ಬೆಂಗಳೂರು :ಇಕ್ಬಾಲ್ ಅನ್ಸಾರಿ ಅವರೇ ನೀವು ಇಷ್ಟು ಬೇಗ ಹಳೆಯದನ್ನೆಲ್ಲ ಮರೆತರೆ ಹೇಗೆ?. ನಿಮ್ಮ ಹುಳುಕು ಮುಚ್ಚಿಕೊಳ್ಳಲು ಹೆಚ್ ಡಿ ಕುಮಾರಸ್ವಾಮಿ ಅವರ ಮೇಲೆ ಗೂಬೆ ಕೂರಿಸುವ ವ್ಯರ್ಥ ಪ್ರಯತ್ನ ಬೇಡ ಎಂದು ಮಾಜಿ ವಿಧಾನ ಪರಿಷತ್ ಸದಸ್ಯ ಟಿ ಎ ಶರವಣ ತಿರುಗೇಟು ನೀಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಕೊಪ್ಪಳದಲ್ಲಿ ನೀವು ಎಷ್ಟು ಕೊನೆಯಲ್ಲಿದ್ದಿರಿ?. ಕಾಂಗ್ರೆಸ್'ನಲ್ಲಿ ನಿಮ್ಮ ಸ್ಥಾನ ಎಷ್ಟು ಕೊನೆಯಲ್ಲಿತ್ತು ಎನ್ನುವುದು ನಿಮಗಿಂತ ಕೊಪ್ಪಳದ ಜನತೆಗೆ ಚೆನ್ನಾಗಿ ಗೊತ್ತಿದೆ. ಜೆಡಿಎಸ್ ಅಭ್ಯರ್ಥಿ ಆಗಿದ್ದಾಗ ಎರಡು ಸಲ ಗೆದ್ದಿರಿ. ಅದೇ ಕಾಂಗ್ರೆಸ್ ಪಕ್ಷದಲ್ಲಿ ಎರಡು ಸಲ ಅಭ್ಯರ್ಥಿ ಆದಾಗ ಮಕಾಡೆ ಮಲಗಿದ್ದು ಯಾಕೆ? ಎಂದು ಪ್ರಶ್ನಿಸಿದ್ದಾರೆ.