ಕರ್ನಾಟಕ

karnataka

ETV Bharat / city

ಪುಟ್ಟ ಮಗುವಿದ್ರೂ ಮಾಜಿ ಸಿಎಂ ಬಿಎಸ್​ವೈ ಮೊಮ್ಮಗಳು ಆತ್ಮಹತ್ಯೆ ಮಾಡಿಕೊಂಡಿದ್ಯಾಕೆ? - ಸೌಂದರ್ಯ ಆತ್ಮಹತ್ಯೆಗೆ ಶರಣು

BSY granddaughter commits suicide : ಇಂದು ಬೆಳಗ್ಗೆ 8 ಗಂಟೆಗೆ ಸೌಂದರ್ಯ ಪತಿ ಡಾ. ನೀರಜ್ ಕೆಲಸಕ್ಕೆ ಹೋಗಿದ್ರು. ಆ ವೇಳೆ ಮನೆಯಲ್ಲಿ ಸೌಂದರ್ಯ ಹಾಗೂ 9 ತಿಂಗಳ ಮಗುವಿನೊಂದಿಗೆ ಇದ್ದರು. ಈ ವೇಳೆ ಮನೆ ಕೆಲಸದವರು ಸಹ ಇದ್ದರು..

BSY granddaughter commits suicide
BSY granddaughter commits suicide

By

Published : Jan 28, 2022, 2:54 PM IST

Updated : Jan 28, 2022, 3:24 PM IST

ಬೆಂಗಳೂರು :ಮಾಜಿ ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ ಅವರ ಮೊಮ್ಮಗಳು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ವಸಂತನಗರದಲ್ಲಿ ನಡೆದಿದೆ. ಕಳೆದ ಮೂರು ವರ್ಷಗಳ ಹಿಂದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಸೌಂದರ್ಯ ಇದೀಗ ದಿಢೀರ್​ ಆಗಿ ಸಾವಿನ ಕದ ತಟ್ಟಿದ್ದಾರೆ.

ಕಳೆದ ಕೆಲ ತಿಂಗಳ ಹಿಂದೆ ಮುದ್ದಾದ ಮಗುವಿಗೆ ಜನ್ಮ ನೀಡಿದ್ದ ಸೌಂದರ್ಯ(30) ಆತ್ಮಹತ್ಯೆ ಮಾಡಿಕೊಂಡಿರುವುದು ಅನೇಕ ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ.

ಮಾಜಿ ಸಿಎಂ ಬಿಎಸ್​ವೈ ಅವರ ಎರಡನೇ ಪುತ್ರಿ ಪದ್ಮಾವತಿ ಅವರ ಮಗಳು ಸೌಂದರ್ಯ ವಸಂತನಗರದಲ್ಲಿರುವ ಮೌಂಟ್ ಕಾರ್ಮೆಲ್ ಕಾಲೇಜು ಬಳಿಯ ಫ್ಲ್ಯಾಟ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸೌಂದರ್ಯ ಖಾಸಗಿ ಆಸ್ಪತ್ರೆಯಲ್ಲಿ ವೈದ್ಯೆಯಾಗಿದ್ದರು. 2018ರಲ್ಲಿ ವೈದ್ಯ ಡಾ. ನೀರಜ್‌ ಅವರನ್ನು ಮದುವೆಯಾಗಿದ್ದರು.

ಸೌಂದರ್ಯ ಪತಿ ನೀರಜ್ ಬೆಳಗ್ಗೆ 8 ಗಂಟೆಗೆ ಕೆಲಸಕ್ಕೆ ಹೋಗಿದ್ದರು. ಇದರ ಬೆನ್ನಲ್ಲೇ ಸೌಂದರ್ಯ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನಾ ಸ್ಥಳಕ್ಕೆ ಈಗಾಗಲೇ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದು, ಮೃತದೇಹವನ್ನ ಈಗಾಗಲೇ ಬೆಂಗಳೂರಿನ ಬೌರಿಂಗ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

ಇದನ್ನೂ ಓದಿರಿ:ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ಮೊಮ್ಮಗಳು ಸೌಂದರ್ಯ ಆತ್ಮಹತ್ಯೆ

ಅಪಾರ್ಟ್​ಮೆಂಟ್​ನಲ್ಲಿ ಕೆಲಸ ಮಾಡುವ ವ್ಯಕ್ತಿ ಹೇಳಿದ್ದೇನು?:ಇಂದು ಬೆಳಗ್ಗೆ 8 ಗಂಟೆಗೆ ಸೌಂದರ್ಯ ಪತಿ ಡಾ. ನೀರಜ್ ಕೆಲಸಕ್ಕೆ ಹೋಗಿದ್ರು. ಆ ವೇಳೆ ಮನೆಯಲ್ಲಿ ಸೌಂದರ್ಯ ಹಾಗೂ 9 ತಿಂಗಳ ಮಗುವಿನೊಂದಿಗೆ ಇದ್ದರು. ಈ ವೇಳೆ ಮನೆ ಕೆಲಸದವರು ಸಹ ಇದ್ದರು. ಈ ಸಮಯದಲ್ಲಿ ರೂಂಗೆ ತೆರಳಿದ ಸೌಂದರ್ಯ ನೇಣು ಹಾಕಿಕೊಂಡಿದ್ದಾರೆ. ತಿಂಡಿ ನೀಡಲು ಕೆಲಸದಾಕೆ ರೂಂಗೆ ಹೋದಾಗ ಪ್ರಕರಣ ಬೆಳಕಿಗೆ ಬಂದಿದೆ. ಅವರು ಈ ಅಪಾರ್ಟ್​ಮೆಂಟ್​ಗೆ ಬಂದು ಎರಡು ವರ್ಷಗಳಾಗಿದೆ ಎಂದು ತಿಳಿಸಿದ್ದಾರೆ.

ಜಾಹೀರಾತು : ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

Last Updated : Jan 28, 2022, 3:24 PM IST

ABOUT THE AUTHOR

...view details