ಕರ್ನಾಟಕ

karnataka

ETV Bharat / city

ಕಾವೇರಿ ಕೂಗು ಅಭಿಯಾನದಡಿ ಹಣ ಸಂಗ್ರಹಣೆಯಲ್ಲಿ ನಮ್ಮ ಪಾತ್ರವಿಲ್ಲ: ಈಶಾ ಫೌಂಡೇಶನ್​ನಿಂದ ಹೈಕೋಟ್​​ಗೆ ಮಾಹಿತಿ - isha Foundation news

ಕಾವೇರಿ ಕೂಗು ಅಭಿಯಾನದಡಿ ಸಾರ್ವಜನಿಕರಿಂದ ಹಣ ಸಂಗ್ರಹಿಸುತ್ತಿರುವ ವಿಚಾರದಲ್ಲಿ ಈಶಾ ಫೌಂಡೇಶನ್ ಪಾತ್ರವಿಲ್ಲ, ಬದಲಿಗೆ ಈಶಾ ಔಟ್‌ರೀಚ್ ಹೆಸರಿನ ಚಾರಿಟೇಬಲ್ ಟ್ರಸ್ಟ್ ಈ ಯೋಜನೆಗೆ ಕೆಲಸ ಮಾಡುತ್ತಿದೆ ಎಂದು ಈಶಾ ಫೌಂಡೇಶನ್ ಹೈಕೋರ್ಟ್​ಗೆ ಮಾಹಿತಿ ನೀಡಿದೆ.

ish foundation
ಈಶಾ ಫೌಂಡೇಶನ್

By

Published : Mar 3, 2020, 6:14 AM IST

ಬೆಂಗಳೂರು: ಕಾವೇರಿ ಕೂಗು ಅಭಿಯಾನದಡಿ ಸಾರ್ವಜನಿಕರಿಂದ ಹಣ ಸಂಗ್ರಹಿಸುತ್ತಿರುವ ವಿಚಾರದಲ್ಲಿ ಈಶಾ ಫೌಂಡೇಶನ್ ಪಾತ್ರವಿಲ್ಲ, ಬದಲಿಗೆ ಈಶಾ ಔಟ್‌ರೀಚ್ ಹೆಸರಿನ ಚಾರಿಟೇಬಲ್ ಟ್ರಸ್ಟ್ ಈ ಯೋಜನೆಗೆ ಕೆಲಸ ಮಾಡುತ್ತಿದೆ ಎಂದು ಹೈಕೋರ್ಟ್​ಗೆ ಈಶಾ ಫೌಂಡೇಶನ್ ಮಾಹಿತಿ ನೀಡಿದೆ.

ಕಾವೇರಿ ನದಿ ಸಂರಕ್ಷಣೆಗಾಗಿ ಗಿಡಗಳನ್ನು ನೆಡುವುದಾಗಿ ಹೇಳಿರುವ ಈಶಾ ಫೌಂಡೇಶನ್, ಅದಕ್ಕಾಗಿ ಸಾರ್ವಜನಿಕರಿಂದ ಕೋಟ್ಯಾಂತರ ರೂಪಾಯಿ ಹಣ ಸಂಗ್ರಹಿಸುತ್ತಿದೆ. ಈಶಾ ಫೌಂಡೇಶನ್​ನ ಈ ಕ್ರಮ ಕಾನೂನು ಬಾಹಿರ ಎಂದು ಆರೋಪಿಸಿರುವ ನಗರದ ವಕೀಲ ಎ.ವಿ ಅಮರನಾಥ್, ಸಾರ್ವಜನಿಕರಿಂದ ಹಣ ಸಂಗ್ರಹಿಸದಂತೆ ಹಾಗೂ ಈ ಕುರಿತು ಅಗತ್ಯ ಕ್ರಮ ಜರುಗಿಸುವಂತೆ ಕೋರಿ ಹೈಕೋರ್ಟ್​ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.

ಈ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ನೇತೃತ್ವದ ವಿಭಾಗೀಯ ಪೀಠ ಸೋಮವಾರ ವಿಚಾರಣೆ ನಡೆಸಿತು. ಈ ವೇಳೆ ಈಶಾ ಫೌಂಡೇಶನ್ ಪರ ವಕೀಲರು ಪೀಠಕ್ಕೆ ಮೆಮೋ ಸಲ್ಲಿಸಿ, ಕಾವೇರಿ ಕೂಗು ಯೋಜನೆ ಅಡಿ ಹಣ ಸಂಗ್ರಹಿಸುವ ಮತ್ತು ಆ ಹಣವನ್ನು ಮರ ಬೆಳೆಸುವ ಕಾರ್ಯಕ್ಕೆ ಬಳಸುವ ಕೆಲಸವನ್ನು ಈಶಾ ಔಟ್ ರೀಚ್ ಚಾರಿಟೇಬಲ್ ಟ್ರಸ್ಟ್ ಮಾಡುತ್ತಿದೆ. ಈಶಾ ಫೌಂಡೇಶನ್ ಕೇವಲ ಆಧ್ಯಾತ್ಮ ಮತ್ತು ಯೋಗಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದೆ. ಈ ವ್ಯವಹಾರದಲ್ಲಿ ಈಶಾ ಫೌಂಡೇಶನ್ ಪಾತ್ರವಿಲ್ಲ. ಹೀಗಾಗಿ ಈಶಾ ಔಟ್ ರೀಚ್ ಪ್ರತಿವಾದಿಯನ್ನಾಗಿಸಬಹುದು ಎಂದು ಮಾಹಿತಿ ನೀಡಿದರು. ವಕೀಲರ ಹೇಳಿಕೆ ದಾಖಲಿಸಿಕೊಂಡ ಪೀಠ ವಿಚಾರಣೆ ಮುಂದೂಡಿತು.

ಪ್ರಕರಣದ ಹಿನ್ನೆಲೆ:

ಕಾವೇರಿ ಕೂಗು ಅಭಿಯಾನದ ಅಡಿ, ಈಶಾ ಫೌಂಡೇಶನ್ನಿನ ಸಂಸ್ಥಾಪಕ ಸದ್ಗುರು ಜಗ್ಗಿ ವಾಸುದೇವ ಅವರು ತಲಕಾವೇರಿಯಿಂದ ತಿರುವರೂರುವರೆಗೆ 639 ಕಿ.ಮೀ ದೂರದ ವರೆಗೆ 253 ಕೋಟಿ ಗಿಡಗಳನ್ನು ನದಿ ತಪ್ಪಲಿನ ಉದ್ದಕ್ಕೂ ನೆಟ್ಟು ಬೆಳೆಸಲು ಯೋಜನೆ ರೂಪಿಸಿದ್ದಾರೆ. ಈ ಕಾರ್ಯದಲ್ಲಿ ರೈತರನ್ನು ಭಾಗಿಯಾಗುವಂತೆ ಮಾಡಲು ಸಹಾಯ ಧನದ ಅಗತ್ಯವಿದ್ದು, ಅದಕ್ಕಾಗಿ ಸಾರ್ವಜನಿಕರಿಂದ ಪ್ರತಿ ಗಿಡಕ್ಕೆ 42 ರೂಪಾಯಿಯಂತೆ ಸಂಗ್ರಹಿಸುತ್ತಿದೆ. ಈ ಹಣ ಸಂಗ್ರಹಣೆಯನ್ನು ಅರ್ಜಿದಾರರು ಅಕ್ರಮವೆಂದು ದೂರಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

ABOUT THE AUTHOR

...view details