊತೆ ಇರುವ ಗಣಪನ ಮೂರ್ತಿ ಜನರನ್ನು ಆಕರ್ಷಿಸುತ್ತಿದೆ.